
ಶ್ರೇಯಸ್ ಹಾಗೂ ನಿಶ್ವಿಕ ನಾಯ್ಡು ಜೋಡಿಯಾಗಿ ನಟಿಸುತ್ತಿರುವ, ಗುರು ದೇಶಪಾಂಡೆ ನಿರ್ದೇಶನದ ಹಾಗೂ ರಮೇಶ್ ರೆಡ್ಡಿ ನಂಗ್ಲಿ ನಿರ್ಮಾಣದ ಈ ಚಿತ್ರತಂಡ ನಾಗರಹಾವು ಚಿತ್ರದ ವಿಷ್ಣುವರ್ಧನ್ ಗೆಟಪ್‌ನಲ್ಲಿ ಶ್ರೇಯಸ್ ಲುಕ್ ಬಿಡುಗಡೆ ಮಾಡಿದೆ. ಇದೇ ಉತ್ಸಾಹದಲ್ಲಿ ಸಾಹಸ ಸಿಂಹನ ಹುಟ್ಟುಹಬ್ಬಕ್ಕಾಗಿಯೇ ಒಂದು ವಿಶೇಷವಾದ ಹಾಡನ್ನು ಬಿಡುಗಡೆ ಮಾಡುತ್ತಿದೆ.
ವಿಷ್ಣು ದಾದಾ ಹೆಜ್ಜೆ ಗುರುತುಗಳ ಜತೆಗೆ ಅವರ ಸಾಧನೆಯ ಶಿಖರವನ್ನು ನೆನಪಿಸುವಂತಹ ರೀತಿಯಲ್ಲಿ ಒಂದು ರ‌್ಯಾಪ್ ಸಾಂಗ್ ಕಂಪೋಸ್ ಮಾಡಲಾಗಿದೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಮೂಡಿಬಂದಿರುವ ಈ ಹಾಡು ಚಾಮುಂಡಿಯ ಮಡಿಲಿಲ್ಲ ಹುಟ್ಟಿ, ದುರ್ಗದ ಕೋಟೆಯಲ್ಲಿ ಬೆಳಕು ಕಂಡ ವಿಷ್ಣು ಚಿತ್ರಣವನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ಪಡ್ಡೆಹುಲಿಗೂ ವಿಷ್ಣುವರ್ಧನ್‌ಗೂ ಸಂಬಂಧವೇನು? ನಿರ್ದೇಶಕರು ಹೇಳುವ ಕಾರಣಗಳು ಇಲ್ಲಿವೆ.
ಡಾ ವಿಷ್ಣುವರ್ಧನ್ ನನ್ನ ಗುರುಗಳು. ನನ್ನ ಬದುಕಿನ ಬಹುದೊಡ್ಡ ತಿರುವು, ಯಶಸ್ಸು ಸಿಕ್ಕಿರುವುದೇ ಅವರ ಸ್ನೇಹ ಮತ್ತು ಹಾರೈಕೆಯಿಂದಲೇ. ಹೀಗಾಗಿ ನನ್ನ ಮಗ ಶ್ರೇಯಸ್‌ನ ಮೊದಲ ಚಿತ್ರಕ್ಕೆ ಅವರ ಆಶೀರ್ವಾದ ಬೇಕಿದೆ. ಜತೆಗೆ ಅವರಿಗೆ ನಮ್ಮ ‘ಪಡ್ಡೆಹುಲಿ’ ಚಿತ್ರದಿಂದ ನಮನ ಸಲ್ಲಿಸುವ ನಿಟ್ಟಿನಲ್ಲಿ ಈ ರ‌್ಯಾಪ್ ಹಾಡು ಮಾಡಿದ್ದೇವೆ - ಕೆ ಮಂಜು, ನಿರ್ಮಾಪ
ವಿಷ್ಣುದಾದಾ ಅವರು ಈ ಜನರೇಷನ್‌ಗೂ ದೊಡ್ಡ ಸ್ಫೂರ್ತಿ. ಅವರನ್ನು ಅಭಿಮಾನಿಸುವವರು ಎಂದೆಂದಿಗೂ ಇರುತ್ತಾರೆ. ಅಂಥ ಅಭಿಮಾನಿಗಳ ಜತೆಗೆ ಮುಂದಿನ ಪೀಳಿಗೆಯ ಸಿನಿಮಾ ಪ್ರೇಕ್ಷಕರಿಗೂ ವಿಷ್ಣುದಾದಾ ಅವರ ಸಾಧನೆ ತಪಲುಪಿಸಬೇಕಿದೆ. ಆ ನಿಟ್ಟಿನಲ್ಲಿ ಸೆ.17 ರಂದು ಸಂಜೆ ರ‌್ಯಾಪ್ ಹಾಡು ಬಿಡುಗಡೆ ಮಾಡುತ್ತಿದ್ದೇವೆ - ಗುರು ದೇಶಪಾಂಡೆ, ನಿರ್ದೇಶಕ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.