ಒಂದಲ್ಲ ಒಂದು ವಿಷಯಕ್ಕೆ ಬಾಹುಬಲಿಯ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಸುದ್ದಿಯಲ್ಲಿರುತ್ತಾರೆ. ಇವರ ಬಗ್ಗೆ ಗಾಳಿ ಸುದ್ದಿಗಳಿಗೇನೂ ಕಡಿಮೆಯಾಗಿಲ್ಲ. ಇದೀಗ ಇವರಿಬ್ಬರೂ ಜಪಾನ್‌ಗೆ ತೆರಳಿದ್ದಾರೆ. ಏನಕ್ಕೆ?
'ಮಿರ್ಚಿ ಆ್ಯಂಡ್ ಡಾರ್ಲಿಂಗ್' ಜೋಡಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಇನ್ ಜಪಾನ್! ಏನು ಸಮಾಚಾರವಿದು?
ಬಿಗ್ ಬಜೆಟ್ ಸಿನಿಮಾ ಅಂದ್ರೆ ಸುಮ್ಮೇನಾ? ವರ್ಷಗಟ್ಟಲೆ ಶ್ರಮ ಹಾಕಿ ಪ್ಲಾನಿಂಗ್ ಮಾಡಿರುತ್ತಾರೆ. ಬಾಹುಬಲಿ ಭಾಗ 1 ಹಾಗೂ 2 ಚಿತ್ರ ಮಾಡಲು ಪ್ರಭಾಸ್ ಐದು ವರ್ಷ ಸಂಪೂರ್ಣ ಮೀಸಲಿಟ್ಟಿದ್ದರು. ಅದಕ್ಕೆ ಸಿಕ್ಕ ಪ್ರತಿಫಲವೇ ದೊಡ್ಡ ಖ್ಯಾತಿ!
ಈಗ ಅದೇ ಜೋಡಿಯ ಮತ್ತೊಂದು ಸಿನಿಮಾ ಮೂಲಕ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಪಾನ್‍ನಲ್ಲಿ ಇವರಿಬ್ಬರ ಅಭಿನಯದ 'ಮಿರ್ಚಿ ಹಾಗೂ ಡಾರ್ಲಿಂಗ್' ಮಾರ್ಚ್ 2 ರಂದು ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಒಟ್ಟಾಗಿ ವೀಕ್ಷಿಸಲು ಜಪಾನ್‌ಗೆ ತೆರಳಿದೆ ಈ ಕ್ಯೂಟ್ ಜೋಡಿ.
ಕೆಲವು ವರ್ಷಗಳಿಂದ ಇವರು ಒಬ್ಬರನ್ನೊಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಹರಿದಾಡುತ್ತಿತ್ತು. ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಪ್ರಭಾಸ್ ಸ್ಪಷ್ಟನೆ ನೀಡಿದ್ದು, ಅಂಥದ್ದೇನೂ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಅನುಷ್ಕಾ, ಪ್ರಭಾಸ್ ಮದುವೆಯಾಗ್ತಾರಾ?
ಇಬ್ಬರು ಒಟ್ಟಾಗಿ 2 ರಿಂದ 3 ವರ್ಷ ಕೆಲಸ ಮಾಡಿದರೆ ಖಂಡಿತಾ ಲಿಂಕ್ ಮಾಡೇ ಮಾಡುತ್ತಾರೆ. ಬಟ್ ನಾನು ಅನುಷ್ಕಾರೊಂದಿಗೆ ಮಾತ್ರ ಡೇಟ್ ಮಾಡುತ್ತಿಲ್ಲ, ಎಂದಿದ್ದಾರೆ ಪ್ರಭಾಸ್.
ಇದಕ್ಕೆ ಅನುಷ್ಕಾ ಏನಂತಾರೆ ಗೊತ್ತಾ?
'ನಾನು ಪ್ರಭಾಸ್ ಡೇಟ್ ಮಾಡುತ್ತಿಲ್ಲ, ಮದ್ವೆಯೂ ಆಗುತ್ತಿಲ್ಲ. ದಯಮಾಡಿ ಏನೋ ಇಮ್ಯಾಜಿನ್ ಮಾಡಿಕೊಳ್ಳಬೇಡಿ. ನಿಜ ಜೀವನದಲ್ಲಿ ಬಾಹುಬಲಿ ಹಾಗೂ ದೇವಸೇನಾ ಜೋಡಿ ವರ್ಕ್ ಅಗುವುದಿಲ್ಲ,' ಎಂದಿದ್ದಾರೆ ಅನುಷ್ಕಾ.
ಅನುಷ್ಕಾ ಶೆಟ್ಟಿ ಬಳಿ ಇರೋ ಇವು ಕೋಟಿ ಬೆಲೆ ಬಾಳುತ್ತೆ!