
ಬೆಂಗಳೂರು (ಡಿ. 27): ರಾಕಿಂಗ್ ಸ್ಟಾರ್, ಮಾಸ್ಟರ್ ಪೀಸ್, ರಾಮಾಚಾರಿ ಖದರ್ ಏನು ಅಂತ ಇಡೀ ಚಿತ್ರರಂಗಕ್ಕೆ ಕೆಜಿಎಫ್ ಮೂಲಕ ಗೊತ್ತಾಗಿದೆ. ಎಲ್ಲಾ ಭಾಷೆಯವರು ಯಶ್ ರನ್ನು ಹಾಡಿ ಹೊಗಳುತ್ತಿದ್ದಾರೆ. ರಾಕಿಂಗ್ ಸ್ಟಾರ್ ಗೆ ಉಘೇ ಉಘೇ ಎನ್ನುತ್ತಿದ್ದಾರೆ. ತಮಿಳು ನಟ ವಿಶಾಲ್ ಯಶ್ ಪರ ಬ್ಯಾಟಿಂಗ್ ಮಾಡಿದ್ದು ಗೊತ್ತೇ ಇದೆ. ಇದೀಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಯಶ್ ಗಾಗಿ ವಿಶೇಷ ವಿಡಿಯೋವೊಂದನ್ನು ರೆಡಿ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಯಶ್ ಯಾರು, ಅವರ ಹಿನ್ನಲೆಯೇನು? ಜೀವನದಲ್ಲಿ ಮುಂದೆ ಬರಲು ಪಟ್ಟ ಕಷ್ಟವೇನು? ಎಂಬುದನ್ನು ತಮಿಳಿಗರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.
ಮಂಡ್ಯ ಲೋಕಸಭೆಗೆ ಕೆಜಿಎಫ್ ಕಿಂಗ್ ಸ್ಪರ್ಧೆ?
ಬಸ್ ಕಂಡಕ್ಟರ್ ಮಗನೊಬ್ಬ ಈ ಪರಿ ಬೆಳೆದುನಿಂತಿದ್ದು ನಿಜಕ್ಕೂ ದೊಡ್ಡ ಸಾಧನೆ.ಮೊಗ್ಗಿನ ಮನಸ್ಸು ಚಿತ್ರದಿಂದ ಹಿಡಿದು ಆರಂಭವಾದ ಸಿನಿ ಜರ್ನಿ ಈಗ ಕೆಜಿಎಫ್ ಸಕ್ಸಸ್ ವರೆಗೂ ಬಂದು ನಿಂತಿದೆ. ಇದುವರೆಗೂ ನಡೆದು ಬಂದ ಹಾದಿಯ ಬಗ್ಗೆ ಪ್ರಸ್ತಾಪಿಸಲಾಗಿದೆ.
ಕೇವಲ ನಟನಾಗಿ ತೆರೆ ಮೇಲೆ ಹೀರೋ ಅಷ್ಟೇ ಅಲ್ಲ. ಸಾಮಾಜಿಕ ಕೆಲಸಗಳಲ್ಲೂ ಯಶ್ ಯಾವಾಗಲೂ ಮುಂದು. ಯಶೋಮಾರ್ಗದ ಮೂಲಕ ಸಾಮಾಜಿಕ ಕೆಲಸಗಳು, ರೈತರ ಪರ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಅಲ್ಲೂ ಸೈ ಎನಿಸಿಕೊಂಡಿದ್ದಾರೆ. ಈ ಬಗ್ಗೆಯೂ ವಿಡಿಯೋದಲ್ಲಿ ಹೇಳಿದ್ದಾರೆ.
ಇದಕ್ಕಿಂತ ಬೇರೆ ಗೌರವ ಇನ್ನೇನಿದೆ ಅಲ್ವಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.