ನಾತಿ ಚರಾಮಿ ಚಿತ್ರ ಗೌರಿ ಎನ್ನುವ ವಿಧವೆ ಹೆಣ್ಣುಮಗಳ ಕತೆ. ಇದು ಹೆಣ್ಣು ಜೀವಗಳ ದೈಹಿಕ ಬಯಕೆಯ ತೊಳಲಾಟವನ್ನು ಅರ್ಥಪೂರ್ಣವಾಗಿ ಬಿಂಬಿಸುತ್ತದೆ.
ಬೆಂಗಳೂರು (ಡಿ. 27): ನಾತಿ ಚರಾಮಿ ಚಿತ್ರ ಗೌರಿ ಎನ್ನುವ ವಿಧವೆ ಹೆಣ್ಣುಮಗಳ ಕತೆ. ಇದು ಹೆಣ್ಣು ಜೀವಗಳ ದೈಹಿಕ ಬಯಕೆಯ ತೊಳಲಾಟವನ್ನು ಅರ್ಥಪೂರ್ಣವಾಗಿ ಬಿಂಬಿಸುತ್ತದೆ.
ತೇಜಸ್ವಿನಿ ಎಂಟಪ್ರ್ರೈಸಸ್‍ನ ಎಂ ರಮೇಶ್ ರೆಡ್ಡಿ (ನಂಗಲಿ) ಅವರ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬರುತ್ತಿರುವ ಎರಡನೇ ಪ್ರೀತಿಯ ಪ್ರಯತ್ನ. ತಂಡದ ಒಂದು ವರ್ಷದ ತಪಸ್ಸು, ಶ್ರಮ, ಪ್ರಯತ್ನ ಡಿಸೆಂಬರ್ 28 ರಂದು ತೆರೆ ಕಾಣಲಿದೆ. ಅಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆ ಆಗಲಿದೆ.
’ನಾತಿ ಚರಾಮಿ’ ಯಲ್ಲಿ ಶೃತಿ ಹರಿಹರನ್ ಲುಕ್ ಹೀಗಿದೆundefined
ಬದಲಾದ ಕಾಲಘಟ್ಟದಲ್ಲಿ ವಿವಾಹ, ಸಂಬಂಧಗಳು, ಬದ್ಧತೆ ಮತ್ತು ಬಯಕೆಗಳನ್ನು ಶೋಧಿಸುವ ಒಂದು ಚಿತ್ರ. ಚಿತ್ರದ ನಾಯಕಿಯಾದರೂ ಇದು ಗೌರಿಯ ಕತೆಯಷ್ಟೇ ಸುಮ, ಜಯಮ್ಮನ ಕತೆ ಸಹ ಹೌದು, ಸುರೇಶನ ಕತೆಯೂ ಹೌದು.
ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ತುಂಬಿಸಿಕೊಂಡು ಬೆಳೆದ ಗೌರಿ ಎನ್ನುವ ವಿಧವೆಯ ನಂಬಿಕೆ ಮತ್ತು ವಯೋಸಹಜ ದೈಹಿಕ ಬಯಕೆಗಳ ನಡುವಿನ ತಿಕ್ಕಾಟ, ತೊಳಲಾಟ ಚಿತ್ರದ ವಸ್ತು. ಉಟ್ಟ ಸೀರೆಯನ್ನು ಬದಲಾಯಿಸಿ ಜೀನ್ಸ್ ಏರಿಸಿದಷ್ಟು ಸುಲಭವಲ್ಲ. ನಂಬಿಕೆಗಳನ್ನು ಕಳಚಿಕೊಳ್ಳುವುದು. ಚಿತ್ರ ಇದನ್ನು ವಿಶ್ಲೇಷಿಸುತ್ತಲೇ ಗಂಡು ಹೆಣ್ಣು ಮತ್ತು ಗಂಡ ಹೆಂಡತಿಯ ನಡುವಿನ ಸಂಬಂಧಗಳಲ್ಲಿ ಪ್ರೇಮ ಮತ್ತು ಕಾಮದ ಪ್ರಾಮುಖ್ಯತೆಯನ್ನೂ ಪ್ರಶ್ನಿಸುತ್ತದೆ. ಹಾಗಾಗಿ ಇದೊಂದು ಮಹಿಳಾ ಪ್ರಧಾನ ಚಿತ್ರವೂ ಹೌದು.
’ನಾತಿ ಚರಾಮಿ’ ನಿರ್ದೇಶಕನನ್ನು ಗೆಲ್ಲಿಸಿದ್ದು ಪುಸ್ತಕಗಳ ಹುಚ್ಚು!ಬರಹಗಾರ್ತಿ ಸಂಧ್ಯಾರಾಣಿ ಚಿತ್ರಕ್ಕೆ ಕತೆಯನ್ನು ಬರೆದಿದ್ದಾರೆ. ಚಿತ್ರದ ಸಂಭಾಷಣೆ ಸಂಧ್ಯಾರಾಣಿ ಮತ್ತು ಅಭಯಸಿಂಹ ಅವರದ್ದು. ಖ್ಯಾತ ಸಂಗೀತಗಾರ್ತಿ ಬಿಂದುಮಾಲಿನಿಯವರು ಸಂಗೀತ ಸಂಯೋಜನೆ ಜೊತೆಗೆ ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ಸಂಚಾರಿ ವಿಜಯ್ ರವರು ಕೂಡ ಒಂದು ಹಾಡನ್ನು ಹಾಡಿದ್ದಾರೆ.
ಚಿತ್ರದ ತಾರಾಗಣದಲ್ಲಿ ಶೃತಿ, ಸಂಚಾರಿ ವಿಜಯ್, ಶರಣ್ಯ, ಶ್ವೇತಾ, ಗೋಪಾಲಕೃಷ್ಣ ದೇಶಪಾಂಡೆ, ಬಾಲಾಜಿ ಮನೋಹರ್, ಪೂರ್ಣಚಂದ್ರ, ಗ್ರೀಷ್ಮಾ, ಹರ್ಷಿಲ್ ಕೌಶಿಕ್, ಸೀತಾ ಕೋಟೆ, ಕಲಾಗಂಗೋತ್ರಿ ಮಂಜು ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳನ್ನು ಕಿರಣ್ ಕಾವೇರಪ್ಪ, ನಂದಿನಿ ನಂಜಪ್ಪ, ಮದನ್ ಬೆಳ್ಳಿಸಾಲು ಬರೆದಿದ್ದಾರೆ.