
'ಬ್ರೇಕ್ ಅಪ್' ಬಗ್ಗೆ ನೇರವಾಗಿ ರಶ್ಮಿಕಾ ಹಾಗೂ ರಕ್ಷಿತ್ ಏನೂ ಹೇಳದೇ ಹೋದರು, ಇಬ್ಬರೂ ಪರೋಕ್ಷವಾಗಿ ತಮ್ಮ ಸಾಮಾಜಿಕ ಜಾಲತಾಣದ ಪ್ರೊಫೈಲ್‌ಗಳಲ್ಲಿ ಬರೆದುಕೊಂಡಿದ್ದಾರೆ. ಇದೀಗ ಕನ್ನಡ ಚಿತ್ರರಂಗಕ್ಕೆ ರಶ್ಮಿಕಾ ಬೆನ್ನು ಮಾಡಿದ ವಿಷಯವಾಗಿಯೂ ಸುದ್ದಿಯಾಗುತ್ತಿದ್ದು, ಇದಕ್ಕೂ ನಟಿ ಇನ್‌ಸ್ಟಾಗ್ರಾಂ ಮೂಲಕ ಉತ್ತರಿಸಿದ್ದಾರೆ.
ಹಾಗೂ ‘ನಾನು ಕನ್ನಡ ಚಿತ್ರ ಬಿಡೋಲ್ಲ’ಎಂದ ರಶ್ಮಿಕಾ, 'ನನ್ನ ಬಗ್ಗೆ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿರುವ ಎಲ್ಲ ಸುದ್ದಿಗಳನ್ನೂ ನೋಡುತ್ತಿದ್ದೇನೆ. ನನ್ನ ಬಗ್ಗೆ ಮಾಡುತ್ತಿರೊ ಕೆಟ್ಟ ಕಾಮೆಂಟ್‌ಗಳು ಟ್ರೋಲ್‌ಗಳನ್ನು ನೋಡಿ ಬೇಸರವಾಗಿದೆ. ಈ ವಿಚಾರವಾಗಿ ನಾನು ಈ ಮೂಲಕ ಯಾರಿಗೂ ಸಮಜಾಯಿಷಿ ನೀಡುತ್ತಿಲ್ಲ. ಅಥವಾ ನಿಮ್ಮನ್ನು ನಾನು ನೀವು ತಪ್ಪಾಗಿ ಬಿಂಬಿಸುತ್ತಿದ್ದೀರೆಂದೂ ಹೇಳುವುದಿಲ್ಲ. ಪ್ರತಿಯೊಂದೂ ವಿಚಾರದಸ್ಸಿೂ ನಾಣ್ಯದ ಎರಡು ಮುಖಗಳಿದ್ದಂತೆ, ಎರಡು ಸ್ಟೋರಿ ಇದ್ದೆ ಇರುತ್ತದೆ. ನನ್ನ ವಿಚಾರದಲ್ಲೂ ನಿಮಗೆ ಗೊತ್ತಿರದ ನಿಮಗೆ ಹೇಳಿಕೊಳ್ಳಲಾಗದ ವಿಚಾರಗಳಿವೆ. ಈಗ ನನ್ನ ವಿಚಾರದಲ್ಲಿ ನಡೆದಿರುವ ಘಟನೆ ರಕ್ಷಿತ್ ಆಗಲಿ ಬೇರೆ ಯಾರ ವಿಚಾರದಲ್ಲಾಗಲಿ ನಡೆಯದಿರಲಿ ಎಂದಷ್ಟೇ ಹೇಳಬಲ್ಲೆ,' ಎಂದಿರುವ ರಶ್ಮಿಕಾ.
ರಶ್ಮಿಕಾ ತನ್ನ ಪತ್ರದಲ್ಲಿ ಬಹಳ ಸ್ಟ್ರಾಂಗಾಗಿ ಹೇಳಿದ ಕೊನೆಯ ವಿಚಾರವೆಂದರೆ, 'ನಾನು ಕನ್ನಡ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸುವುದಿಲ್ಲ. ನಾನು ಇನ್ನಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೇನೆ. ಇನ್ನೂ ಬೆಸ್ಟ್ ಶಾಟ್ ಕೊಡುವುದು ಗ್ಯಾರಂಟಿ,' ಎಂದಿದ್ದಾರೆ.
'ಕನ್ನಡ ಮತ್ತು ಯಾವುದೇ ಭಾಷೆಯಾದರೂ ನಾನು ನಟಿಸುತ್ತೇನೆ. ನನ್ನ ಕೆಲಸವನ್ನು ಇನ್ನು ಅಚ್ಚುಕಟ್ಟಾಗಿ ಮಾಡುತ್ತೇನೆ,' ಎಂದು, ಆ ಮೂಲಕ ರಕ್ಷಿತ್ ರಶ್ಮಿಕಾ ನಡುವಿನ ಬ್ರೇಕಪ್ ನಿಜವೆಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಈ ಬೆಳವಣಿಗೆಗಳಿಂದ ನೊಂದಿರುವ ರಶ್ಮಿಕಾ ಇದರಿಂದ ಹೊರಬರಲು ಕೆಲ ಕಾಲ ಶೂಟಿಂಗ್‌ಗೆ ಬ್ರೇಕ್ ನೀಡಿ ಏಕಾಂತವಾಗಿ ಸಮಯ ಕಳೆಯಲು ಬಯಸಿದ್ದಾರೆ, ಎಂದು ರಶ್ಮಿಕಾ ತಾಯಿ ಹೇಳಿದ್ದಾರೆ
ರಶ್ಮಿಕಾ - ರಕ್ಷಿತ್ ಬ್ರೇಕ್ ಅಪ್: ಹೌದು ಎಂದ ಕುಟುಂಬ!
ಸೋಷಿಯಲ್ ಮೀಡಿಯಾದಿಂದ ರಕ್ಷಿತ್ ಶೆಟ್ಟಿ ಔಟ್; ರಶ್ಮಿಕಾ ಕಾರಣಾನಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.