‘ವಿಷ್ಣು ಸರ್ಕಲ್’ನಲ್ಲಿ ಜಾನ್ವಿ ಜ್ಯೋತಿ ಜೊತೆ ಜಗ್ಗೇಶ್ ಪುತ್ರ!

Published : Sep 04, 2019, 10:31 AM IST
‘ವಿಷ್ಣು ಸರ್ಕಲ್’ನಲ್ಲಿ ಜಾನ್ವಿ ಜ್ಯೋತಿ ಜೊತೆ ಜಗ್ಗೇಶ್ ಪುತ್ರ!

ಸಾರಾಂಶ

ಜಗ್ಗೇಶ್ ಪುತ್ರ ಗುರು ಜಗ್ಗೇಶ್ ಅಭಿನಯದ ‘ವಿಷ್ಣು ಸರ್ಕಲ್’ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಹೆಸರೇ ಹೇಳುವ ಹಾಗೆ ಇದು ನಟ ವಿಷ್ಣುವರ್ಧನ್ ಅಭಿಮಾನಿಯೊಬ್ಬನ ಕತೆ. ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಸಾಕಷ್ಟು ಸದ್ದು ಮಾಡಿದೆ.  

ವಿಷ್ಣು ಅಭಿಮಾನಿಯ ಮೂಲಕ ವಿಷ್ಣುವರ್ಧನ್ ಅವರ ಆದರ್ಶಗಳನ್ನು ಹೇಳುವ ಚಿತ್ರವಂತೆ. ಆದರೂ ಇದು ನಾಲ್ಕು ಪ್ರೇಮ ಕತೆಗಳಿರುವ ಚಿತ್ರ ಎನ್ನುವುದು ಕುತೂಹಲದ ಸಂಗತಿ. ಹಾಗಾಗಿಯೇ ಇಲ್ಲಿ ಕಥಾ ನಾಯಕ ಗುರು ಜಗ್ಗೇಶ್ ಅವರಿಗ  ಇಲ್ಲಿ ಮೂವರು ನಾಯಕಿಯರಿದ್ದಾರೆ. ಅವರಲ್ಲಿ ಡಾ.ಜಾನ್ವಿ ಜ್ಯೋತಿ ಕೂಡ ಒಬ್ಬರು.

ಜಗ್ಗೇಶ್ ಹೇಳಿದ ಮಾತನ್ನು ಪ್ರೂವ್ ಮಾಡಿ ತೊಡೆ ತಟ್ಟಿದ ಡಿ-ಬಾಸ್!

ಈಗಾಗಲೇ ಅವರು ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರೂ, ನಟನೆಗೆ ಹೆಚ್ಚು ಅವಕಾಶ ಇರುವಂತಹ ಚಿತ್ರದಲ್ಲಿ ಇದೇ ಮೊದಲು ಕಾಣಿಸಿಕೊಳ್ಳುತ್ತಿದ್ದೇನೆ ಎನ್ನುವ ಖುಷಿಯಲ್ಲಿದ್ದಾರೆ. ಒಂದೆಡೆ ಕತೆ, ಮತ್ತೊಂದೆಡೆ ಪಾತ್ರವೇ ಅದಕ್ಕೆ ಕಾರಣ ಎನ್ನುತ್ತಾರೆ ಜಾನ್ವಿ ಜ್ಯೋತಿ.

ಚಿತ್ರ ವಿಮರ್ಶೆ: ಕೆಂಪೇಗೌಡ 2

‘ವಿಷ್ಣು ವರ್ಧನ್ ಅವರ ಆದರ್ಶಗಳನ್ನು ಹೇಳುವ ಸಿನಿಮಾ ಎನ್ನುವುದು ಒಂದೆಡೆ ಖುಷಿ ತಂದಿದ್ದರೆ, ಮತ್ತೊಂದೆಡೆ ನಟನೆಗೆ ಹೆಚ್ಚು ಅವಕಾಶ ಇರುವಂತಹ ಪಾತ್ರವೇ ಸಿಕ್ಕಿದೆ. ಚಿತ್ರದ ಮೊದಲಾರ್ಧ ಮತ್ತು ಕ್ಲೈಮ್ಯಾಕ್ಸ್ ನಲ್ಲಿ ಕಾಣಿಸಿಕೊಳ್ಳಲು ಹೆಚ್ಚು ಜಾಗ ಸಿಕ್ಕಿದೆ. ಗುರಿ ಸಾಧನೆಯೇ ಮುಖ್ಯ, ಆಮೇಲೆ ವೈಯಕ್ತಿಕ ಬದುಕು ಎನ್ನುವ ಸ್ವಭಾವದವಳು ಆ ಹುಡುಗಿ. ನಾಯಕ ಸಹವಾಸದಲ್ಲಿ ಆಕೆ ಪ್ರೀತಿಯಲ್ಲಿ ಬೀಳುತ್ತಾಳೆನ್ನುವುದು ನಿಜ, ಆದರೆ ಆಕೆಗೆ ವೈಯಕ್ತಿಕ ಬದುಕಿಗಿಂತ ಗುರಿ ಸಾಧನೆಯೇ ಮುಖ್ಯವಾದಾಗ, ಆಕೆ ಆ ಪ್ರೀತಿಯನ್ನು ಏನು ಮಾಡುತ್ತಾಳೆ ಎನ್ನುವುದು ಚಿತ್ರದಲ್ಲಿನ ನನ್ನ ಪಾತ್ರದ ಸಸ್ಪೆನ್ಸ್ ಎಳೆ’ ಎನ್ನುತ್ತಾರೆ ಜಾನ್ವಿ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?