
ಡಾ.ರಾಜ್‌ಕುಮಾರ್ ಜೊತೆಗೆ ಅನೇಕ ನಾಯಕಿಯರು ನಟಿಸಿದ್ದಾರೆ. ಹೆಚ್ಚಿನವರು ಅವರ ಹೀರೋಯಿನ್, ಜೊತೆಗೆ ಪೋಷಕ ಪಾತ್ರಗಳನ್ನು ಮಾಡಿದವರು. ಆದರೆ ಅಣ್ಣಾವ್ರಿಗೆ ಹಲವು ಬಗೆಯ ಸಂಬಂಧಗಳನ್ನು ಹೊಂದಿದ ಪಾತ್ರಗಳಲ್ಲಿ ನಟಿಸಿದ ನಟಿ ಅವರೊಬ್ಬರೇ- ದಿ ಒನ್ ಆಂಡ್ ಓನ್ಲೀ ಲೀಲಾವತಿ.
ಸ್ಯಾಂಡಲ್‌ವುಡ್ ಇತಿಹಾಸಕಾರರು ಇದನ್ನು ಬಹಳ ಇಂಟರೆಸ್ಟಿಂಗ್ ಆಗಿ ನೆನಪಿಸಿಕೊಳ್ಳುತ್ತಾರೆ. ಸುಮಾರು 45 ಫಿಲಂಗಳಲ್ಲಿ ಲೀಲಾವತಿ ಅವರು ಡಾ ರಾಜ್‌ಕುಮಾರ್ ಜೊತೆಗೆ ನಟಿಸಿದ್ದಾರೆ. ಅವುಗಳಲ್ಲೆಲ್ಲ ಹೀರೋಯಿನ್, ತಂಗಿ, ಮಗಳು, ಸೊಸೆ, ನಾದಿನಿ, ಅತ್ತೆಯಾಗಿ ನಟಿಸಿದ್ದಾರೆ. ರಣಧೀರ ಕಂಠೀರವ, ಗಾಳಿ ಗೋಪುರ, ಕುಲವಧು, ವೀರಕೇಸರಿ, ಭಾಗ್ಯದೇವತೆ ಮೊದಲಾದ ಸಿನಿಮಾಗಳಲ್ಲಿ ಈ ಜೋಡಿಯ ಕೆಮಿಸ್ಟ್ರಿಯನ್ನು ಚಿತ್ರರಸಿಕರು ನೆನಪಿಸಿಕೊಳ್ಳುತ್ತಾರೆ.
45ರಲ್ಲಿ 27 ಫಿಲಂಗಳಲ್ಲಿ ಅವರು ರಾಜ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ವಾತ್ಸಲ್ಯ ಫಿಲಂನಲ್ಲಿ ತಂಗಿಯಾಗಿದ್ದರು. ಪ್ರೇಮಮಯಿಯಲ್ಲಿ ನಾದಿನಿ ಆಗಿದ್ದರು. ನಾ ನಿನ್ನ ಮರೆಯಲಾರೆ ಫಿಲಂನಲ್ಲಿ ಅತ್ತೆಯಾಗಿದ್ದರು. ಭೂದಾನ ಚಿತ್ರದಲ್ಲಿ ಲೀಲಾವತಿ ಅವರು ರಾಜ್‌ಕುಮಾರ್ ಅವರ ಮಗಳಾಗಿ ನಟಿಸಿದ್ದಾರೆ. ಕಿತ್ತೂರು ಚೆನ್ನಮ್ಮದಲ್ಲಿ ರಾಜ್‌ಕುಮಾರ್ ಅವರ ಸೊಸೆಯಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲ ಪಾತ್ರಗಳಲ್ಲೂ ಅವರು ತಮ್ಮತನವನ್ನು ತೋರಿಸಿದ್ದಾರೆ. ಹೀರೋಯಿನ್ ಆಗಿದ್ದಾಗ ರಾಜ್ ಅವರಲ್ಲಿ ಪ್ರೇಮವನ್ನು ತೋರಿಸಿದಂತೆಯೇ, ಇತರ ಪಾತ್ರಗಳಲ್ಲಿ ಆ ಪಾತ್ರಗಳಿಗೆ ತಕ್ಕ ವಾತ್ಸಲ್ಯ ಮೊದಲಾದ ರಾಗದ್ವೇಷಾದಿಗಳನ್ನು ತೋರಿಸಿದವರು. ಇವರ ಜೋಡಿ ಎಂದರೆ ಆ ಸಿನಿಮಾಗಳಿಗೆ ಜನ ಮುಗಿಬಿದ್ದು ಹೋಗುತ್ತಿದ್ದರು.
