
ಮುಂಬೈ[ಸೆ. 30] ಹಿಂಜರಿಕೆ ಇಲ್ಲದೆ ಮುಕ್ತವಾಗಿ ಮಾತನಾಡುವ ಕಂಗನಾ ರಣಾವತ್ ಈ ಬಾರಿ ಸೆಕ್ಸ್ ಬಗ್ಗೆ ಬಿಚ್ಚು ಮನಸ್ಸಿನಿಂದ ಮಾತನಾಡಿದ್ದಾರೆ. ನಾನು ಲೈಂಗಿಕವಾಗಿ ಆಕ್ಟೀವ್ ಆಗಿದ್ದನ್ನು ಕಂಡ ನನ್ನ ಪಾಲಕರು ಶಾಕ್ ಗೆ ಒಳಗಾಗಿದ್ದರು ಎಂದು ಹೇಳಿದ್ದಾರೆ.
ಸೆಕ್ಸ್ ಗೆ ಪಾಲಕರು ಸಪೋರ್ಟ್ ಮಾಡಬೇಕು..ಮಕ್ಕಳಿಗೆ ಲೈಂಗಿಕ ಚಟುವಟಿಕೆ ಬಗ್ಗೆ ತಿಳಿವಳಿಕೆ ಇದ್ದರೆ ಪಾಲಕರು ಅದಕ್ಕೆ ಹೆಮ್ಮೆ ಪಡಬೇಕು ಎಂದು ಕಂಗನಾ ಹೇಳಿದ್ದಾರೆ.
ಎಷ್ಟೇ ವಿವಾದಗಳಲ್ಲಿ ಸಿಕ್ಕಿಕೊಂಡರೂ ಸಹ ಕಂಗನಾ ಕೋಟ್ಯಂತರ ಮಂದಿಗೆ ಈಗಲೂ ರೋಲ್ ಮಾಡೆಲ್ ಆಗಿದ್ದಾರೆ. ಇದೀಗ ಕಂಗನಾ ನವದೆಹಲಿಯಲ್ಲಿ ನಡೆದ ಮೈಂಡ್ ರಾಕ್ಸ್ ಎಂಬ ಕಾರ್ಯಕ್ರಮದಲ್ಲಿ ಸೆಕ್ಸ್ ವಿಚಾರವನ್ನು ಮುಕ್ತವಾಗಿ ಮಾತನಾಡಿದ್ದಾರೆ.
ಊಟ ಹಾಗೂ ಸ್ನಾನದಂತೆ ಸೆಕ್ಸ್ ಕೂಡ ದೈನಂದಿನ ಜೀವನದ ಅಂಗ
ಪ್ರತಿಯೊಬ್ಬರ ಜೀವನದಲ್ಲಿ ಸೆಕ್ಸ್ ಎಂಬುದು ತುಂಬಾ ಮಹತ್ವವಾದದ್ದು. ಸೆಕ್ಸ್ ಮಾಡಬೇಕು ಅನ್ನಿಸಿದರೆ ಮಾಡಿಬಿಡಬೇಕು. ಒಬ್ಬ ವ್ಯಕ್ತಿಯನ್ನು ತೋರಿಸಿ ಮದುವೆಯಾಗಬೇಕು ಎಂದು ತಂದೆತಾಯಿ ಹೇಳುತ್ತಾರೆ. ನಮಗೂ ಇಷ್ಟ ಇದ್ದರೆ ಆ ವ್ಯಕ್ತಿ ಬಗ್ಗೆ ಫೀಲಿಂಗ್ಸ್ ಬೆಳೆಸಿಕೊಳ್ಳುತ್ತೇವೆ. ನಾನು ಸೆಕ್ಸ್ ವಿಚಾರದಲ್ಲಿ ತುಂಬಾ ಆಕ್ಟೀವ್ ಆಗಿ ಇರುತ್ತೀನಿ ಎಂದು ನನ್ನ ತಂದೆ ತಾಯಿ ಶಾಕ್ ಆದರು. ಆದರೆ ಸೆಕ್ಸ್ ಎಂಬುದು ಒಂದು ಜವಾಬ್ದಾರಿ ಎಂಬ ಫೀಲ್ ಇರಬೇಕು. ಸೆಕ್ಸ್‌ನಲ್ಲಿ ಭಾಗಿಯಾಗು ಎಂದು ತಂದೆತಾಯಿಯೇ ಸಪೋರ್ಟ್ ಮಾಡಬೇಕು ಎಂದು ಹೇಳಿದ್ದಾರೆ.
ನನಗೆ 17 ವರ್ಷವಾಗಿದ್ದಾಗ ನಾನು ಒಬ್ಬ ಪಂಜಾಬಿ ಹುಡುಗನನ್ನು ಇಷ್ಟಪಟ್ಟಿದ್ದೆ. ಆದರೆ ಆತ ನನ್ನನ್ನು ಪುಟ್ಟ ಹುಡುಗಿ ಎಂದು ಕರೆಯುತ್ತಿದ್ದ. ಹೇಗೋ ಆತನಿಗೆ ನನ್ನ ಪ್ರೀತಿಯ ವಿಚಾರ ತಿಳಿಸಿದೆ. ಅವನು ಅಷ್ಟೇ ನನ್ನನ್ನು ಇಷ್ಟಪಟ್ಟ. ಸ್ವಲ್ಪ ಕಾಲ ಇಬ್ಬರೂ ರಿಲೇಷನ್‌ಶಿಪ್‌ನಲ್ಲಿ ಇದ್ದೆವು. ಮೊದಲ ಸಲ ವ್ಯಕ್ತಿಯೊಬ್ಬ ಚುಂಬಿಸಿದಾಗ ತುಂಬಾ ಒತ್ತಡ ಆಗಿತ್ತು ಎಂಬ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.