Madhuri Dixit: ಸ್ಟಾರ್‌ ನಟಿ ಆದ್ರೂ ಧಕ್ ಧಕ್ ಸುಂದರಿಗೆ ಮನೆಯಲ್ಲಿ ತಪ್ಪದ ಬೈಗುಳ !

By Suvarna News  |  First Published Feb 26, 2022, 4:11 PM IST

ಬಾಲಿವುಡ್‌ (Bollywood)ನ ಆ ಸ್ಟಾರ್‌ ನಟಿಗೆ ಹೈಯೆಸ್ಟ್ ಫ್ಯಾನ್‌ ಫಾಲೋವಿಂಗ್ ಇದೆ. ಆಕೆಯ ಡ್ಯಾನ್ಸ್ (Dance) ನೋಡಿದ್ರಂತೂ ಎಲ್ರೂ ಫಿದಾ ಆಗಿಬಿಡ್ತಾರೆ. ಆದ್ರೆ ಕೋಟ್ಯಾಂತರ ಮಂದಿ ಮನಸ್ಸಲ್ಲಿಟ್ಟು ಆರಾಧಿಸೋ ಆ ನಟಿಗೆ ಮನೆಯಲ್ಲಿ ಮಾತ್ರ ಬೈಗುಳ ತಪ್ಪಿಲ್ಲವಂತೆ.


ಸೆಲೆಬ್ರಿಟಿ (Celebrity)ಗಳ ಲೈಫ್ ಸ್ಟೈಲೇ ಬೇರೆ. ನೇಮ್, ಫೇಮ್ ಪಾಪ್ಯುಲಾರಿಟಿ ಎಲ್ಲವೂ ಇರುತ್ತದೆ. ಹೀಗಾಗಿಯೇ ಅವರು ಹೋದಲ್ಲಿ ಬಂದಲ್ಲೆಲ್ಲಾ ಗೌರವ ಕೊಡುವ ಮಂದಿ ಜಾಸ್ತಿಯಿರುತ್ತಾರೆ. ಸೆಲೆಬ್ರಿಟಿ ಎಂಬ ಪ್ರೀತಿಗೂ, ಸಾಧನೆ ಮಾಡಿದ ಗೌರವಕ್ಕೂ ಅವರಿಗೆ ಸಮಾಜದಲ್ಲಿ ಪ್ರತ್ಯೇಕವಾದ ಸ್ಥಾನವಿರುತ್ತದೆ. ಮಾತ್ರವಲ್ಲ ಕುಟುಂಬ, ಸ್ನೇಹಿತರು, ಬಂಧು ಬಳಗದಲ್ಲೂ ಹೆಚ್ಚಿನ ಮರ್ಯಾದೆಯಿರುತ್ತದೆ. ಆದ್ರೆ ಬಾಲಿವುಡ್‌ನ ಈ ಟಾಪ್ ನಟಿ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಆದ್ರೂ ಮನೆಯಲ್ಲಿ ಸಿಗೋ ಬೈಗುಳ ಮಾತ್ರ ತಪ್ಪಿಲ್ಲವಂತೆ. 

ಹೀಗೆ ಹೇಳಿರೋದು ಮತ್ಯಾರೂ ಅಲ್ಲ. ಬಾಲಿವುಡ್‌ನ ಧಕ್ ಧಕ್ ಚೆಲುವೆ ಮಾಧುರಿ ದೀಕ್ಷಿತ್ (Madhuri Dixit). ಇತ್ತೀಚಿನ ಸಂವಾದದಲ್ಲಿ, ನಟಿ ಮಾಧುರಿ ದೀಕ್ಷಿತ್, ತಾರೆಯಾದ ನಂತರವೂ ಕುಟುಂಬವು ನನ್ನನ್ನು ವಿಭಿನ್ನವಾಗಿ ಪರಿಗಣಿಸಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ತಾರೆಯಾದ ನಂತರವೂ ಕೋಣೆಯನ್ನು ಕ್ಲೀನ್ ಮಾಡಿ ಇಡದ್ದಕ್ಕೆ ತಾಯಿ (Mother) ನನ್ನನ್ನು ಗದರಿಸುತ್ತಿದ್ದರು ಎಂದು ಮಾಧುರಿ ದೀಕ್ಷಿತ್ ಹೇಳಿದ್ದಾರೆ.

