#MeToo ನಂತರ ಕಪಟ ನಾಟಕ ಸೂತ್ರಧಾರಿಯಾದ್ರಾ ಸಂಗೀತಾ ಭಟ್?

Published : Sep 04, 2019, 09:48 AM IST
#MeToo ನಂತರ ಕಪಟ ನಾಟಕ ಸೂತ್ರಧಾರಿಯಾದ್ರಾ ಸಂಗೀತಾ ಭಟ್?

ಸಾರಾಂಶ

ನಟಿ ಸಂಗೀತಾ ಭಟ್ ಚಿತ್ರವೊಂದಕ್ಕೆ ಸದ್ದಿಲ್ಲದೆ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಈ ಚಿತ್ರದ ಹೆಸರು ‘ಕಪಟ ನಾಟಕ ಪಾತ್ರಧಾರಿ’ ಎಂಬುದು. 

ಈ ಚಿತ್ರದ ನಿರ್ದೇಶಕ ಕ್ರಿಶ್. ಇಲ್ಲಿ ಸಂಗೀತಾ ಭಟ್ ನಾಯಕಿ. ಬಾಲು ನಾಗೇಂದ್ರ ನಾಯಕ. ಮೀಟೂ ಆರೋಪದಿಂದ ಸಾಕಷ್ಟು ವಿವಾದ- ಸುದ್ದಿಗೆ ಕಾರಣವಾದ ಸಂಗೀತಾ ಭಟ್ ಅವರ ಕೊನೆಯ ಸಿನಿಮಾ ಎಂಬುದು
ಸದ್ಯದ ಮಾಹಿತಿ.

#MeToo ನಂತರ ಸಂಗೀತಾ ಭಟ್ ಮದ್ವೆ ಫೋಟೋ ರಿವೀಲ್ !

ಶೂಟಿಂಗ್ ಮುಗಿಸಿರುವ ಈ ಚಿತ್ರ ನಾಯಕಿ ಇಲ್ಲದೆ ಪ್ರಚಾರ ಹಾಗೂ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ವೇಣು ಹಸ್ರಾಳಿ ಬರೆದಿರುವ ‘ಯಾಕೆ ಅಂತ ಗೊತ್ತಿಲ್ಲ ಕಣ್ರೀ ನನ್ನನ್ನು ನೋಡಿ ನಕ್ಬುಟ್ಳು ಸುಂದ್ರಿ’ ಎನ್ನುವ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಗಿದ್ದು, ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಯುಎಸ್‌ಎನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಗಿರೀಶ್ ಕುಮಾರ್ ಕಲ್ಲೇಶಾಚಾರ್ ಕೊಟ್ಟ ಕಾನ್ಸೆಪ್ಟ್ ಅನ್ನು ಬಳಸಿಕೊಂಡು ನಿರ್ದೇಶಕರು ಅಮೆರಿಕದಲ್ಲೇ ಹಾಡಿನ ಲಿರಿಕಲ್ ಕಂಪೋಸ್ ಮಾಡಿರುವುದು ವಿಶೇಷ.

#MeToo ನಂತರ ಕಾಣೆಯಾಗಿದ್ದ ನಟಿ ಸಂಗೀತಾ ಭಟ್ ಜರ್ಮನಿಯಲ್ಲಿ ಮೋಜು ಮಸ್ತಿ!

ಸಂಗೀತಾ ಭಟ್ ಮತ್ತೆ ಬರ್ತಾರೆಯೇ?: ಮೀಟೂ ವಿವಾದದ ನಂತರ ಸಂಗೀತಾ ಭಟ್ ಚಿತ್ರರಂಗದ ಕಡೆಗೆ ಮುಖ ಮಾಡಲಿಲ್ಲ. ‘ಕಪಟನಾಟಕ ಪಾತ್ರಧಾರಿ’ ಚಿತ್ರಕ್ಕೆ ಶೂಟಿಂಗ್ ಸದ್ದಿಲ್ಲದೆ ಮುಗಿಸಿದ್ದಾರಂತೆ. ಈ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಬರುತ್ತಾರೆಯೇ ಎಂದರೆ ‘ಈ ಚಿತ್ರಕ್ಕೆ ಶೂಟಿಂಗ್ ಮುಗಿಸಿ ಸೈಲೆಂಟಾಗಿ ಸಂಗೀತಾ ಭಟ್ ಜರ್ಮನ್ ಸೇರಿಕೊಂಡಿದ್ದಾರೆ. ಆನ್ ಲೈನ್ ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಚಿತ್ರಕ್ಕೆ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ. ಆ ಮೂಲಕ ಮತ್ತೆ ಅವರು ಚಿತ್ರರಂಗಕ್ಕೆ ಬರುತ್ತಾರೆ ಎನ್ನುವ ಬಗ್ಗೆ ಗ್ಯಾರಂಟಿ ಇಲ್ಲ’ ಎಂಬುದು ಚಿತ್ರತಂಡ ಕೊಡುವ ಮಾಹಿತಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಯನಿಗೆ ಧುರಂಧರ್ ಬಿಗ್ ಸವಾಲ್! ಕನ್ನಡದಲ್ಲೂ ಬರಲಿದೆ ಧುರಂಧರ್-2, ಟಾಕ್ಸಿಕ್ ರಿಲೀಸ್ ಮುಂದೂಡಿಕೆ?
Amruthadhaare Serial: ಆ ಹಿಟ್ ಧಾರಾವಾಹಿ ಥರ ಚಿಕ್ಕ ವಯಸ್ಸಿನ ಹುಡುಗನನ್ನೇ ಮಲ್ಲಿ ಮದುವೆ ಆಗ್ತಾಳಾ?