ತಮಿಳುನಾಡಿನಲ್ಲಿ ಕನ್ನಡದ ನಟಿಗೆ ಡಾಕ್ಟರೇಟ್!

By Web DeskFirst Published May 16, 2019, 10:37 AM IST
Highlights

ಕಲರ್ ಫುಲ್ ಆ್ಯಂಡ್ ಕ್ರಿಯೇಟಿವ್ ಲುಕ್ ನಲ್ಲಿ ಪೋಷಕ ಪಾತ್ರ ಮಾಡುತ್ತಾ ಮೂರು ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ಈ ನಟಿಗೆ ತಮಿಳು ವಿಶ್ವ ವಿದ್ಯಾಲಯವೊಂದು ಡಾಕ್ಟರೇಟ್ ನೀಡಿ ಗೌರವಿಸಿದೆ.

ಕನ್ನಡ ಚಿತ್ರರಂಗದಿಂದ ಮಡಿವಂತಿಕೆಯನ್ನು ದೂರ ಮಾಡಿ ಇಂದಿಗೂ ತನ್ನದೇ ಸ್ಟೈಲ್ ತನ್ನದೇ ಶೈಲಿಯಲ್ಲಿ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದಿರುವ ನಟಿ ರೇಖಾ ದಾಸ್ ಗೆ ತಮಿಳುನಾಡಿದ ವಿಶ್ವ ವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

'ನಾಲ್ಕು ವರ್ಷ ಕಾದೆ, ಒಳ್ಳೆಯದೇ ಆಯ್ತು'!

 

5000 ಕ್ಕೂ ಹೆಚ್ಚು ನಾಟಕ, 600ಕ್ಕೂ ಅಧಿಕ ಸಿನಿಮಾ ಹಾಗೂ 400 ಧಾರಾವಾಹಿಯಲ್ಲಿ ಅಭಿನಯಿಸಿ ಬಣ್ಣದ ಜಗತ್ತನ್ನೇ ತನ್ನ ಜೀವನವನ್ನಾಗಿಸಿಕೊಂಡು ಬದುಕಿದ ನಟಿ ರೇಖಾ ದಾಸ್. ಜೀವನದಲ್ಲಿ ಎಷ್ಟೋ ಕಷ್ಟ-ನೋವು ದಿನಗಳನ್ನು ದಾಟಿ ಅದೇ ಹಾದಿಯಲ್ಲಿ ಬದುಕು ಸಾಗಿಸಿಕೊಂಡು ಬಂದ ಕಲಾವಿದೆ ರೇಖಾ ದಾಸ್ ಗೆ ವರ್ಲ್ಡ್ ತಮಿಳು ಕ್ಲಾಸಿಕಲ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.

ಮಧುಬಾಲಾ ಪಾತ್ರಕ್ಕೆ ನನ್ನೇ ಕೇಳಿದ್ದರು: ಶ್ರುತಿ ನಾಯ್ಡು

ಮೂಲತಃ ನೇಪಾಳದವರಾಗಿದ್ದು ಕರ್ನಾಟಕಕ್ಕೆ ಬಂದು ಕನ್ನಡ ಕಲಿತು, ಸಿನಿಮಾ ನಾಟಕ ಧಾರಾವಾಹಿಗಳಲ್ಲಿ ಅಭಿನಯಿಸುತ್ತಾ ಕನ್ನಡ ಚಿತ್ರರಂಗದಲ್ಲೇ ನೆಲೆಸಿದ್ದಾರೆ.

click me!