ಕುರುಕ್ಷೇತ್ರ ಸಂಭಾವನೆಯನ್ನು ನೆರೆ ಸಂತ್ರಸ್ತರಿಗೆ ನೀಡಿದ ನಿಖಿಲ್ ಕುಮಾರಸ್ವಾಮಿ!

By Web Desk  |  First Published Aug 12, 2019, 1:46 PM IST

ಪ್ರವಾಹಪೀಡಿತ ಪ್ರದೇಶಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ | ಅಗತ್ಯ ಸಾಮಗ್ರಿಗಳನ್ನು ನಿರಾಶ್ರಿತರಿಗೆ ತಲುಪಿಸಿದ ನಿಖಿಲ್ ಮತ್ತವರ ತಂಡ | ಕುರುಕ್ಷೇತ್ರದ ಸಂಭಾವನೆಯನ್ನು ನಿರಾಶ್ರಿತರಿಗೆ ನೀಡಲು ನಿರ್ಧಾರ 


ಬೆಂಗಳೂರು (ಆ. 12): ವರುಣನ ಆರ್ಭಟಕ್ಕೆ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಪ್ರವಾಹದ ಅಬ್ಬರಕ್ಕೆ ಜನ ಮನೆ ಹೊಲ, ಗದ್ದೆಗಳನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.  ನಿರಾಶ್ರಿತರಿಗೆ ಸಾರ್ವಜನಿಕರು ನೆರವಿನ ಹಸ್ತ ಚಾಚಿದ್ದಾರೆ. ರಾಜ್ಯದ ಬೇರೆ ಬೇರೆ ಕಡೆಯಿಂದ ನೆರವಿಗೆ ಧಾವಿಸುತ್ತಿದ್ದಾರೆ. 

ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ ದರ್ಶನ್ ‘ಕುರುಕ್ಷೇತ್ರ’

Tap to resize

Latest Videos

ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಕಾರ್ಯಕರ್ತರ ಜೊತೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬಂದು ನಿರಾಶ್ರಿತರಿಗೆ ತಲುಪಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. 

ಧಾರವಾಡ, ಬೆಳಗಾವಿ, ಯಾದಗಿರಿ ಎಲ್ಲಾ ಕಡೆ ಭೇಟಿ ನೀಡುತ್ತಿದ್ದಾರೆ. ಕುರುಕ್ಷೇತ್ರದಲ್ಲಿ ಬಂದ ಸಂಭಾವನೆಯನ್ನು ಉತ್ತರ ಕರ್ನಾಟಕ ಭಾಗದ ಜನರಿಗೆ ಕೊಡುವುದಾಗಿ ಹೇಳಿದ್ದಾರೆ.

ಕುರುಕ್ಷೇತ್ರ, ಕೆಂಪೇಗೌಡ-2 ಗೂ ಬಿತ್ತು ನೆರೆ ಬರೆ; ಬಾಕ್ಸಾಫೀಸ್ ಕಲೆಕ್ಷನ್ ಠುಸ್!

ಎಡಗೈಯಲ್ಲಿ ಕೊಟ್ಟ ದಾನ ಬಲಗೈಗೆ ಗೊತ್ತಾಗಬಾರದು ಎಂದು ಕುರುಕ್ಷೇತ್ರದ ಸಂಭಾವನೆ ಎಷ್ಟು ಎಂದು ಎಲ್ಲಿಯೂ ಬಹಿರಂಗಪಡಿಸಿಲ್ಲ. ಎಷ್ಟು ಹಣವನ್ನು ಕೊಡುತ್ತಿದ್ದಾರೆಂದು ಹೇಳಿಲ್ಲ. 

ನಿಖಿಲ್ ಕೂಡಾ ದಾನ, ಸಹಾಯ ಮಾಡುವುದರಲ್ಲಿ ಅಪ್ಪನ, ಅಜ್ಜನ ದಾರಿಯಲ್ಲಿ ಸಾಗುತ್ತಿದ್ದಾರೆ. ಇದೂ ಕೂಡಾ ಒಂದು ಒಳ್ಳೆಯ ಬೆಳವಣಿಗೆ. ನಿಖಿಲ್ ಒಳ್ಳೆಯ ರಾಜಕಾರಣಿಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. 

click me!