
ಕನ್ನಡ ಚಿತ್ರರಂಗದ ನಟ ಅಜಯ್ ರಾವ್ (Ajay Rao) ಹಾಗೂ ಪತ್ನಿ ಸ್ವಪ್ನ ರಾವ್ ಮಧ್ಯೆ ದಾಂಪತ್ಯದಲ್ಲಿ ಬಿರುಕು ಮೂಡಿದೆ. 2014ರಲ್ಲಿ ಪ್ರೀತಿಸಿ ಮದುವೆ ಆಗಿದ್ದ ಈ ಜೋಡಿ ಇದೀಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಜಯ್ ರಾವ್ ಹಾಗೂ ಸ್ವಪ್ನ ರಾವ್ ಈಗಾಗಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದು, ಈ ಕೇಸ್ ನಿಜವಾಗಿಯೂ ಯಾವತ್ತು ದಾಖಲಾಗಿದೆ, ಎಂದಿನಿಂದ ಈ ದಂಪತಿಗಳ ಮಧ್ಯೆ ಬಿರುಕು ಮೂಡಿದೆ? ಈ ಎಲ್ಲಾ ಸಂಗತಿಗಳೂ ಇನ್ಮುಂದೆ ಬಯಲಾಗಬೇಕಿದೆ.
ನಟ ಅಜಯ್ ರಾವ್ ಅವರು ತಮ್ಮ ಬಗ್ಗೆ ಹೊರಬಿದ್ದ ಸುದ್ದಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ನನ್ನ ಪರ್ಸನಲ್ ವಿಷ್ಯ, ನಾವು ಇದನ್ನ ಸಾಲ್ವ್ ಮಾಡಿಕೊಳ್ತೀವಿ.. ನಾನು ನನ್ನದೇ ಅದ ಡಿಗ್ನಿಫ್ಯ್ಡ್ ರೀತಿಯಲ್ಲಿ ಇದನ್ನ ಹ್ಯಾಂಡಲ್ ಮಾಡಿ ಸಾಲ್ವ್ ಮಾಡಿಕೊಳ್ತೀನಿ. ನಾನು ಈಗ ಈ ಬಗ್ಗೆ ರಿಯಾಕ್ಟ್ ಮಾಡಿ ನನ್ನ ಮಗಳ ಭವಿಷ್ಯಕ್ಕೆ ಇದು ತೊಂದರೆ ಆಗೋದು ಬೇಡ. ನಮ್ಮ ಪ್ರೈವಸಿಯನ್ನ ಗೌರವಿಸಿ' ಎಂದು ಅಜಯ್ ರಾವ್ ಹೇಳಿದ್ದಾರೆ.
ಕಳೆದ ವರ್ಷವಷ್ಟೇ ಈ ಜೋಡಿ ನೂತನ ಗೃಹ ಪ್ರವೇಶ ಮಾಡಿ, ಇಡೀ ಚಿತ್ರರಂಗವೂ ಸೇರಿದಂತೆ, ಬಂಧು-ಬಾಧವರೊಂದಿಗೆ ಖುಚಿ ಹಂಚಿಕೊಂಡಿದ್ದರು. ಆದರೆ, ಇದೀಗ ಈ ಜೋಡಿ ಬೇರೆಯಾಗಲು ಹೊರಟಿದ್ದಾರಾ? ಈಗಾಗಲೇ ಡಿವೋರ್ಸ್ಗೆ ಅರ್ಜಿ ಸಲ್ಲಿಸಿರೋ ಕಾರಣಕ್ಕೆ ‘ಹೌದು’ ಪರಸ್ಪರ ನಿರ್ಧಾರ ಮಾಡಿಯೇ ಬೇರೆ ಆಗಲು ಈ ದಂಪತಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
'ಎಕ್ಸ್‌ಕ್ಯೂಸ್ ಮಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ಅಜಯ್ ರಾವ್ ಅವರು ಬಳಿಕ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ಪೂಜಾ ಗಾಧಿಯ ಜೊತೆ ‘ತಾಜ್ ಮಹಲ್’ ಚಿತ್ರದಲ್ಲಿ ಸಹ ಅಜಯ್ ರಾವ್ ಅವರು ನಾಯಕನಟರಾಗಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿದೆ. ಕೃಷ್ಣ ಸೇರಿದಂತೆ ಅಜಯ್ ರಾವ್ ಅಚರ ನಟಿಸಿದ ಕನ್ನಡ ಚಿತ್ರಗಳ ಲಿಸ್ಟ್ ಸಾಕಷ್ಟು ದೊಡ್ಡದಿದೆ. ಇತ್ತೀಚೆಗಷ್ಟೇ ಅಜಯ್ ರಾವ್ ನಿರ್ಮಾಣ ಹಾಗೂ ನಟನೆಯ ‘ಯುದ್ಧಕಾಂಡ’ ಸಿನಿಮಾ ಬಿಡುಗಡೆ ಆಗಿತ್ತು.
ನಟ-ನಿರ್ಮಾಪಕ ಅಜಯ್ ರಾವ್ ಅವರು ಹೆಚ್ಚಾಗಿ ಕೃಷ್ಣ ಹೆಸರಿನ ಸಿನಿಮಾಗಳಲ್ಲಿ ನಟಿಸಿದ್ದರಿಂದ ಅವರಿಗೆ ‘ಕೃಷ್ಣ ಅಜಯ್ ರಾವ್’ ಎಂಬ ಮರುನಾಮಕರಣವೂ ಅನ್‌ಆಫೀಸಿಯಲ್ ಎಂಬಂತೆ ಆಗಿತ್ತು. ಅದೆಷ್ಟೋ ಜನರಿಗೆ ಕೃಷ್ಣ ಆಜಯ್ ರಾವ್ ಎಂದರೇನೇ ಗೊತ್ತಾಗೋದು ಎಂಬಷ್ಟರ ಮಟ್ಟಿಗೆ ನಟ ಅಜಯ್ ರಾವ್ ಅವರು ಕೃಷ್ಣನ ಪಾತ್ರದ ಮೂಲಕ ಪ್ರಸಿದ್ಧರಾಗಿದ್ದಾರೆ. ಇದೀಗ, ದಾಂಪತ್ಯದಲ್ಲಿ ಮೂಡಿದ ಬಿರುಕು ಹಾಗೂ ವಿಚ್ಛೇದನಕ್ಕೆ ಅರ್ಜಿ ಮತ್ತೊಮ್ಮೆ ಸುದ್ದಿಯಲ್ಲಿ ಬೀಳುವಂತೆ ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.