ಗಂಗಾವತಿ: ಶ್ರೀ ಪ್ರಸನ್ನ ವೆಂಕಟದಾಸರು ಸಿನಿಮಾದ ಪೋಸ್ಟರ್ ಬಿಡುಗಡೆ

By Girish Goudar  |  First Published Jul 5, 2023, 11:03 PM IST

ದಾಸ ಸಾಹಿತ್ಯ ವಚನ ಸಾಹಿತ್ಯ ಕರ್ನಾಟಕದ ಎರಡು ಕಣ್ಣುಗಳು ಇದ್ದಂತೆ. ಹಾಗಾಗಿ ಆ ಸಾಹಿತ್ಯವನ್ನು ಓದುವುದರ ಮೂಲಕ ನಮ್ಮ ಮಕ್ಕಳಿಗೂ ದಾಸರ, ಶರಣರ ಪರಿಚಯ ಮಾಡಿಕೊಡಬೇಕು ಎಂದು ತಿಳಿಸಿದ ನಾರಾಯಣ್ ರಾವ್. 


ಗಂಗಾವತಿ(ಜು.05): ಶ್ರೀ ಪ್ರಸನ್ನ ವೆಂಕಟದಾಸರು ಚಲನಚಿತ್ರದ ಪೋಸ್ಟರ್ ಹಿರೇಜಂತಕಲ್‌ನ ಶ್ರೀ ಪ್ರಸನ್ನ ಪಂಪ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಇಂದು(ಬುಧವಾರ) ಬಿಡುಗಡೆಯಾಗಿದೆ.

ಪೋಸ್ಟರ್ ಅನ್ನು ಬಿಡುಗಡೆಗೊಳಿಸದ ನಂತರ ಮಾತನಾಡಿದ ಬ್ರಾಹ್ಮಣ ಸಮಾಜದ ಮುಖಂಡರಾದ ನಾರಾಯಣ್ ರಾವ್ ಅವರು, ದಾಸ ಸಾಹಿತ್ಯ ವಚನ ಸಾಹಿತ್ಯ ಕರ್ನಾಟಕದ ಎರಡು ಕಣ್ಣುಗಳು ಇದ್ದಂತೆ. ಹಾಗಾಗಿ ಆ ಸಾಹಿತ್ಯವನ್ನು ಓದುವುದರ ಮೂಲಕ ನಮ್ಮ ಮಕ್ಕಳಿಗೂ ದಾಸರ, ಶರಣರ ಪರಿಚಯ ಮಾಡಿಕೊಡಬೇಕು ಎಂದು ತಿಳಿಸಿದ್ದಾರೆ.

Latest Videos

undefined

'ನೀರಾ ಆರ್ಯ' ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ: ಇದು ನೇತಾಜಿ ಕಟ್ಟಿದ ಮೊದಲ ಮಹಿಳಾ ಆರ್ಮಿಯ ಕಥೆ

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಮಾತನಾಡಿ, ಶ್ರೀ ಪ್ರಸನ್ನ ವೆಂಕಟದಾಸರ ಚಿತ್ರೀಕರಣ ಗಂಗಾವತಿಯ ಭಾಗದಲ್ಲಿ ಹೆಚ್ಚು ಚಿತ್ರೀಕರಿಸಲಾಗಿದೆ ಮತ್ತು ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಪ್ರತಿಭೆಗಳನ್ನು ಕರ್ನಾಟಕಕ್ಕೆ ಪರಿಚಯಿಸಿದ ಕೀರ್ತಿ ಹವಾಲ್ದಾರ್ ಅವರಿಗೆ ಸಲ್ಲುತ್ತದೆ ಎಂದರು.

ನ್ಯಾಯವಾದಿ ನಾಗರಾಜ್ ಗುತ್ತೇದಾರ ಮಾತನಾಡಿ, ದಾಸರನ್ನು ಒಂದು ವರ್ಗಕ್ಕೆ ಸೀಮಿತ ಗೊಳಿಸದೇ ಎಲ್ಲರು ಅವರ ಸಾಹಿತ್ಯ ಓದು ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಚಲನಚಿತ್ರದ ವೆಂಕಟೇಶ್ವರನ ಪಾತ್ರದಲ್ಲಿ ನಟಿಸಿರುವ ವಿಷ್ಣುತೀರ್ಥ ಜೋಶಿ ಮಾತನಾಡಿ, ಜು. 7 ರಂದು ಬಿಡುಗಡೆಗೊಳ್ಳುತ್ತಿರುವ ಚಲನಚಿತ್ರವನ್ನು  ಕರ್ನಾಟಕದ ಕಲಾಮನಸುಗಳ ಚಿತ್ರಮಂದಿರಕ್ಕೆ ಬಂದು ವೀಕ್ಷಿಸಿ ಆಶೀರ್ವದಿಸಿ ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು.

ವೇದಿಕೆ ಮೇಲೆ ಚಂದ್ರಪ್ಪ ಉಪ್ಪಾರ್, ವೆಂಕಟೇಶ್ ಅಮರ ಜ್ಯೋತಿ, ಡಾ. ಸಿ. ಮಹಾಲಕ್ಷ್ಮಿ,, ಮುರಳಿಧರ, ನ್ಯಾಯವಾದಿ ಹಷ ಮುದ್ದೀನ್,  ನಾಗರಾಜ್ ಇಂಗಳಗಿ, ನ್ಯಾಯವಾದಿ ಪ್ರಹ್ಲಾದ್ ರಾವ್ ನವಲಿ, ನ್ಯಾಯವಾದಿ ನಾಗರಾಜ್ ಗುತ್ತೇದಾರ, ವಾಸುದೇವ ರಾವ್ ನವಲಿ, ಉಪಸ್ಥಿತರಿದ್ದರು. ರಾಮಮೂರ್ತಿ ನವಲಿ ನಿರೂಪಣೆ, ನ್ಯಾಯವಾದಿ ಶರದ್ ದಂಡಿನ್ ಸ್ವಾಗತಿಸಿದರು. 

click me!