ಚಿತ್ರ ವಿಮರ್ಶೆ: ಮನಸ್ಸಿನಾಟ

By Web Desk  |  First Published Aug 17, 2019, 10:21 AM IST

ಬ್ಲೂವೇಲ… ಗೇಮ… ಈ ಚಿತ್ರದ ಪ್ರಧಾನ ಕಥಾ ಹಂದರ. ಶಾಲೆಗಳಿಗೆ ಹೋಗುವ ಮಕ್ಕಳ ದೈನಂದಿನ ಚಟುವಟಿಕೆಗಳ ಮೇಲೆ ಪೋಷಕರು ನಿಗಾ ಇಡದಿದ್ದರೆ, ಮೊಬೈಲ… ಮತ್ತು ಕಂಪ್ಯೂಟರ್‌ ದುರ್ಬಳಕೆ ಅವರ ಬದುಕನ್ನೇ ಹೇಗೆ ನುಂಗಿ ಬಿಡಬಲ್ಲದು ಎನ್ನುವ ಎಚ್ಚರ ಹಾಗೂ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಎಷ್ಟುಮುಖ್ಯ ಎನ್ನುವ ಸಂದೇಶ ಈ ಚಿತ್ರದಲ್ಲಿದೆ.


ಆತ ಹತ್ತನ್ನೇರಡು ವರ್ಷದ ಬಾಲಕ. ಹೆಸರು ಹರ್ಷಿತ್‌. ಅವನೇ ಚಿತ್ರದ ಕಥಾ ನಾಯಕ. ಶಾಲೆಯಲ್ಲಿನ ತನ್ನ ಸಹಪಾಠಿಯ ಸಾವಿನಿಂದ ಆತಂಕಕ್ಕೆ ಸಿಲುಕುತ್ತಾನೆ. ಇಬ್ಬರು ನಿತ್ಯ ಒಟ್ಟಿಗೆ ಶಾಲೆಗೆ ಹೋದವರು, ಆಟೋಟಗಳಲ್ಲಿ ಜತೆಗಿದ್ದವರು. ಹೀಗಿರುವಾಗ ಗೆಳೆಯನಿಲ್ಲದ ದುಃಖ ಹರ್ಷಿತ್‌ಗೆ ತೀವ್ರವಾಗಿ ಕಾಡುತ್ತದೆ. ಅದೇ ನೋವಿನಲ್ಲಿ ಸಾವಿನ ಹಿಂದಿನ ರಹಸ್ಯ ಭೇದಿಸಲು ಹೊರಡುತ್ತಾನೆ.

ಚಿತ್ರ ವಿಮರ್ಶೆ: ಗಿಮಿಕ್

Tap to resize

Latest Videos

ಅದೊಂದು ರಹಸ್ಯ ಕಾರ್ಯಾಚರಣೆ. ಆತನ ತಂದೆ-ತಾಯಿಗೂ ಗೊತ್ತಿಲ್ಲದಂತೆ ರಾತ್ರಿ ವೇಳೆ ಕಾರ್ಯಾಚರಣೆ ಶುರು ಮಾಡುತ್ತಾನೆ. ಗೆಳೆಯನ ಮೊಬೈಲ್‌ನಲ್ಲಿ ಸಿಕ್ಕ ಮಾಹಿತಿ ಸಾವಿನ ಹಿಂದಿನ ರಹಸ್ಯ ಬಯಲು ಮಾಡುತ್ತದೆ. ಅದು ಬ್ಲೂವೇಲ್‌ ಗೇಮ್‌. ಅದರಿಂದಲೇ ಆತ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಅದು ಹೇಗೆ ಎನ್ನುವುದು ಹರ್ಷಿತ್‌ಗೆ ಇರುವ ಯಕ್ಷ ಪ್ರಶ್ನೆ. ಆಗ ಶುರುವಾಗುತ್ತೆ ಚಿತ್ರದ ನಿಜವಾದ ಗೇಮ….

ತಾರಾಗಣ: ದತ್ತಣ್ಣ, ಮಂಜುನಾಥ್‌, ಹನುಮೇಶ್‌ ಪಾಟೀಲ…, ಯಮುನಾ ಶ್ರೀನಿಧಿ, ಮಾಸ್ಟರ್‌ ಹರ್ಷಿತ್‌, ಮಾಸ್ಟರ್‌ ಪ್ರೀತಿಕಾ , ಪುಷ್ಪ

ನಿರ್ದೇಶನ: ರವೀಂದ್ರ

ನಿರ್ಮಾಣ: ಮಂಜುನಾಥ್‌

ದತ್ತಣ್ಣ ,ಯಮುನಾ ಶ್ರೀನಿಧಿ, ರಮೇಶ್‌ ಪಂಡಿತ್‌ ಹಾಗೂ ಮಂಜುನಾಥ್‌ ಹೆಗಡೆ ಪರಿಚಿತ ಕಲಾವಿದರು. ಚಿತ್ರದ ನಿರ್ಮಾಪಕರಾದ ಮಂಜುನಾಥ್‌ ಹಾಗೂ ಹನುಮೇಶ್‌ ಪಾಟೀಲ್‌ ಚಿತ್ರದ ಪ್ರಮುಖ ಪಾತ್ರಗಳಿಗೂ ಬಣ್ಣ ಹಚ್ಚಿದ್ದಾರೆ. ಮಂಜುನಾಥ್‌ ಪತ್ನಿ ಪುಷ್ಪ ಹಾಗೂ ಪುತ್ರ ಹರ್ಷಿತ್‌ ಕೂಡ ಚಿತ್ರ ಮುಖ್ಯ ಪಾತ್ರಧಾರಿಗಳು.

ಚಿತ್ರ ವಿಮರ್ಶೆ: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ಬಹುತೇಕ ಅವರೆಲ್ಲ ಪಾತ್ರಕ್ಕೆ ನ್ಯಾಯ ಒದಗಿಸುವ ಬದಲಿಗೆ ತಮ್ಮದೇ ಸಿನಿಮಾ ಎನ್ನುವ ಉಮೇದಿನಲ್ಲಿಯೇ ಅಭಿನಯಿಸಿದಂತಿದೆ. ಕೆಲವೆಡೆ ಅವರ ಅಭಿನಯ ತುಂಬಾ ನಾಟಕೀಯ ಎನಿಸುತ್ತದೆ. ಚಿತ್ರ ಕಥಾ ವಸ್ತು ನೋಡುಗರಲ್ಲಿ ಕಾಡಿಸುವ ಗುಣ ಹೊಂದಿದ್ದರೂ, ನಿಧಾನಗತಿಯ ನಿರೂಪಣೆ, ಕಲಾವಿದರ ಕಳಪೆ ನಟನೆ ಚಿತ್ರದ ಲವಲವಿಕೆಯ ನೋಟಕ್ಕೆ ಅಡ್ಡಿಯಾಗಿದೆ. ಚಿತ್ರದಲ್ಲಿ ಒಂದು ಹಾಡಿದೆ. ಸಚಿನ್‌ ಅವರ ಸಂಗೀತ ಹಾಗೂ ರಾಜೇಶ್‌ ಕೃಷ್ಣ ಧ್ವನಿಯಲ್ಲಿ ಆ ಹಾಡು ಕೊನೆವರೆಗೂ ನೆನಪಲ್ಲಿ ಉಳಿಯುತ್ತದೆ.

click me!