
ಒಂದು ಸಿನಿಮಾ ನಿಲ್ಲುವುದು ಬರಹಗಾರರ ಪಾತ್ರ ರಚನೆ ಮೇಲೆ. ಆ ನಂತರ ಅದನ್ನು ಉತ್ತಮವಾಗಿ ತೆರೆಯ ಮೇಲೆ ತರುವುದು ನಟ-ನಟಿಯರು. ಈಗಿನ ಸಿನಿಮಾಗಳು ಹೆಚ್ಚಾಗಿ ಕಥೆಯಿಂದಾನೆ ಜನರನ್ನು ಗೆಲ್ಲುವುದು. ಈಗ ರೈಟರ್ ಗಳಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿದೆ.
ನಿರ್ದೇಶಕ ರಿಷಬ್ ಶೆಟ್ಟಿ ಮುಂಬರುವ ಚಿತ್ರಗಳಿಗೆ ಬರಹಗಾರರಾಗುವ ಹಂಬಲ ನಿಮಗಿದ್ದಲ್ಲಿ ಈ ಕೆಳಗಿನ ಮೂರು ಪ್ರಶ್ನೆಗಳಿಗೆ ಉತ್ತರ ನೀಡಿ ಕಳುಹಿಸಬೇಕು.
ರಿಷಬ್ ಶೆಟ್ಟಿ ಹೊಸ ಅವತಾರ ‘ಆ್ಯಂಟಗನಿ ಶೆಟ್ಟಿ’!
1] ಅಂತ್ಯ ಸಂಸ್ಕಾರದ (funeral) ಸಮಯದಲ್ಲಿ ನಡೆಯಬಹುದಾದ ಹಾಸ್ಯ ಸನ್ನಿವೇಶವೊಂದನ್ನು ದೃಶ್ಯವಾಗಿ (ಸಂಭಾಷಣೆ ಸಹಿತ), ಎರಡು ಪುಟಗಳಿಗೆ ಮೀರದಂತೆ, ಬರೆಯಿರಿ.
2] ಈ ಕೆಳಗಿನ ಯಾವುದಾದರೂ ಒಂದು ಪಾತ್ರಕ್ಕೆ ಅದರ ಪಾತ್ರ ಚಿತ್ರಣವನ್ನು (Character sketch) ನಿಮ್ಮದೇ ದೃಷ್ಟಿಕೋನದಲ್ಲಿ ಒಂದು ಪುಟಕ್ಕೆ ಮೀರದಂತೆ, ಬರೆಯಿರಿ. - ಅನಂತ ಪದ್ಮನಾಭ ಪಿ. (SHPSK) - ಶೇಖರ (ರಂಗನಾಯಕಿ) - ರತ್ನಕ್ಕ (ಉಳಿದವರು ಕಂಡಂತೆ) - ಕುಸುಮ (ಬೆಲ್ ಬಾಟಮ್)
3] ಒಂದು ವೇಳೆ ‘ಕಿರಿಕ್ ಪಾರ್ಟಿ’ Gangster ಶೈಲಿಯ ಚಿತ್ರವಾಗಿದ್ದರೆ ಅದರ ಕಥೆಯ ಎಳೆಯನ್ನು ಎರಡು ಪುಟಗಳಿಗೆ ವೀರದಂತೆ ಬರೆಯಿರಿ.
ಎಷ್ಟು ಚಂದ ಐತೆ, ಎಂಥಾ ಅಂದ ಐತೆ ರಿಷಬ್ ಶೆಟ್ರ ಶಾಲೆ
ಮೇಲಿರುವ ಮೂರು ಪ್ರಶ್ನೆಗಳಿಗೆ ಉತ್ತರ ನೀಡಿ ಮೇ.23 ರವರೆಗೆ ಸಮಯಾವಕಾಶವಿದೆ. ನಿಮ್ಮ ಉತ್ತರವನ್ನು writersf@gmail.com ಇ-ಮೇಲ್ ಮಾಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.