ಈ Ramayana ಸಿನಿಮಾ ಇಷ್ಟವಾಗದಿದ್ರೆ, ನಿಮ್ಮದೇ ಒಂದು ಮಾಡಿ: ಚಿತ್ರದ ವಿರುದ್ಧ ಕೇಸ್​ ಹಾಕಿದೋರಿಗೆ 'ಸುಪ್ರೀಂ' ತಪರಾಕಿ!

Published : Nov 27, 2026, 06:03 PM IST
Supreme court on Ramayana

ಸಾರಾಂಶ

ರಣ್​​ಬೀರ್ ಕಪೂರ್ ಮತ್ತು ಯಶ್ ಅಭಿನಯದ 'ರಾಮಾಯಣ' ಸಿನಿಮಾದಲ್ಲಿ ಮೂಲ ಕಥೆ ತಿರುಚಲಾಗಿದೆ ಎಂದು ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂಕೋರ್ಟ್, 'ನ್ಯಾಯಾಲಯದ ಸಮಯ ವ್ಯರ್ಥ ಮಾಡಬೇಡಿ' ಎಂದು ಅರ್ಜಿದಾರರಿಗೆ ಬುದ್ಧಿವಾದ ಹೇಳಿದೆ.

ದೆಹಲಿ: ರಣ್​​ಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ರಾಮಾಯಣ ಸಕತ್​ ಸೌಂಡ್​ ಮಾಡುತ್ತಿದೆ. ಇದಾಗಲೇ ವಿದೇಶಗಳಲ್ಲಿಯೂ ಇದರ ಹವಾ ಸೃಷ್ಟಿಯಾಗಿದೆ. ಸಿನಿಮಾ ಎಲ್ಲೆಡೆ ಭರ್ಜರಿ ಕಲೆಕ್ಷನ್​ ಕೂಡ ಮಾಡುತ್ತಿದ್ದು, ಇದಾಗಲೇ ಲಕ್ಷಾಂತರ ಮಂದಿ ಸಿನಿಮಾ ನೋಡಿಯಾಗಿದೆ. ಆದರೆ ಸಿನಿಮಾದಲ್ಲಿ ರಾವಣನನ್ನು ವಿಜೃಂಭಿಸಲಾಗಿದೆ. ಮೂಲ ಕಥೆ ತಿರುಚಲಾಗಿದೆ ಎಂಬಿತ್ಯಾದಿಯಾಗಿ ಒಂದಿಷ್ಟು ಮಂದಿ ನೆಗೆಟಿವ್​ ಕಮೆಂಟ್ಸ್​ ಕೊಡುತ್ತಿದ್ದಾರೆ. ಇದೇ ಕಾರಣವನ್ನಿಟ್ಟುಕೊಂಡು ಕೆಲವು ಸಂಘಟನೆಗಳು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದವು. ಸಿನಿಮಾದ ನಿಷೇಧಕ್ಕೆ ಆದೇಶಿಸುವಂತೆ ನ್ಯಾಯಾಲಯವನ್ನು ಕೋರಿದ್ದವು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್​ಗೆ ಸಲ್ಲಿಸಲಾಗಿದ್ದು, ಇದೀಗ ಅರ್ಜಿ ಹಾಕಿದವರ ವಿರುದ್ಧ ಸುಪ್ರೀಂಕೋರ್ಟ್​ ಅಸಮಾಧಾನ ಹೊರಹಾಕಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಈ ಅರ್ಜಿಯ ವಿಚಾರಣೆಯನ್ನು ಕೋರ್ಟ್​ ಕೈಗೆತ್ತಿಕೊಂಡಿರಲಿಲ್ಲ. ಆದ್ದರಿಂದ ಸಿನಿಮಾ ರಿಲೀಸ್​ ಆಗಿ ಇದಾಗಲೇ ಮೂರು ವಾರ ಕಳೆದಿದ್ದು, ಇದರ ತುರ್ತು ವಿಚಾರಣೆ ನಡೆಸುವಂತೆ ಅರ್ಜಿದಾರರು ಮನವಿ ಮಾಡಿಕೊಂಡಿದ್ದರು. ಇದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್​ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ತ್ವರಿತವಾಗಿ ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಂತೆ ಅರ್ಜಿದಾರರು ಕೋರಿದ್ದರಿಂದ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಅರ್ಜಿಯ ತ್ವರಿತ ವಿಚಾರಣೆ ಸಾಧ್ಯವಿಲ್ಲ ಎಂದಿರುವ ಸುಪ್ರೀಂಕೋರ್ಟ್, ‘ನ್ಯಾಯಾಲಯದ ಸಮಯ ವ್ಯರ್ಥ ಮಾಡಬೇಡಿ’ ಎಂದು ಹೇಳಿದೆ.

