ಈ ವಿಚಾರದಲ್ಲಿ ಕರೀನಾಳನ್ನು ಫಾಲೋ ಮಾಡುತ್ತಾರಂತೆ ಕತ್ರಿನಾ!

Published : Feb 25, 2019, 11:44 AM IST
ಈ ವಿಚಾರದಲ್ಲಿ ಕರೀನಾಳನ್ನು ಫಾಲೋ ಮಾಡುತ್ತಾರಂತೆ ಕತ್ರಿನಾ!

ಸಾರಾಂಶ

ನಾನೂ ಅವರಂತಾಗಬೇಕು, ಅವರ ಆ ಗುಣ ನಂಗೆ ಇಷ್ಟ, ಇವರ ಈ ಗುಣ ನಂಗೆ ತುಂಬಾ ಇಷ್ಟ. ನಾನು ನಾಳೆಯಿಂದ ಅವರ ರೀತಿಯೇ ಜೀವನ ಮಾಡ್ತೇನೆ ಎಂದು ಎಲ್ಲರೂ ಹೇಳ್ತಾರೆ. ಇದಕ್ಕೆ ಕತ್ರಿನಾ ಕೈಫ್ ಕೂಡ ಹೊರತಲ್ಲ. ಅವರೂ ಎಲ್ಲರಂತೆಯೇ ಅಲ್ಲವೇ?

ಆದರೆ ವಿಶೇಷತೆ ಇರೋದು ಕತ್ರಿನಾ ಬಯಸಿರುವುದು ಕರೀನಾ ಕಪೂರ್ ಖಾನ್ ರೀತಿ ಜೀವನ ಕ್ರಮ ಮೈಗೂಡಿಸಿಕೊಳ್ಳಬೇಕು ಅಂತ. ಯಾಕೆ ಅಂದ್ರೆ ಕರೀನಾ ಕಪೂರ್‌ಗೆ ಮದುವೆಯಾಗಿ ಮಕ್ಕಳಾಗಿದ್ದರೂ ಅದೇ ಚೆಂದ ಇನ್ನೂ ಅವರಲ್ಲಿ ಮನೆ ಮಾಡಿದೆ.

ಇದಕ್ಕೆ ಮುಖ್ಯ ಕಾರಣ ಕರೀನಾಳ ಫುಡ್ ಸ್ಟೈಲ್. ಇದರಿಂದ ಇಂಪ್ರೆಸ್ ಆಗಿರುವ ಕತ್ರಿನಾ ‘ನಾನು ಕರೀನಾ ಕಪೂರ್ ಅವರಂತೆಯೇ ಫುಡ್ ಸ್ಟೈಲ್ ರೂಢಿಸಿಕೊಳ್ಳಬೇಕು. ಆಹಾರದ ವಿಚಾರದಲ್ಲಿ ಅವರು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸಿಕ್ಕಿದ್ದು ತಿನ್ನಲ್ಲ, ಬೇಡದ್ದು ಮುಟ್ಟಲ್ಲ. ನಾನೂ ಹಾಗೆಯೇ ಆಗಬೇಕು’ ಎಂದು ಹೇಳುವ ಮೂಲಕ ಜಿಮ್ ಜೊತೆಗೆ ಫುಡ್‌ಸ್ಟೈಲ್‌ನಲ್ಲೂ ಕಂಟ್ರೋಲ್ ಮಾಡಿಕೊಂಡು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂದವಾಗಬೇಕು ಎನ್ನುವ ಚೆಂದದ ಆಸೆ ಈಗ ಕತ್ರಿನಾ ಮನದಲ್ಲಿ ಓಡಾಡುತ್ತಿರಲೂಬಹುದು.

‘ನಾನು ಕರೀನಾ ಕಪೂರ್ ಅವರಂತೆಯೇ ಫುಡ್ ಸ್ಟೈಲ್ ರೂಢಿಸಿಕೊಳ್ಳಬೇಕು. ಆಹಾರದ ವಿಚಾರದಲ್ಲಿ ಅವರು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ' - ಕತ್ರಿನಾ

ಸಾರಾ ಅಲಿಖಾನ್‌ಗೆ ಕಿವಿಮಾತು ಹೇಳಿದ ಕರೀನಾ ಕಪೂರ್‌!

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!