ಲೀಲಾವತಿ ಅವರು ಸಾಕಷ್ಟು ಕಷ್ಟಪಟ್ಟು ಸಿನಿಮಾ ಇಂಡಸ್ಟ್ರೀ ಪ್ರವೇಶ ಮಾಡಿದರು. ರಾಣಿ ಹೊನ್ನಮ್ಮ ಚಿತ್ರದ ಯಶಸ್ಸಿನ ನಂತರ ರಾಜ್ ಕುಮಾರ್ & ಲೀಲಾವತಿಯವರ ಜೋಡಿ ಕರ್ನಾಟಕದಲ್ಲಿ ಜನಪ್ರಿಯ ಜೋಡಿ ಆಗಿತ್ತು. ಹೀಗೆ ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹಲವು ಚಿತ್ರಗಳಲ್ಲೂ ನಾಯಕಿಯಾದರು. ಕೆಲ ಸಿನಿಮಾದಲ್ಲಿ ನಾಯಕ ನಟರಿಗಿಂತ ಹೆಚ್ಚಿನ ಸಂಭಾವನೆ ಪಡೆದ ನಾಯಕಿ ಅಂತಲೂ ಅವರು ಗುರುತಿಸಿಕೊಂಡಿದ್ದರು.
ಶೂಟಿಂಗ್ ಶುರುವಾಗೋ ಮೊದ್ಲೇ ಸಿನಿಮಾ ರಿಲೀಸ್: 'ಅರಗಿಣಿ'ಯ ರೋಚಕ ಸ್ಟೋರಿ ಹೇಳಿದ ರಮೇಶ್!
ಲೀಲಾವತಿ ಅವರು 1949ರಲ್ಲಿ ಶಂಕರ್ ಸಿಂಗ್ ಅವರ ನಾಗಕನ್ನಿಕ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿ ಅವರು ಕಯಾದುವಿನ ಸಖಿಯಾಗಿ ಅಭಿನಯಿಸಿದ್ದರು. ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು. ಸುಬ್ಬಯ್ಯ ನಾಯ್ಡು ಅವರ ‘ಭಕ್ತ ಪ್ರಹ್ಲಾದ’ದಲ್ಲಿ ಕೂಡಾ ಅಭಿನಯಿಸಿದರು. ಹಲವಾರು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿದರು. ನಾಯಕಿಯಾಗಿ ಅವರು ಅಭಿನಯಿಸಿದ ಮೊದಲ ಚಿತ್ರ ಮಾಂಗಲ್ಯ ಯೋಗ. ಡಾ. ರಾಜ್ ಕುಮಾರ್ ಅವರೊಂದಿಗೆ ನಟಿಸಿದ ಮೊದಲ ಚಿತ್ರ ರಣಧೀರ ಕಂಠೀರವ.
ಮಂಚು ವಿಷ್ಣು ನಟನೆ ಕಂಡು ಕೈಮುಗಿಯಬೇಕೆನಿಸಿತು: ಕಣ್ಣಪ್ಪ ಚಿತ್ರ ನೋಡಿ ಭಾವುಕರಾದ ರಾಮ್ ಗೋಪಾಲ್ ವರ್ಮಾ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.