ರಮೇಶ್ ಅರವಿಂದ್ ಹಳೇ ಲುಕ್‌ಗೆ ಮರಳಿದ್ದಾರೆ. ‘ಝೀ’ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ವೀಕೆಂಡ್ ವಿತ್ ರಮೇಶ್’ ಶೋನಲ್ಲಿ ಇನ್ನು ಮುಂದೆ ಎಂದಿನಂತೆ ಗಡ್ಡ ಇಲ್ಲದೆ ಕಾಣಿಸಿಕೊಳ್ಳಲಿದ್ದಾರೆ.
ಹೊಸ ಅವತಾರದ ರಮೇಶ್ ಅವರನ್ನು‘ಝೀ’ ಕನ್ನಡ ವಾಹಿನಿ ವಿಶೇಷವಾಗಿ ಗುಲಾಬಿ ಹೂಗಳ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದೆ. ಹಾಗೆಯೋ ಅವರ ಗಡ್ಡದ ವಿಷಯವನ್ನು ಸಣ್ಣ ವಿಡಿಯೋ ಮೂಲಕ ಫನ್ನಿಯಾಗಿ ಹಂಚಿಕೊಂಡಿದೆ.
ವಿನಯಾ ಪ್ರಸಾದ್ 7 ವರ್ಷದ ಸಂಸಾರಕ್ಕೆ ಅಸಮಾಧಾನ ತಂದದ್ದು ಇದೊಂದೇ ವಿಚಾರ!
ರಮೇಶ್ ಅರವಿಂದ್ ಯಾವತ್ತಿಗೂ ಗಡ್ಡ ಬಿಟ್ಟು ,ದೇವದಾಸ್ ಥರ ಕಾಣಿಸಿಕೊಂಡವರೇ ಅಲ್ಲ. ಸದಾ ಅವರ ಮುಖದಲ್ಲಿ ನಗು ಕಂಡ ಹಾಗೆಯೇ ಸ್ಮಾರ್ಟ್ ಲುಕ್ ಕೂಡ ನಳನಳಿಸುತ್ತಿತ್ತು. ಆದರೆ ಇತ್ತೀಚೆಗೆ ಅವರು ಗಡ್ಡಧಾರಿ ಆಗಿ ‘ವೀಕೆಂಡ್ ವಿತ್ ರಮೇಶ್’ನಲ್ಲಿ ಕಾಣಿಸಿಕೊಂಡಾಗ ಕಿರುತೆರೆ ವೀಕ್ಷಕರು ಅಚ್ಚರಿ ಪಟ್ಟಿದ್ದರು. ಅದಕ್ಕೆ ಕಾರಣವೂ ಇತ್ತು. ರಮೇಶ್ ಅರವಿಂದ್ ‘ಶಿವಾಜಿ ಸುರತ್ಕಲ್- ಕೇಸ್ ಆಫ್ ರಣಗಿರಿ ರಹಸ್ಯ’ ಹೆಸರಿನ ಸೈಕಾಲಜಿಕಲ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲಿ ಶಿವಾಜಿ ಸುರತ್ಕಲ್ ಡಿಟೆಕ್ಟಿವ್. ಆ ಪಾತ್ರಕ್ಕಾಗಿ ರಮೇಶ್ ಅರವಿಂದ್ ಗಡ್ಡ ಬಿಟ್ಟಿದ್ದರು. ಈಗ ಚಿತ್ರೀಕರಣ ಮುಗಿದಿದೆ. ಗಡ್ಡಕ್ಕೆ ಕತ್ತರಿ ಬಿದ್ದಿದೆ. ಅಂದಹಾಗೆ ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿ ಶ್ರೀಮುರಳಿ.
'ನಾನು ಮಾಡಿದ ದೊಡ್ಡ ತಪ್ಪಿದು': ಪ್ರಕಾಶ್ ಬೆಳವಾಡಿ