ತುಪ್ಪ ಅನ್ನ ತಿಂದು ಡ್ಯಾನ್ಸ್ ಮಾಡ್ತಾರಂತೆ ದಬಾಂಗ್ ಚೆಲುವೆ!

Published : Feb 25, 2019, 12:27 PM IST
ತುಪ್ಪ ಅನ್ನ ತಿಂದು ಡ್ಯಾನ್ಸ್ ಮಾಡ್ತಾರಂತೆ ದಬಾಂಗ್ ಚೆಲುವೆ!

ಸಾರಾಂಶ

‘ಆರೋಗ್ಯಕರ ಜೀವನ ನಮ್ಮದಾಗಬೇಕಾದರೆ ನಾವು ತಿನ್ನುವ ಆಹಾರ ಸತ್ವಯುತವಾಗಿರಬೇಕು’ ಅಂತ ಟೀಚರ್ ಸ್ಟೈಲ್‌ನಲ್ಲಿ ಹೇಳ್ತಾಳೆ ಸಾನ್ಯಾ ಮಲ್ಹೋತ್ರ. ‘ದಂಗಲ್’ನಲ್ಲಿ ಕುಸ್ತಿಪಟುವಾಗಿ ಮಿಂಚಿದ ಈ ಪಂಜಾಬಿ ಹುಡುಗಿ ಸದ್ಯಕ್ಕೀಗ ‘ಫೋಟೋಗ್ರಾಫರ್’ ಹಾಗೂ ಆದಿತ್ಯರಾಯ್ ಕಪೂರ್ ಜೊತೆಗಿನ ಇನ್ನೂ ಹೆಸರಿಡದ ಸಿನಿಮಾದಲ್ಲಿ ಬ್ಯುಸಿ. ಮೊಲದಂತೆ ನಗುವ ಹುಡುಗಿಯ ಡಯೆಟ್ ಮತ್ತು ಫಿಟ್‌ನೆಸ್ ವಿವರ ಇಲ್ಲಿದೆ.  

ದೇಸಿ ಫುಡ್ ಪ್ರೀತಿ ‘ನಂಗೆ ತುಪ್ಪ ಅನ್ನ ಊಟ ಮಾಡೋದು ಬಹಳ ಇಷ್ಟ’ ಅನ್ನೋ ಸಾನ್ಯಾಗೆ ಮನೆ ಊಟ ಅಂದ್ರೆ ಪ್ರೀತಿ. ಉಳಿದ ಬಾಲಿವುಡ್ ತಾರೆಯರೆಲ್ಲ ಅನ್ನದಿಂದ ದೂರ ಓಡ್ಬೇಕಾದ್ರೆ ಈ ಹುಡುಗಿ ತುಪ್ಪದನ್ನ, ಮೊಸರನ್ನ ವ್ಯಾಮೋಹದಲ್ಲಿ ಬಿದ್ದಿದ್ದಾರೆ. ‘ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಹೆಲ್ದಿಫುಡ್ ತಿನ್ಬೇಕು’ ಅನ್ನೋ ಹುಡುಗಿ ತಾನು ಮಾತ್ರ ಜಂಕ್‌ಫುಡ್ ಪ್ರಿಯೆ. ತನ್ನ ಡಯೆಟ್‌ಗೆ ಚೀಟ್ ಮಾಡಿ ಆಗಾಗ ಚಾಟ್ಸ್ ತಿನ್ನೋದು ಈಕೆಗಿಷ್ಟ. ಉಳಿದಂತೆ ಮನೆ ತಿಂಡಿಯನ್ನೇ ತಿನ್ನೋದು.

 

ಡ್ಯಾನ್ಸ್ ಕ್ರೇಜ್

ಸನ್ಯಾ ಇನ್‌ಸ್ಟಾಗ್ರಾಮ್‌ಗೆ ಭೇಟಿ ನೀಡಿದರೆ ಆಕೆಗೆ ಡ್ಯಾನ್ಸ್ ಕ್ರೇಜ್ ಎಷ್ಟಿದೆ ಅನ್ನೋದು ತಿಳಿಯುತ್ತೆ. ಡ್ಯಾನ್ಸ್ ಮುಂದೆ ಬೇರ‌್ಯಾವ ಫಿಟ್‌ನೆಸ್ಸೂ ನಿಲ್ಲಲ್ಲ ಅನ್ನೋ ಸಾನ್ಯಾ ದಿನದಲ್ಲಿ ಮಿನಿಮಮ್ 1 ಗಂಟೆ ಡ್ಯಾನ್ಸ್‌ಗೆ ಮೀಸಲಿಡುತ್ತಾರೆ. 30 ನಿಮಿಷ ಡ್ಯಾನ್ಸ್ ಮಾಡಿದರೆ 200 ರಿಂದ 800 ಕ್ಯಾಲೊರಿ ಬರ್ನ್ ಮಾಡಬಹುದು ಅನ್ನುವುದು ಈಕೆಯ ಅನುಭವದ ಮಾತು.

ಎತ್ತರ: 5 ಅಡಿ 2 ಇಂಚು
ತೂಕ: 51 ಕೆಜಿ
ಸುತ್ತಳತೆ: 32-26-32

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಇಷ್ಟೂ ದಿನ ಮುಚ್ಚಿಟ್ಟಿದ್ದ ಸೀಕ್ರೆಟ್ ಕೊನೆಗೂ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ; 'ಈಗ್ಲಾ ಹೋಳೋದು' ಅಂತಿರೋ ನೆಟ್ಟಿಗರು!
ವಿಕ್ಕಿ ಕೌಶಲ್ ಒಮ್ಮೆ ಪೊಲೀಸರ ಅತಿಥಿಯಾಗಿ ಜೈಲು ಸೇರಿದ್ದರು; ಈಗ ಸೀಕ್ರೆಟ್ ಬಿಚ್ಚಿಟ್ಟ ಅನುರಾಗ್ ಕಶ್ಯಪ್!