Tap to resize

Latest Videos

ಎಲೆಕ್ಟ್ರೀಶಿಯನ್‌ ಎಂದು ಹೇಳಿಕೊಂಡು ನಟಿ Madhuri Dixit ಮನೆಗೆ ನುಗ್ಗಿದ ವ್ಯಕ್ತಿ; ಆಮೇಲೆ ಏನಾಯ್ತು

ಮಾಧುರಿ ದೀಕ್ಷಿತ್ ಚೊಚ್ಚಲ ವೆಬ್ ಸಿರೀಸ್ ‘ದಿ ಫೇಮ್ ಗೇಮ್‌’ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಮಾಧುರಿ ಸ್ಟಾರ್ ನಟಿಯ ಪಾತ್ರ ಮಾಡಿದ್ದಾರೆ. ಭಾರತದ ಫೇಮಸ್ ನಟಿ (Actress)ಯೊಬ್ಬಳು ಕಾಣೆಯಾಗುತ್ತಾಳೆ. ಆಕೆಯನ್ನು ಹುಡುಕುತ್ತಾ ಹೊರಟಾಗ ಆಕೆಯ ಬದುಕಿನ ಕರಾಳ ಪುಟಗಳ ಪರಿಚಯವಾಗುತ್ತಾ ಹೋಗುತ್ತದೆ. ಇದು ವೆಬ್ ಸಿರೀಸ್ (Web Series) ‘ದಿ ಫೇಮ್ ಗೇಮ್‌’ನ ಸ್ಟೋರಿ. 

ವೆಬ್ ಸಿರೀಸ್ ಖ್ಯಾತ ನಟಿಯ ಜೀವನದ ಕರಾಳ ಭಾಗವನ್ನು ತೋರಿಸುತ್ತದೆ. ಜನಪ್ರಿಯತೆಯು ಜೀವನ ನಕಾರಾತ್ಮಕ ರೀತಿಯಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸುತ್ತದೆ. ಈ ವೆಬ್ ಸಿರೀಸ್ ಕುರಿತಾಗಿ ಇತ್ತೀಚಿಗೆ ನಡೆದ ಸಂವಾದದಲ್ಲಿ ಮಾಧುರಿ ಅವರು ನಿಜ ಜೀವನದಲ್ಲಿ ನಾನು ಎಂದಿಗೂ ಇಂಥಾ ಸಮಸ್ಯೆ ಎದುರಿಸಿಲ್ಲ ಎಂದು ಹೇಳಿದರು. ಅಲ್ಲದೆ, ಪೋಷಕರ ಪಾಲನೆಯು ಖ್ಯಾತಿ ಬಂಧರೂ ನನ್ನ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರಲ್ಲಿಲ್ಲ ಎಂದು ತಿಳಿಸಿದರು. ಪ್ರಸಿದ್ಧ ಮತ್ತು ಯಶಸ್ವಿ ನಟಿಯಾದ ನಂತರವೂ ಅವರ ತಾಯಿ ಸ್ನೇಹಲತಾ ದೀಕ್ಷಿತ್ ಅವರ ನಡವಳಿಕೆಯು ಹೇಗೆ ಬದಲಾಗಲಿಲ್ಲ ಎಂದು ಅವರು ವಿವರಿಸಿದರು.

33 years of Ram Lakhan: ಬ್ಲಾಕ್ ಬಸ್ಟರ್ ಸಿನಿಮಾದ ಅನ್‌ಸೀನ್ ಫೋಟೋ ಶೇರ್ ಮಾಡಿದ ಮಾಧುರಿ?

