Salaar Teaser: ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಟೀಸರ್ ರಿಲೀಸ್: ರಗಡ್ ಲುಕ್‌ನಲ್ಲಿ ಡಾರ್ಲಿಂಗ್ ಪ್ರಭಾಸ್

By Govindaraj S  |  First Published Jul 6, 2023, 5:32 AM IST

‘ಬಾಹುಬಲಿ’ ಖ್ಯಾತಿಯ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಸಲಾರ್' ಸಿನಿಮಾದ ಟೀಸರ್ ಇಂದು (ಜುಲೈ 6) ಮುಂಜಾನೆ 5:12ಕ್ಕೆ ಬಿಡುಗಡೆಯಾಗಿದೆ. ಈ ಸಿನಿಮಾವು ಒಂದು ಭರ್ಜರಿ ಆಕ್ಷನ್‌ ಎಂಟರ್‌ಟೇನರ್‌ ಆಗಿರಲಿದೆ ಎಂಬುದಕ್ಕೆ ಬಿಡುಗಡೆಯಾಗಿರುವ ಟೀಸರ್‌ ಸಾಕ್ಷಿಯಾಗಿದೆ. 


‘ಬಾಹುಬಲಿ’ ಖ್ಯಾತಿಯ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಸಲಾರ್' ಸಿನಿಮಾದ ಟೀಸರ್ ಇಂದು (ಜುಲೈ 6) ಮುಂಜಾನೆ 5:12ಕ್ಕೆ ಬಿಡುಗಡೆಯಾಗಿದೆ. ಈ ಸಿನಿಮಾವು ಒಂದು ಭರ್ಜರಿ ಆಕ್ಷನ್‌ ಎಂಟರ್‌ಟೇನರ್‌ ಆಗಿರಲಿದೆ ಎಂಬುದಕ್ಕೆ ಬಿಡುಗಡೆಯಾಗಿರುವ ಟೀಸರ್‌ ಸಾಕ್ಷಿಯಾಗಿದೆ. ರಗಡ್ ಲುಕ್‌ನಲ್ಲಿ ಪ್ರಭಾಸ್ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಪಾತ್ರ ಕೂಡ ಗಮನ ಸೆಳೆದಿದೆ. ಚಿತ್ರದಲ್ಲಿ ಬರುವ ಸೆಟ್​ಗಳು 'ಕೆಜಿಎಫ್' ಸಿನಿಮಾವನ್ನು ನೆನೆಪಿಸುವಂತಿದೆ. ಮೇಕಿಂಗ್​, ಮ್ಯೂಸಿಕ್ ಸಹ ಭರ್ಜರಿಯಾಗಿದೆ. ಟೀಸರ್‌ನಲ್ಲಿ ಪ್ರಭಾಸ್ ಹಾಗೂ ಪೃಥ್ವಿರಾಜ್ ಲುಕ್ ನೋಡುಗರಿಗೆ ರಸದೌತಣವನ್ನು ನೀಡಿದೆ. 

‘ಸಲಾರ್’ ಎರಡು ಭಾಗದಲ್ಲಿ ರಿಲೀಸ್ ಆಗಲಿದೆ ಎಂಬುದು ಈ ಮೊದಲೇ ಸುದ್ದಿ ಆಗಿತ್ತು. ಇದೀಗ ಅದು ಟೀಸರ್​ನಲ್ಲಿ ಖಚಿತವಾಗಿದೆ. ಈ ಸಿನಿಮಾ ಎರಡು ಭಾಗದಲ್ಲಿ ಬರುತ್ತಿರುವ ವಿಚಾರವನ್ನು ತಂಡದವರು ಖಚಿತಪಡಿಸಿದ್ದಾರೆ. ಈ ಮೂಲಕ ದೊಡ್ಡ ಸೀಕ್ರೆಟ್ ರಿವೀಲ್ ಆಗಿದೆ. ಮೊದಲ ಪಾರ್ಟ್​​ಗೆ ‘ಸಲಾರ್​: ಸೀಸ್​ಫೈರ್’ ಎಂದು ಹೆಸರು ಇಡಲಾಗಿದೆ. 'ಕೆಜಿಎಫ್' ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಸಹ ನಟಿಸಿದ್ದಾರೆ. ಶ್ರುತಿ ಹಾಸನ್ ಮತ್ತು ಜಗಪತಿ ಬಾಬು  ಈಶ್ವರಿ ರಾವ್, ಮಧು ಗುರುಸ್ವಾಮಿ, ಶ್ರೀಯಾ ರೆಡ್ಡಿ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 

Tap to resize

Latest Videos

'KGF-2' ಕ್ಲೈಮ್ಯಾಕ್ಸ್‌ಗು 'ಸಲಾರ್' ಟೀಸರ್‌ಗೂ ಇದೆ ಲಿಂಕ್: ಏನಿದು 5:12AM ರಹಸ್ಯ?

ಈ ಅದ್ಧೂರಿ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡುತ್ತಿದ್ದು, ಹೊಂಬಾಳೆ ಫಿಲಂಸ್ ಸಲಾರ್ ಸಿನಿಮಾ ನಿರ್ಮಾಣ ಮಾಡುತ್ತಿದೆ. ಇನ್ನು ಸಲಾರ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ ಆಗಿದೆ. ಇಂಗ್ಲಿಷ್ ನಲ್ಲೂ ತೆರೆಗೆ ಬರಲಿದೆಯಂತೆ. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ. ನಿರ್ದೇಶಕ ಪ್ರಶಾಂತ್ ನೀಲ್ ಈ ಚಿತ್ರದ ಸಾಹಸ ದೃಶ್ಯವನ್ನು ಹಾಲಿವುಡ್ ಮಟ್ಟದಲ್ಲಿ ನಿರ್ದೇಶಿಸುತ್ತಿದ್ದಾರೆ.  ಆಕ್ಷನ್ ಸೀಕ್ವೆನ್ಸ್ಗಳನ್ನು ಹಾಲಿವುಡ್ ಸ್ಟಂಟ್ ಮಾಸ್ಟರ್​ಗಳು ನೃತ್ಯ ಸಂಯೋಜನೆ ಮಾಡಿದ್ದಾರೆ. 

ಪ್ರಭಾಸ್-ಪ್ರಶಾಂತ್ ನೀಲ್ 'ಸಲಾರ್'ನಲ್ಲಿ ಕನ್ನಡದ ಖ್ಯಾತ ನಟ; ಚಿತ್ರದ ಬಗ್ಗೆ ಹೇಳಿದ್ದೇನು?

ಈ ಚಿತ್ರದ ಸ್ಯಾಟಲೈಟ್ ಹಕ್ಕನ್ನು ಸ್ಟಾರ್ ಮಾ ಭಾರೀ ಮೊತ್ತ ನೀಡಿ ಖರೀದಿಸಿದೆಯಂತೆ. ಅಂದಹಾಗೆ ಸಲಾರ್ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಈಗಾಗಲೇ ನಾಯಕಿ ಶ್ರುತಿ ಹಾಸನ್ ತನ್ನ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಸದ್ಯದಲ್ಲೇ ಟಾಕಿ ಭಾಗ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಹೊರಡಲಿದೆ ಸಿನಿಮಾತಂಡ. ಕೆಜಿಎಫ್ ಬಳಿಕ ಬಹುತೇಕ ಅದೇ ತಂಡ ಸಲಾರ‌್‌ನಲ್ಲೂ ಒಂದಾಗಿದ್ದು ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ಚಿತ್ರವು ಸೆಪ್ಟೆಂಬರ್ 28, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 

 

click me!