ಸತತ 3 ವಿಭಿನ್ನ ಗೆಟಪ್‌ಗಳಲ್ಲಿ ಸಾಯಿ ಪಲ್ಲವಿ ಹವಾ: ಸಿನಿಮಾರಂಗದಲ್ಲಿ ಹೊಸ ದಾಖಲೆ ಬರೆಯುತ್ತಿದ್ದಾರಾ?

Published : Nov 27, 2026, 06:00 PM IST
Sai Pallavi Versatile Roles

ಸಾರಾಂಶ

ನಟಿ ಸಾಯಿ ಪಲ್ಲವಿ ‘ರಾಮಾಯಣ’, ‘ಓಂ’ ಮತ್ತು ‘ಇಂಜಿ ವೆಲ್ಲಂ’ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೀತೆಯ ಪಾತ್ರದಿಂದ ಅರಣ್ಯಾಧಿಕಾರಿ ಹಾಗೂ ಅವಳಿ ಮಕ್ಕಳ ತಾಯಿಯ..

ದಕ್ಷಿಣ ಭಾರತದ ಚಿತ್ರರಂಗದಿಂದ ಬಾಲಿವುಡ್‌ವರೆಗೂ ತಮ್ಮ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ಸಾಯಿ ಪಲ್ಲವಿ ಇದೀಗ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಒಂದೆಡೆ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು, ಮತ್ತೊಂದೆಡೆ ಅರಣ್ಯಾಧಿಕಾರಿಯ ಪಾತ್ರಕ್ಕಾಗಿ ತಮ್ಮ ಲುಕ್‌ನ್ನೇ ಬದಲಿಸಿಕೊಂಡಿದ್ದಾರೆ. ವಿಶೇಷವೆಂದರೆ, ಮುಂದಿನ ಸಿನಿಮಾದಲ್ಲೂ ಇದೇ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸತತ ಮೂರು ಚಿತ್ರಗಳಲ್ಲಿ ಮೂರು ವಿಭಿನ್ನ ಪಾತ್ರಗಳ ಮೂಲಕ ಸಾಯಿ ಪಲ್ಲವಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.

ಮಲಯಾಳಂ ಸಿನಿಮಾದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಸಾಯಿ ಪಲ್ಲವಿ, ಬಳಿಕ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದರು. ಸಹಜ ಅಭಿನಯ, ಸರಳ ಸೌಂದರ್ಯ ಮತ್ತು ವಿಭಿನ್ನ ಪಾತ್ರಗಳ ಆಯ್ಕೆಯಿಂದಾಗಿ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಇದೀಗ ಅವರ ಮುಂಬರುವ ಹಾಗೂ ಬಿಡುಗಡೆಯಾಗಿರುವ ಸಿನಿಮಾಗಳಲ್ಲಿನ ಪಾತ್ರಗಳು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿವೆ.

‘ರಾಮಾಯಣ’ದಲ್ಲಿ ಸೀತೆಯಾಗಿ ಸಾಯಿ ಪಲ್ಲವಿ

ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ ಪಾರ್ಟ್ 1’ರಲ್ಲಿ ಸಾಯಿ ಪಲ್ಲವಿ ದೇವಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮಾಯಣದ ಕಥೆಯನ್ನು ಆಧರಿಸಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಸೀತೆಯಾಗಿ ಅವರ ಲುಕ್ ಹಾಗೂ ಪಾತ್ರದ ಬಗ್ಗೆ ಈಗಾಗಲೇ ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿದೆ.

‘ಓಂ’ ಚಿತ್ರಕ್ಕಾಗಿ ಅರಣ್ಯಾಧಿಕಾರಿಯ ಗೆಟಪ್

ತಮಿಳು ಚಿತ್ರರಂಗದಲ್ಲಿ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ, ಧನುಷ್ ಅಭಿನಯದ ‘ಓಂ’ ಸಿನಿಮಾದಲ್ಲೂ ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರು ನಿತ್ಯಾ ರೆಡ್ಡಿ ಎಂಬ ಅರಣ್ಯಾಧಿಕಾರಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪಾತ್ರಕ್ಕೆ ತಕ್ಕಂತೆ ತಮ್ಮ ಕೂದಲನ್ನೂ ಕತ್ತರಿಸಿಕೊಂಡು ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರದಲ್ಲೂ ಸಾಯಿ ಪಲ್ಲವಿ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ.

‘ಇಂಜಿ ವೆಲ್ಲಂ’ನಲ್ಲೂ ಇದೇ ಗೆಟಪ್‌ನಲ್ಲಿ ದರ್ಶನ

ನಿರ್ದೇಶಕ ಮಣಿರತ್ನಂ ನಿರ್ದೇಶನದಲ್ಲಿ, ವಿಜಯ್ ಸೇತುಪತಿ ಅಭಿನಯಿಸುತ್ತಿರುವ ‘ಇಂಜಿ ವೆಲ್ಲಂ’ ಸಿನಿಮಾದಲ್ಲೂ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ವಿಶೇಷವೆಂದರೆ, ಈ ಚಿತ್ರದಲ್ಲಿಯೂ ಅವರು ‘ಓಂ’ ಸಿನಿಮಾದಲ್ಲಿನ ಗೆಟಪ್‌ನಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅವರು ಅವಳಿ ಹೆಣ್ಣು ಮಕ್ಕಳ ತಾಯಿಯ ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಚಿತ್ರವು 2027ರ ಜನವರಿ 29ರಂದು ತೆರೆಗೆ ಬರಲು ಸಿದ್ಧವಾಗಿದೆ.

ಇನ್ನು ಪೌರಾಣಿಕ ಹಿನ್ನೆಲೆಯ ಸೀತೆಯ ಪಾತ್ರದಿಂದ ಹಿಡಿದು ಅರಣ್ಯಾಧಿಕಾರಿ ಹಾಗೂ ಅವಳಿ ಮಕ್ಕಳ ತಾಯಿಯ ಪಾತ್ರದವರೆಗೆ ಸಾಯಿ ಪಲ್ಲವಿ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಒಂದರ ಹಿಂದೆ ಒಂದರಂತೆ ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅವರ ಈ ಸಿನಿ ಪಯಣ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಮೇಶ್ ಭಟ್‌ರನ್ನು ಅಂಗಡಿಯಿಂದ ಬಿಡಿಸಿದ್ದೇಕೆ ಶಂಕರ್‌ ನಾಗ್? ಆಮೇಲೆ ಮಾಡಿದ-ಮಾಡಲಾಗದ ಕೆಲಸಗಳು ಏನು?
ಸೂರ್ಯ-ಜ್ಯೋತಿಕಾ ಪ್ರೀತಿ ಶುರುವಾಗಿದ್ದು ಯಾವಾಗ? ಕನ್ನಡದ ಖ್ಯಾತ ನಟಿ ಬಿಚ್ಚಿಟ್ಟ ಗುಟ್ಟೇನು?