ಅನುಕರಣೆ ಯಶಸ್ಸಲ್ಲ ಹೆಚ್ಚು ದಿನ ಬಾಳಲ್ಲ: ರಾನೂ ಬಗ್ಗೆ ಲತಾ

Published : Sep 04, 2019, 10:09 AM IST
ಅನುಕರಣೆ ಯಶಸ್ಸಲ್ಲ ಹೆಚ್ಚು ದಿನ ಬಾಳಲ್ಲ: ರಾನೂ ಬಗ್ಗೆ ಲತಾ

ಸಾರಾಂಶ

ಶೋರ್ ಸಿನಿಮಾದ ಲತಾ ಮಂಗೇಶ್ಕರ್ ಹಿಟ್ ಹಾಡು ಏಕ್ ಪ್ಯಾರ್ ಕ ನಗ್ಮಾ ಹೈ’ ಹಾಡು ಹೇಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆದವರು ರಾನು ಮಂದಾಲ್. ಇವರ ಬಗ್ಗೆ ಲತಾ ಮಂಗೇಶ್ಕರ್ ಮಾತನಾಡಿದ್ದಾರೆ. 

ಮುಂಬೈ (ಸೆ. 04): ರೈಲ್ವೇ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ವೇಳೆ ಏಕ್‌ ಪ್ಯಾರ್‌ ಕಾ ನಗ್ಮಾ ಹೈ ಎಂದು ಥೇಟ್‌ ತನ್ನಂತೆ ಹಾಡಿ, ರಾತ್ರೋರಾತ್ರಿ ಸೂಪರ್‌ ಸ್ಟಾರ್‌ ಆಗಿರುವ ರಾನು ಮೊಂಡಲ್‌ ಪ್ರಸಿದ್ಧಿ ಕೊನೆವರೆಗೂ ನಿಲ್ಲುವುದಿಲ್ಲ ಎಂದು ಲತಾ ಮಂಗೇಶ್ಕರ್‌ ಹೇಳಿದ್ದಾರೆ.

ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ರಾನು ಮಂದಾಲ್; ಯಾರೀಕೆ?

ನನ್ನ ಹೆಸರು ಹಾಗೂ ಕೆಲಸದಿಂದ ಯಾರಿಗಾದರೂ ಒಳ್ಳೆಯದಾದರೆ ಅದು ನನ್ನ ಅದೃಷ್ಠ. ಆದರೆ ಅನುಕರಣೆ ವಿಶ್ವಾಸಾರ್ಹವೂ ಅಲ್ಲ, ಯಶಸ್ಸಿನ ಮೆಟ್ಟಿಲೂ ಅಲ್ಲ. ಹಲವು ಮಕ್ಕಳು ನನ್ನ ಹಾಡುಗಳನ್ನು ಚೆನ್ನಾಗಿ ಹಾಡಿದ್ದಾರೆ. ಆದರೆ ಅವರೆಲ್ಲಾ ಎಲ್ಲಿ ಹೋದರು? ನನಗೆ ಸುನಿಧಿ ಚೌಹಾಣ್‌ ಹಾಗೂ ಶ್ರೇಯಾ ಘೋಷಾಲ್‌ ಬಿಟ್ಟರೆ ಬೇರೆ ಯಾರೂ ಗೊತ್ತಿಲ್ಲ. ಗಾಯಕರು ಸ್ವಂತಿಕೆ ಉಳಿಸಿಕೊಳ್ಳಬೇಕು. ಅದಕ್ಕೆ ನನ್ನ ಸಹೋದರಿ ಆಶಾ ಭೋಸ್ಲೆ ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
ಈಗ್ಲೇ ದರ್ಶನ್ 'ಡೆವಿಲ್'ಗೆ ಯಾಕೆ ಟೆನ್ಷನ್..? ನರ್ತಕಿ ಚಿತ್ರಮಂದಿರದ ಮೇಲೆ ಬೇರೆ ಸ್ಟಾರ್‌ಗಳ ಕಣ್ಣು ಬಿತ್ತಾ?