
ಯಾವುದೇ ಭೀಕರ ಸನ್ನಿವೇಶಕ್ಕೆ ಹೆದರಿ ಓಡಿಹೋಗುತ್ತಿದ್ದ ನಾಯಕಿ ರಾಣಿ ಸತ್ಯಾ ಮನೆಯಲ್ಲಿ ಆಶ್ರಯ ಪಡೆಯುತ್ತಾಳೆ. ಕೊನೆಗೆ, ರಾಣಿ ಮತ್ತು ಸತ್ಯಾ ಲವ್ನಲ್ಲಿ ಬೀಳುತ್ತದೆ. ಇದೇ ಸಂದರ್ಭದಲ್ಲಿ ರಾಣಿಯ ಭೂತಕಾಲವು ಅವಳನ್ನು ಕಾಡಲು ಶುರುಮಾಡುತ್ತದೆ. ಇದು 1995ರಲ್ಲಿ ಬಿಡುಗಡೆಯಾದ ರಮೇಶ್ ಅರವಿಂದ್, ಸುಧಾರಾಣಿ ಅಭಿನಯದ ಅರಗಿಣಿ ಸಿನಿಮಾದ ಚಿತ್ರ. ಬ್ಲಾಕ್ಬಸ್ಟರ್ ಚಿತ್ರವೆನಿಸಿ, ಗಲ್ಲಾಪೆಟ್ಟಿಗೆಯನ್ನು ಕೊಳ್ಳೆಹೊಡೆದ ಈ ಸಿನಿಮಾ ಹುಟ್ಟಿದ ರೋಚಕ ಸ್ಟೋರಿಯನ್ನು ಇದೀಗ ರಮೇಶ್ ಅವರು ಮಹಾನಟಿ ಸೀಸನ್-02ನಲ್ಲಿ ವಿವರಿಸಿದ್ದಾರೆ.
ಅಷ್ಟಕ್ಕೂ ರಮೇಶ್ ಅವರಿಗೆ ಇದೀಗ 60 ವಯಸ್ಸಾಗಿದ್ದರೂ 30ರ ಯುವಕರಂತೆಯೇ ಆ್ಯಕ್ಟೀವ್ ಆಗಿರೋದು ಗೊತ್ತೇ ಇದೆ. ಮಹಾನಟಿಯ ಯುವ ಸ್ಪರ್ಧಿ ಜೊತೆ ರೊಮಾಂಟಿಕ್ ಸ್ಟೆಪ್ ಹಾಕಿದ ಬಳಿಕ, ಅರಗಿಣಿಯ ರೋಚಕ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ ರಮೇಶ್. ನಿರ್ದೇಶಕ ಪಿ.ಎಚ್.ವಿಶ್ವನಾಥ ಅವರು ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಅರಗಿಣಿ ಚಿತ್ರಕ್ಕಾಗಿ ಅವರು ಮೊದಲು ರಮೇಶ್ ಅವರ ಡೇಟ್ಸ್ ಪಡೆದಿದ್ದರು. ಸಿನಿಮಾ ಕಥೆಯನ್ನೂ ಹೇಳಿದ್ದರು. ಇಬ್ಬರು ಕಳ್ಳರ ಸ್ಟೋರಿ, ಅದರಲ್ಲಿ ಬೇಬಿ ಶಾಮಿಲಿಯ ಎಂಟ್ರಿ ಆಗುತ್ತದೆ ಎಂದು ಸಂಪೂರ್ಣ ಕಥೆ ಹೇಳಿದ್ದರಂತೆ. ಕಥೆ ಕೇಳಿ ರಮೇಶ್ ಅವರಿಗೂ ಇಷ್ಟವಾಯ್ತಂತೆ. ಇನ್ನೇನು ಶೂಟಿಂಗ್ ಶುರುವಾಗುವುದೊಂದೇ ಬಾಕಿ ಇತ್ತು.