ಸ್ಟಾರ್‌ಡಮ್ ಅವರ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಿದೆಯೇ ಎಂದು ಕೇಳಿದಾಗ, ಮಾಧುರಿ ದೀಕ್ಷಿತ್ ಅವರು,  ‘ಸಿನಿಮಾ (Cinema)ಗಳಲ್ಲಿ ಮಾಡುತ್ತಿದ್ದಾಗಲೂ, ನನ್ನ ಕೋಣೆ ಅವ್ಯವಸ್ಥೆಯಾಗಿದ್ದರೆ ನನ್ನ ತಾಯಿ ನನ್ನನ್ನು ಗದರಿಸುತ್ತಿದ್ದರು. ಹಾಗಾಗಿ ನಾನು ಹೇಗಿದ್ದೆ. ಬೆಳೆದೆ. ಮತ್ತು ನಾನು ಹೇಗಿದ್ದೇನೆ ಎಂಬುದು ನನಗೆ ತಿಳಿದಿದೆ. ನಾನು ಮನೆಗೆ ಹೋದಾಗ ನನ್ನ ಮಕ್ಕಳನ್ನು ನೋಡುತ್ತೇನೆ ಮತ್ತು ಗಂಡನನ್ನು ನೋಡುತ್ತೇನೆ ಮತ್ತು ಅದು ವಿಭಿನ್ನವಾದ ಜೀವನವಾಗಿದೆ. ಸ್ಟಾರ್‌ಡಮ್ ನಿಂದ ನಾನು ಎಂದಿಗೂ ನನ್ನನ್ನು ಕಳೆದುಕೊಂಡಿಲ್ಲ.’ ಎಂದು ನಟಿ ತಿಳಿಸಿದ್ದಾರೆ.

ನಟನೆಯನ್ನು ನಾನು ವೃತ್ತಿಯಾಗಿ ನೋಡುತ್ತೇನೆ. ಕ್ಯಾಮೆರಾದ ಮುಂದೆ ಹೋದಾಗ, ನಾನು ವೃತ್ತಿಪರ ನಟಿ. ಮತ್ತು ನಾನು ಏನು ಮಾಡುತ್ತಿದ್ದೇನೆಂದು ನನಗೆ ತಿಳಿದಿದೆ. ನಾನು ಸ್ಕ್ರಿಪ್ಟ್‌ನ್ನು ಹೇಳುತ್ತೇನೆ ಮತ್ತು ನಟಿಸುತ್ತೇನೆ. ನಾನು ಆ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ, ನಾನು ಕ್ಯಾಮೆರಾಗಾಗಿ ಆ ಪಾತ್ರವನ್ನು ಮಾಡುತ್ತೇನೆ. ಆದರೆ ಅಲ್ಲಿಂದ ಮನೆಗೆ ಹಿಂತಿರುಗಿದಾಗ ನಾನು ಸಾಮಾನ್ಯ ವ್ಯಕ್ತಿ, ಏಕೆಂದರೆ ನಾನು ಬೆಳೆದ ರೀತಿ ಅದು’ ಎಂದು ಮಾಧುರಿ ದೀಕ್ಷಿತ್ ಹೇಳಿದ್ದಾರೆ.

ಫೇಮ್ ಗೇಮ್ ಮಾಧುರಿಯ ಒಟಿಟಿ ಚೊಚ್ಚಲ ಚಿತ್ರವಾಗಿದೆ. ಶ್ರೀ ರಾವ್ ರಚಿಸಿದ ಈ ಸರಣಿಯು ಫೆಬ್ರವರಿ 25 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸಿತು. ಇದರಲ್ಲಿ ಸಂಜಯ್ ಕಪೂರ್, ಮಾನವ್ ಕೌಲ್, ಮುಸ್ಕಾನ್ ಜಾಫೇರಿ ಮತ್ತು ಲಕ್ಷವೀರ್ ಸರನ್ ಸಹ ನಟಿಸಿದ್ದಾರೆ.

click me!