ವಿಷಯ ತಿರುಚಿದ ಸಿನಿಮಾ

‘ರಾಮಾಯಣ’ ಸಿನಿಮಾದಲ್ಲಿ ಹಲವು ವಿಷಯಗಳನ್ನು ತಿರುಚಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು. ಅದಕ್ಕೆ ನ್ಯಾಯಮೂರ್ತಿಗಳು, ‘ಸಿನಿಮಾ ಈಗಾಗಲೇ ಬಿಡುಗಡೆ ಆಗಿದೆ, ಯಾರಿಗೆ ನೋಡಬೇಕು ಎನಿಸಿತೋ ಅವರೆಲ್ಲ ನೋಡಿದ್ದಾರೆ. ಅವರಿಗೆ ಕಥೆ ಹೇಗೆ ಅರ್ಥ ಆಗಿದೆಯೋ ಹಾಗೆ ಅವರು ಸಿನಿಮಾ ಮಾಡಿದ್ದಾರೆ. ನಿಮಗೆ ಹೇಗೆ ಅರ್ಥ ಆಗಿದೆಯೋ ಹಾಗೆ ನೀವು ಸಿನಿಮಾ ಮಾಡಿ. ‘ರಾಮಾಯಣ’ ಪೌರಾಣಿಕ ಕಥೆಯ ಬಗ್ಗೆ ನಿಮ್ಮ ಅಭಿಪ್ರಾಯ ಭಿನ್ನವಾಗಿದ್ದರೆ ಅದರ ಆಧಾರದ ಮೇಲೆ ಬೇರೆ ಸಿನಿಮಾ ಮಾಡಿ, ಸುಮ್ಮನೆ ನ್ಯಾಯಾಲಯದ ಅಮೂಲ್ಯ ಸಮಯ ಹಾಳು ಮಾಡಬೇಡಿ’ ಎಂದು ಬುದ್ಧಿ ಹೇಳಿದ ನ್ಯಾಯಮೂರ್ತಿಗಳು ತುರ್ತು ವಿಚಾರಣೆ ಸಾಧ್ಯವಿಲ್ಲ. ಅರ್ಜಿಯು ನಿಯಮದಂತೆ ಸರತಿಯಲ್ಲಿ ವಿಚಾರಣೆಗೆ ಬರಲಿದೆ ಎಂದು ಹೇಳಿ ವಿಚಾರಣೆಯನ್ನು ಮುಂದೂಡಿದರು.

ಮನೋಜ್ ಸಿಂಗ್ ಠಾಕೂರ್ ಸಲ್ಲಿಸಿರುವ ಅರ್ಜಿಯಲ್ಲಿ, ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ನೀಡಿದ ಪ್ರಮಾಣೀಕರಣವನ್ನು ಪ್ರಶ್ನಿಸಲಾಗಿದೆ. ಚಿತ್ರದ ನಿರ್ಮಾಪಕರಾದ ಪ್ರೈಮ್ ಫೋಕಸ್ ಸ್ಟುಡಿಯೋಸ್, ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್, ನಮಿತ್ ಮಲ್ಹೋತ್ರಾ, ಯಶ್, ನಿರ್ದೇಶಕ ನಿತೇಶ್ ತಿವಾರಿ, ಚಿತ್ರಕಥೆ ಬರಹಗಾರ ಶ್ರೀಧರ್ ರಾಘವನ್ ಮತ್ತು ಸಂಭಾಷಣೆ ಬರಹಗಾರ ಶ್ರೇಯಸ್ ಜೈನ್ ಅವರನ್ನು ಪ್ರತಿವಾದಿಗಳಾಗಿ ಹೆಸರಿಸಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸತತ 3 ವಿಭಿನ್ನ ಗೆಟಪ್‌ಗಳಲ್ಲಿ ಸಾಯಿ ಪಲ್ಲವಿ ಹವಾ: ಸಿನಿಮಾರಂಗದಲ್ಲಿ ಹೊಸ ದಾಖಲೆ ಬರೆಯುತ್ತಿದ್ದಾರಾ?
ನಾಯಕನೇ ನಿರ್ಮಾಪಕ, ನಿರ್ದೇಶಕನೇ ಡೈರೆಕ್ಟರ್; ಸಾಧು ಸೇರಿ ಮೂವರಿಗೆ ಎಂಟ್ರಿ ಕೊಟ್ಟ 100 ದಿನದ ಕಲ್ಟ್ ಸಿನಿಮಾ ಇದೇ ನೋಡಿ