ಸೈಕಾಲಾಜಿಕಲ್ ಥ್ರಿಲ್ಲರ್ 'ಮನರೂಪ' ಪೋಸ್ಟರ್ ರಿಲೀಸ್!

By Web Desk  |  First Published Aug 19, 2019, 3:09 PM IST

ಕಿರಣ್ ಹೆಗಡೆ ನಿರ್ದೇಶನದ ‘ಮನರೂಪ’ ಸಿನಿಮಾದ ಮತ್ತೊಂದು ಕುತೂಹಲಭರಿತ ಪೋಸ್ಟರ್ ಬಿಡುಗಡೆ ಆಗಿದೆ. 


ದಟ್ಟ ಕಾಡಿನಲ್ಲಿ ಗುಮ್ಮಗಳ ರೋಚಕ ಅಲೆದಾಟ, ಕರಡಿ ಗುಹೆ ಹುಡುಕಾಟದ ರೋಚಕತೆ ಜತೆಗೆ ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಒಳಗೊಂಡ ಈ ಚಿತ್ರದ ಪೋಸ್ಟರ್ ಸಾಕಗಷ್ಟು ಗಮನ ಸೆಳೆಯುತ್ತಿದೆ.

ಸಿನಿಮಾ ಆಗುತ್ತಿದೆ ಮದನ್ ಪಟೇಲ್‌ರ 'ತಮಟೆ' ಕಾದಂಬರಿ!

Latest Videos

undefined

ಗುಮ್ಮ ಇಸ್ ವಾಚಿಂಗ್ ಎನ್ನುವ ಉಪ ಶೀರ್ಷಿಕೆಯೊಂದಿಗೆ ಪೋಸ್ಟರ್‌ಬಿಡುಗಡೆ ಯಾಗಿದ್ದು , ಪೋಸ್ಟರ್‌ನಲ್ಲಿರುವ ಐವರು ವ್ಯಕ್ತಿಗಳಲ್ಲೇ ಯಾರೋ ಒಬ್ಬರು ಗುಮ್ಮ ಇರಬಹುದೇ ಅಥವಾ
ಇನ್ಯಾರೋ ಬೇರೆ ಇದ್ದಾರೆಯೇ ಎಂಬ ಕುತೂಹಲವನ್ನು ಮೂಡಿಸುತ್ತಿದೆ.

ಅಯ್ಯೋ! ರಾಧಾ ಮಿಸ್‌ಗೆ ಟೂ ಬಿಟ್ಟು ಶಾನ್ವಿ ಹಿಂದೆ ಹೊರಟೇ ಬಿಟ್ರು ರಮಣ್!

ನಿಗೂಢವಾಗಿಯೇ ಉಳಿದಿರುವ, ಯಾರ ಕಣ್ಣಿಗೂ ಕಂಡಿರದ ಕರಡಿ ಗುಹೆಯನ್ನು ಅನ್ವೇಷಣೆಗೆ ಹೊರಟ ಐವರು ಸ್ನೇಹಿತರು, ದಟ್ಟ ಕಾನನದಲ್ಲಿ ಅವರ ಎದುರು ಅನಾವರಣಗೊಳ್ಳುವ ಮನುಷ್ಯನ ವಿವಿಧ ಮುಖಗಳ ಸುತ್ತ ಈ ಸಿನಿಮಾ ಸಾಗುತ್ತದೆ. ಈ ಚಿತ್ರದ ಮುಖ್ಯ ಪಾತ್ರದಾರಿ ಪೋಸ್ಟರ್‌ನಲ್ಲಿದ್ದು ಭಾವನಾತ್ಮಕತೆ ಎದ್ದು ಕಾಣುವಂತಿದೆ. ಇದು ಗುಮ್ಮದ ಅಸ್ತಿತ್ವ ಹಾಗೂ ಇನ್ನಿತರ ಅಪರಿಚಿತ ವ್ಯಕ್ತಿಗಳ ಇರುವಿಕೆಯ ಸಾಧ್ಯತೆಯನ್ನು ತೋರಿಸುತ್ತದೆ ಎಂಬುದು ನಿರ್ದೇಶಕರು ಪೋಸ್ಟರ್ ಕುರಿತು ಹೇಳುವ ಮಾತು.

ಸರವಣ ಸಂಗೀತ, ಗೋವಿಂದ್‌ರಾಜ್ ಛಾಯಾಗ್ರಹಣ ಮಾಡಿದ್ದಾರೆ. ಸಾಹಿತಿ, ಪತ್ರಕರ್ತ ಮಹಾಬಲ ಸೀತಾಳಭಾವಿ ಸಂಭಾಷಣೆ ಬರೆದಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಮನರೂಪ ಚಿತ್ರ ತೆರೆ ಮೇಲೆ ಮೂಡಲಿದೆ. 

 

click me!