Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?

Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?

Published : Jun 12, 2026, 08:40 PM IST

Balakrishna 111ನೇ ಚಿತ್ರದ ಗ್ಲಿಂಪ್ಸ್ ಬಿಡುಗಡೆಯಾಗಿ ವೈರಲ್ ಆಗಿದೆ. ಇದೇ ವೇಳೆ ಶೃತಿ ಅವರ 175ನೇ ಸಿನಿಮಾ 'ಮದರ್' ಮುಹೂರ್ತ, ಲಂಬೋದರ 2.0ಗೆ ಅಂತರರಾಷ್ಟ್ರೀಯ ಗಮನ. 'ಗೋಲ್ಮಾಲ್ ಗ್ಯಾಂಗ್' ಟೀಸರ್ ಕೂಡ ಸಿನಿಪ್ರಿಯರ ಗಮನ ಸೆಳೆದಿವೆ.

65ನೇ ಜನ್ಮದಿನ: ನಟ ನಂದಮೂರಿ ಬಾಲಕೃಷ್ಣ 65ನೇ ಜನ್ಮದಿನದ ಆಚರಿಸಿದ್ದಾರೆ. ಹೀಗಾಗಿ ಬಾಲಕೃಷ್ಣ ಅವರ 111ನೇ ಚಿತ್ರದ ಮೊದಲ ಝಲಕ್ ಬಿಡುಗಡೆಯಾಗಿದೆ. ‘ಎಂಟ್ರಿ ಆಫ್ ಆನ್ ಎರಾ’ ಹೆಸರಿನ ಈ ಗ್ಲಿಂಪ್ಸ್ ವೀಡಿಯೋ ಬಿಡುಗಡೆ ಆಗಿದ್ದು, ಬಾಲಯ್ಯ ಎನರ್ಜಿ ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ‘ನೋ ಮೋರ್ ವಿಂಟೇಜ್, ಓನ್ಲಿ ನ್ಯೂ ಏಜ್’ ಹೆಸರಿನ ಟ್ಯಾಗ್‌ಲೈನ್‌ನೊಂದಿಗೆ ಈ ವೀಡಿಯೋ ಹೊರಬಂದಿದೆ. ಬಾಲಯ್ಯ ಎಂದಿನ ಸಾಂಪ್ರದಾಯಿಕ ಮಾಸ್ ಶೈಲಿಗಿಂತ ಇದು ಸಂಪೂರ್ಣ ಭಿನ್ನವಾಗಿದೆ. ಹೈ-ಬಜೆಟ್ ಮೇಕಿಂಗ್ ಹಾಗೂ ಹೊಚ್ಚಹೊಸ ಮಾಡರ್ನ್ ಲುಕ್‌ನಲ್ಲಿ ಬಾಲಯ್ಯ ಅಬ್ಬರಿಸಿದ್ದಾರೆ. ಗೋವಿಚಂದ್ ನಿರ್ದೇಶನದ ಈ ಚಿತ್ರಕ್ಕೆ ‘ಕಾಂತಾರ’ ಖ್ಯಾತಿಯ ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡುತ್ತಿದ್ದಾರೆ.

ಅಭಿನಯ ಸರಸ್ವತಿ ಶೃತಿ 175ನೇ ಚಿತ್ರಕ್ಕೆ ಮುಹೂರ್ತ: ಸ್ಯಾಂಡಲ್​​ವುಡ್​​ನ ಅಭಿನಯ ಸರಸ್ವತಿ ಶೃತಿ ಈಗ 175ನೇ ಸಿನಿಮಾ ಮಾಡುತ್ತಿದ್ದಾರೆ. ಬೆಂಗಳೂರಿನ ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಚಿತ್ರಕ್ಕೆ ಮಹೂರ್ಥ ನೆರವೇರಿದೆ. ಶೃತಿಯ 175 ಚಿತ್ರಕ್ಕೆ ಮದರ್ ಎಂದು ಟೈಟಲ್​ ಇಡಲಾಗಿದೆ. ನಟ ವಿನೋದ್ ಪ್ರಭಾಕರ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕ್ಲಾಪ್ ಮಾಡಿದ್ರು. ರಾಕೇಶ್ ಸೋಮಣ್ಣ ನಿರ್ದೇಶನದ ಮದರ್ ಚಿತ್ರದಲ್ಲಿ ಮಂಡ್ಯದ ಅನಕ್ಷರಸ್ಥ ಮಹಿಳೆಯ ಕಥೆ ಇದೆ. ಚಿತ್ರದಲ್ಲಿ ಚಿರಂಜೀವಿ, ಪ್ರಸನ್ನ ಶೆಟ್ಟಿ, ಅರ್ಚನಾ ಹೆಗ್ಡೆ, ಅಭಯ್ ಪುನೀತ್, ಗೀತಾಂಜಲಿ, ಹಿಮಶ್ರೀ ತಾರಾಬಳಗದಲ್ಲಿದ್ದಾರೆ. ಆರತಿ ಹಾಗು ಸತೀಶ್ ಚಂದ್ರ ಬಂಡವಾಳ ಹೂಡಿದ್ದಾರೆ.

