ಶೃತಿ ಹರಿಹರನ್ ಬೇಬಿ ಬಂಪ್ ; ನೆಟ್ಟಿಗರ ಕೊಳಕು ಮನಸ್ಸಿಗೆ ಪ್ರಥಮ ಚಿಕಿತ್ಸೆ

Published : Jul 19, 2019, 12:04 PM ISTUpdated : Jul 19, 2019, 12:06 PM IST
ಶೃತಿ ಹರಿಹರನ್ ಬೇಬಿ ಬಂಪ್ ; ನೆಟ್ಟಿಗರ ಕೊಳಕು ಮನಸ್ಸಿಗೆ ಪ್ರಥಮ ಚಿಕಿತ್ಸೆ

ಸಾರಾಂಶ

ಮೂಗುತಿ ಸುಂದರಿ, ಲೂಸಿಯಾ ನಟಿ ಶೃತಿ ಹರಿಹರನ್ ತಮ್ಮ ಬೇಬಿ ಬಂಪ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ತಾಯಿಯಾಗುತ್ತಿರುವ ಸಂತೋಷವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆದರೆ, ಅದಕ್ಕೂ ಮಂದಿ ಕಾಲೆಳೆದಿದ್ದಾರೆ. ಅದಕ್ಕೆ ಬಿಗ್‌ಬಾಸ್ ವಿನ್ನರ್ ಪ್ರಥಮ್ ಚಾಟಿ ಬೀಸಿದ್ದು ಹೀಗೆ?

'ಎಲ್ಲಿ ಮಾಯಾ ಆದ್ರಿ ಮೇಡಂ? ಫಿಲ್ಮ್‌ನಿಂದ ದೂರ ಹೋದ್ರೆ ಓಕೆ, ಬಟ್ ಅಭಿಮಾನಿಗಳಿಂದಾನೂ ದೂರ ಹೋಗ್ಬಿಟ್ರಾಲ್ಲಾ?  ಪ್ಲೀಸ್ ಕಮ್ ಬ್ಯಾಕ್‌...' ಎಂದು ಪ್ರೀತಿ ತೋರಿದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ, 'ನಾತಿಚರಾಮಿ' ನಟಿ ಶೃತಿ ಹರಿಹರನ್.

ತಾಯಾಗ್ತಿದ್ದಾರೆ ಶ್ರುತಿ ಹರಿಹನ್, ಗಂಡನ ಹೆಸರು ಬಹಿರಂಗ

ಹೌದು! ಸ್ಯಾಂಡಲ್‌ವುಡ್ ಸುಂದರಿ ಶೃತಿ ಹರಿಹರನ್ ಕೆಲವು ದಿನಗಳ ಹಿಂದೆ ತಾಯಾಗುತ್ತಿರುವ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಂತರ ತನ್ನ ಸ್ನೇಹಿತರೊಂದಿಗೆ ಬೆಂಗಳೂರಿನಲ್ಲಿ ಬೇಬಿ ಶವರ್ ಮಾಡಿಕೊಂಡಿರುವ ವಿಡಿಯೋವನ್ನೂ ಶೇರ್ ಮಾಡಿದ್ದಾರೆ. ಈ ಫೋಟೋ, ವೀಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ ಶೃತಿ ಯೋಗಕ್ಷೇಮವನ್ನು ಸಿನಿ ತಾರೆಯರು ಹಾಗೂ ಅಭಿಮಾನಿಗಳು ವಿಚಾರಿಸಿಕೊಂಡು, ಪ್ರೀತಿ ತೋರಿದ್ದಾರೆ. ಅಭಿನಂದಿಸಿದ್ದಾರೆ. ಆದರೆ, ಸದಾ ಕಾಲೆಲೆಯುವ ಬುದ್ಧಿ ಬಿಡದ ಕೆಲವು ನೆಟ್ಟಿಗರು ನೆಗೆಟಿವ್ ಕಾಮೆಂಟ್ ಮಾಡುವುದನ್ನೂ ಬಿಟ್ಟಿಲ್ಲ. ಎಂದೂ ಯಾರ ಪೋಸ್ಟ್‌ಗೂ ಕಾಮೆಂಟ್ ಮಾಡದ ಒಳ್ಳೆ ಹುಡುಗ ಪ್ರಥಮ್‌ಗೂ ನೆಟ್ಟಿಗರ ಈ ವರ್ತನೆ ಸಿಟ್ಟು ತರಿಸಿದೆ. ಶೃತಿ ಕಾಲೆಳೆದ ನೆಟ್ಟಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೃತಿ ಹರಿಹರನ್ ಬೇಬಿ ಬಂಪ್ ಆಯ್ತು, ಈಗ ಸೀಮಂತ ವಿಡಿಯೋನೂ ರಿವೀಲ್ !

'ಮುಖ್ಯವಾದ ವಿಚಾರ! ಎಂದೂ ಯಾರು ಪ್ರೋಫೈಲ್‌ಗೆ ಕಾಮೆಂಟ್ ಮಾಡದ ನಾನು ಈಗ ಮಾಡುತ್ತಿರುವೆ. ನಿಮಗೆ ಯಾರ ಮೇಲೆ ಕೊಪ, ವಿರೋಧವಿದ್ದರೆ ನಿಮ್ಮತ್ರ ಇಟ್ಕೊಳ್ಳಿ. ಆದರೆ ಪ್ರಪಂಚವನ್ನು ನೋಡದ ಕಂದಮ್ಮನನ್ನು ದೂರ ಬೇಡಿ. ಈ ಮಗುವಿಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡಲು ನೀವೆಲ್ಲ ಯಾರಪ್ಪ?' ಎಂದು ಕೊಳಕು ಮನಸ್ಸುಗಳಿಗೆ ಬುದ್ಧಿ ಹೇಳಿದ್ದಾರೆ. ಅಷ್ಟೇ ಅಲ್ಲ ಅರ್ಜುನ್ ಸರ್ಜಾರನ್ನು ಟ್ಯಾಗ್ ಮಾಡುವ ಚಿಲ್ಲರೆ ಬುದ್ಧಿ ಬಿಡಿ ಎಂದೂ ಬೇಡಿಕೊಂಡಿದ್ದಾರೆ. 

ಒಳ್ಳೆ ಹುಡುಗ ಪ್ರಥಮ್ ಕಾಮೆಂಟ್‌ಗೆ ಶೃತಿ, 'ನಿಮ್ಮ ಕಾಮೆಂಟ್ ಅನ್ನು ನಾನು appreciate ಮಾಡುತ್ತೇನೆ. ಥ್ಯಾಂಕ್ ಯು' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

#MeToo ಅಬ್ಬರ ಜೋರಾದಾಗ ಅರ್ಜುನ್ ಸರ್ಜಾ ವಿರುದ್ಧ ಶೃತಿ ಆರೋಪಿಸಿದ್ದು, ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಅಂಬರೀಷ್ ಸೇರಿ ಕನ್ನಡ ಚಿತ್ರರಂಗದ ಹಿರಿಯರು ಈ ವಿವಾದವನ್ನು ಬಗೆಹರಿಸಲು ಯತ್ನಿಸಿದರೂ, ಫಲ ನೀಡದೇ, ವಿಷಯ ಕೋರ್ಟ್ ಮೆಟ್ಟಿಲೇರಿದ್ದನ್ನು ಇಲ್ಲಿ ಸ್ಮರಿಸಬಹುದು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?