ಕಾಮಿಡಿ ಶೋನಲ್ಲಿ ಹಾಸ್ಯನಟರ ಕಡೆಗಣನೆ; ನಿವೇದಿತಾ ಗೌಡ ಯಾಕೆ?

Published : Aug 17, 2019, 11:28 AM ISTUpdated : Aug 17, 2019, 11:56 AM IST
ಕಾಮಿಡಿ ಶೋನಲ್ಲಿ ಹಾಸ್ಯನಟರ ಕಡೆಗಣನೆ; ನಿವೇದಿತಾ ಗೌಡ ಯಾಕೆ?

ಸಾರಾಂಶ

ಎಲ್ಲೇ ನೋಡಿದರೂ ಕಿರುತೆರೆ ಬಾರ್ಬಿ ಡಾಲೇ ಕಾಣಿಸುತ್ತಾರೆ. ಆಕೆಯ ಟಿಕ್ ಟಾಕ್ ವಿಡಿಯೋ ಹಾಗೂ ಮಾತನಾಡುವ ಸೈಲ್ ಇಷ್ಟ ಪಡುವವರೂ ಆಕೆ ಮೇಲೆ ಗರಂ ಆಗುತ್ತಿದ್ದಾರೆ. ಮುದ್ ಮುದ್ದಾಗಿ ನುಲಿಯುವ ನಿವೇದಿತಾ ಮೇಲೆಕೆ ನೆಟ್ಟಿಗರ ಆಕ್ರೋಶ?

ಟಿಕ್ ಟಾಕ್ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿ ಆಗಿರುವ ನಿವೇದಿತಾ ಗೌಡಗೆ ಬಿಗ್ ಬ್ರೇಕ್ ಕೊಟ್ಟಿದ್ದು ಬಿಗ್ ಬಾಸ್ ರಿಯಾಲಿಟಿ ಶೋ. ಅಲ್ಲಿಂದ ಶುರುವಾಯ್ತು ನೋಡಿ ಅವರ ಜರ್ನಿ... ಯಾವ ಕಾರ್ಯಕ್ರಮವಾದ್ರೂ ನಿವೇದಿತಾ ಸಿಂಡ್ರೆಲಾ ಡ್ರೆಸ್‌ನಲ್ಲಿ ಕಾಣಿಸಿಕೊಂಡರೇನೆ ಆ ಶೋಗೆ ಕಳೆ ಹೆಚ್ಚುವುದು ಎನ್ನುವಷ್ಟರ ಮಟ್ಟಿಗೆ ಅವಳ ಫೇಮ್ ಹೆಚ್ಚಾಗಿದೆ. ಆದರೆ ಯಾಕೋ ಏನೋ ಕಾಮಿಡಿ ಶೋನಲ್ಲಿ ನಿವೇದಿತಾ ಜಡ್ಜ್ ಆಗಿರುವುದಕ್ಕೆ ನೆಟ್ಟಿಗರು ಇರಿಟೇಟ್ ಆಗುತ್ತಿದ್ದಾರೆ. ಕಾಮಿಡಿ ಶೋನಲ್ಲಿ ಹಾಸ್ಯನಟರಿಗೆ ಮಣೆ ಹಾಕುವುದ ಬಿಟ್ಟು, ನಿವೇದಿತಾ ಏಕೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸೀರಿಯಸ್‌ ಕಾಮಿಡಿ ಮಾಡೋ ಶೋ 'ಕಾಮಿಡಿ ಕಂಪನಿ'!

ಹೌದು, ಕಲರ್ಸ್ ಕನ್ನಡ ವಾಹನಿಯಲ್ಲಿ ಪ್ರಸಾರವಾಗುತ್ತಿರುವ ‘ಕಾಮಿಡಿ ಕಂಪನಿ’ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿರುವುದು ಜನರಿಗೆ ಇಷ್ಟವಾಗುತ್ತಿಲ್ಲ. ತೀರ್ಪುಗಾರರ ಸ್ಥಾನದಲ್ಲಿರಲು ಆಕೆ ಏನು ಸಾಧಿಸಿದ್ದಾಳೆ, ಭಾಷೆ ಮೇಲೆ ಹಿಡಿತವಿಲ್ಲ ಅಂದ್ಮೇಲೆ ಮಾಡುವ ಕಾಮಿಡಿ ಏನು ಅರ್ಥವಾಗುತ್ತದೆ? ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರರಂಗದ ಹಾಸ್ಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿದವರಿದ್ದಾರೆ. ಅದರಲ್ಲೂ ಟೆನ್ನಿಸ್ ಕೃಷ್ಣ, ಜನಾರ್ಧನ್, ಬುಲೆಟ್ ಪ್ರಕಾಶ್, ಬಿರಾದರ್, ರಂಗಾಯಣ ರಘು, ಚಿಕ್ಕಣ್ಣ ಹೀಗೆ ಸಾಕಷ್ಟು ಜನರಿದ್ದಾರೆ. ಅವರು ಯಾರೂ ಕಾರ್ಯಕ್ರಮ ಆಯೋಜಿಸುವ ಮುಖ್ಯಸ್ಥರಿಗೆ ಕಾಣಿಸಲಿಲ್ಲವೇ ಎಂದು ಟೀಕಿಸಿದ್ದಾರೆ.

ಬಿಗ್ ಬಾಸ್ ನಿವೇದಿತಾ ಗೌಡ ಯಂಗ್ ಮಮ್ಮಿ!

ನರಸಿಂಹ ರಾವ್ ಕಾಲದಿಂದಲೂ ಹಾಸ್ಯ ನಟರಿಗೆ ಮಣೆ ಹಾಕುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಲೇ ಇದೆ. ಈಗಲೂ ಹಾಸ್ಯ ನಟರ ವೈಯಕ್ತಿಕ ಬದುಕು ತುಂಬಾ ಕಷ್ಟದಿಂದಲೇ ಇದೆ. ಇಂಥ ಶೋಗಳಲ್ಲಾದರೂ ಅವರಿಗೆ ಸೂಕ್ತ ಅವಕಾಶ ಸಿಕ್ಕರೆ, ಇನ್ನೊಬ್ಬರನ್ನು ನಗಿಸುವ ಹಾಸ್ಯ ನಟರ ಬಾಳೂ ಬೆಳಗುತ್ತದೆ ಎನ್ನುವುದು ಹಲವರ ಅಭಿಪ್ರಾಯ.

‘ಸೀತಾವಲ್ಲಭ’ ಗುಬ್ಬಿ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ!

ನೀವೇನು ಹೇಳುತ್ತೀರಿ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!
2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