ಸಿಂಪಲ್ ಸುನಿ ಲಂಬೋದರ 2.0 ಚಿತ್ರಕ್ಕೆ ಅಂತರರಾಷ್ಟ್ರೀಯ ಬೇಡಿಕೆ: ಸಿಂಪಲ್ ಸುನಿ ನಿರ್ದೇಶನದ ಬಹುನಿರೀಕ್ಷಿತ ಲಂಬೋದರ 2.0 ಚಿತ್ರವು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದು, ಯುನೈಟೆಡ್ ಕಿಂಗ್‌ಡಮ್‌ನ ವೆಸ್ಟ್ ಮಿಡ್ಲ್ಯಾಂಡ್ಸ್ ಮೇಯರ್ ಕಚೇರಿಯ ಅಧಿಕೃತ ಪ್ರತಿನಿಧಿ ಮಂಡಳಿ ಹಾಗೂ ಇಂಡಿಯಾ ಗ್ಲೋಬಲ್ ಫೋರಂ ಸದಸ್ಯರು ಚಿತ್ರದ ಚಿತ್ರೀಕರಣ ಸ್ಥಳಕ್ಕೆ ಭೇಟಿ ನೀಡಿ ಚಿತ್ರೀಕರಣ ವೀಕ್ಷಿಸಿದ್ದಾರೆ. ಲಂಬೋದರ 2.0 ಚಿತ್ರದ ಮೂಲಕ ಅನಿಲ್ ಶೆಟ್ಟಿ ಹಾಗೂ ಸಾಚಿ ಬಿಂದ್ರಾ ಅವರು ನಾಯಕ-ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ಖ್ಯಾತ ಬಾಲಿವುಡ್ ನಟ ಕುನಾಲ್ ಕಪೂರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಎಐ, ಡಿಜಿಟಲ್ ಪ್ರಭಾವ ಮತ್ತು ಮಾನವ ಸಂತೋಷದ ಸುತ್ತ ಈ ಚಿತ್ರಕ್ಕೆ ಕತೆ ಹೆಣೆಯಲಾಗಿದೆ.

ದೊಡ್ಮನ್ಸ ಟ್ರೇಲರ್ ರಿಲೀಸ್: ಶರತ್ ಕೃಷ್ಣ ನಿರ್ದೇಶನದಲ್ಲಿ  ಶರತ್ ಕೃಷ್ಣ ಮತ್ತು  ರೇಷ್ಮಾ, ಶಿಲ್ಪಾ ಮುಖ್ಯ ಪಾತ್ರದಲ್ಲಿ ನಟಿಸಿರುವ  "ದೊಡ್ಮನ್ಸ" ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಪಕ್ಕಾ ಆಕ್ಷನ್ ಪ್ಯಾಕ್ಡ್ ಸಿನಿಮಾ ಅನ್ನೋದನ್ನ ಈ ಟ್ರೇಲರ್ ತೋರಿಸಿಕೊಟ್ಟಿದೆ. ಹೀರೋ ಮಾಸ್ ಅವತಾರ, ಫೈಟ್ ಸೀನ್ ಗಳು ಟ್ರೇಲರ್ ನಲ್ಲಿಯೇ ಮಾಸ್ ಪ್ರಿಯರ ಗಮನ ಸೆಳೆದಿದೆ. ಇನ್ನು ಒಂದು ಇನ್ನೊಸೆಂಟ್ ಲವ್ ಕೂಡ ಅನಾವರಣವಾಗಿದೆ. ಸಿನಿಮಾ ಬಗ್ಗೆ ಒಂದೊಳ್ಳೆ ಭರವಸೆಯನ್ನ ಈ ಟ್ರೇಲರ್ ಮೂಡಿಸಿದೆ. ಇದೇ ತಿಂಗಳ 19 ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರ್ತಿದೆ.

'ಗೋಲ್ಮಾಲ್ ಗ್ಯಾಂಗ್' ಟೀಸರ್ ರಿಲೀಸ್: ಕನ್ನಡದಲ್ಲಿ ನಕ್ಕು ಮನಸ್ಸನ್ನ ಕೂಲ್ ಆಗಿಸಿಕೊಳ್ಳುವಂತ ಸಿನಿಮಾವೊಂದು ಸಿದ್ಧವಾಗುತ್ತಿದೆ. ಅದರ ಹೆಸರೇ ಗೊಲ್ಮಾಲ್ ಗ್ಯಾಂಗ್. ಇದೀಗ ಗೋಲ್ಡನ್ ಗ್ಯಾಂಗ್​​ನ ಒಂದೊಳ್ಳೆ ಟೀಸರ್ ರಿಲೀಸ್ ಆಗಿದೆ. ಸತೀಶ್ ಚಂದ್ರ ನಿರ್ಮಾಣ ಮಾಡಿರೋ ಈ ಚಿತ್ರವನ್ನ ಶಿವಕುಮಾರ್ ನಿರ್ದೇಶಿಸಿದ್ದು, ಕಾರ್ತಿಕ್ ನಾಯಕನಾಗಿ ನಟಿಸಿದ್ದಾರೆ. ನಾಯಕಿ ಪಾತ್ರದಲ್ಲಿ ಆರಾಧನಾ ಭಟ್ ಬಣ್ಣ ಹಚ್ಚಿದ್ದು, ಮಂಡ್ಯ ರಮೇಶ್ ಪ್ರಮು ಪಾತ್ರದಲ್ಲಿ ಮಿಂಚುತ್ತಿದ್ದಾರೆ. 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
Read more