ಮುಂದಿನ ವಾರ ಶೂಟಿಂಗ್ ಇಟ್ಟುಕೊಂಡಿದ್ದರು. ಅದೊಂದು ದಿನ ವಿಶ್ವನಾಥ್ ಮತ್ತು ರಮೇಶ್ ಅವರು ಹೋಗುತ್ತಿರುವಾಗ ಬೇಬಿ ಶಾಮಿಲಿಯ ಪೋಸ್ಟರ್ ಒಂದು ಕಂಡು, ಏನೋ ಈಕೆಯದ್ದು ಒಂದು ಸಿನಿಮಾ ಬಂದಿದೆ. ನೋಡಿಕೊಂಡು ಬರೋಣ ಎಂದರಂತೆ. ಆಗ ಇಬ್ಬರೂ ಹೋಗಿ ನೋಡಿದರೆ, ತಾವು ಮಾಡಬೇಕು ಎಂದುಕೊಂಡಿದ್ದ ಸಿನಿಮಾ ಕಥೆನೇ ಅದಾಗಿತ್ತಂತೆ! ಇವರ ಚಿತ್ರದ ಶೂಟಿಂಗ್ಗೂ ಮೊದಲೇ ಅಲ್ಲಿ ಅದೇ ಕಥೆಯ ಚಿತ್ರ ರಿಲೀಸ್ ಆಗೋಗಿತ್ತು.
ಇದನ್ನು ನೋಡಿ ಶಾಕ್ ಆದ ವಿಶ್ವನಾಥ್ ಅವರು, ತಮ್ಮ ಬಳಿ ಹೆಚ್ಚಿಗೆ ಟೈಮ್ ಇಲ್ಲ ಎಂದು ಎರಡೇ ದಿನದಲ್ಲಿ ಸಂಪೂರ್ಣ ಕಥೆ ಬದಲಿಸಿದರಂತೆ. ಕೊನೆಗೆ ಬೇಬಿ ಶಾಮಿಲಿ ಬದಲಾಗಿ ನಾಯಕಿಯನ್ನು ಹಾಕಿಕೊಳ್ಳೋಣ ಎಂದು ಮಾತುಕತೆಯಾಗಿದೆ. ಅಷ್ಟು ಬೇಗ ಡೇಟ್ಸ್ ಕೊಡುವವರು ಯಾರು ಎಂಬ ಚರ್ಚೆ ನಡೆದಾಗ ಕೊನೆಗೆ ಸುಧಾರಾಣಿಯವರನ್ನು ಸಂಪರ್ಕಿಸಿದ್ದಾರೆ. ಸುಧಾರಾಣಿ ಅವರು ಅದಾಗಲೇ ಬೇರೆ ಚಿತ್ರಗಳಲ್ಲಿ ಬಿಜಿ ಇದ್ದರೂ, ಇವರ ಕಥೆ ಕೇಳಿದ ಮೇಲೆ ನಾನು ಹೇಗಾದರೂ ಅಡ್ಜಸ್ಟ್ ಮಾಡಿಕೊಳ್ತೇನೆ. ಬರುತ್ತೇನೆ ಎಂದರಂತೆ. ಹೀಗೆ ಅರಗಿಣಿ ಕಥೆ ಹುಟ್ಟಿಕೊಂಡಿತು. ಚಿತ್ರ ಬ್ಲಾಕ್ಬಸ್ಟರ್ ಆಯಿತು ಎಂದಿದ್ದಾರೆ ರಮೇಶ್.
ಇದೀಗ ಅವರು ಮಹಾನಟಿ ಸೀಸನ್-2ನಲ್ಲಿ ತೀರ್ಪುಗಾರರಾಗಿದ್ದಾರೆ. ಅನುಶ್ರೀ ಅವರು ಆ್ಯಂಕರಿಂಗ್ ಮಾಡುತ್ತಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳ ಯುವತಿಯರು ತಮ್ಮ ಪ್ರತಿಭೆಯ ಮೂಲಕ ಇಲ್ಲಿಯವರೆಗೆ ಬಂದಿದ್ದಾರೆ. ಇವರಲ್ಲಿ ಯಾರು ಮಹಾನಟಿ ಎನ್ನುವ ಬಿರುದು ಪಡೆಯುತ್ತಾರೆಯೋ ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.