
ಬಾಲಿವುಡ್ ನಟ, ನಟಿಯರು ಎಲ್ಲಿ ಹೋದ್ರೂ, ಏನ್ ಡ್ರೆಸ್ ಮಾಡಿದ್ರೂ, ಯಾರ ಜೊತೆ ಕಾಣಿಸಿಕೊಂಡ್ರೂ ಸುದ್ದಿಯಾಗುತ್ತೆ. ಹೀಗಾಗಿಯೇ ಸೆಲೆಬ್ರಿಟಿಗಳು ಕ್ಯಾಮರಾ ಕಣ್ಣಿನಿಂದ ತಪ್ಪಿಸಿಕೊಂಡು ಓಡಾಡಲು ಪ್ರಯತ್ನಿಸುತ್ತಾರೆ. ಹೀಗಿದ್ದೂ ಕೆಲವೊಮ್ಮೆ ಇವ್ರ ಗುಟ್ಟು ರಟ್ಟಾಗುವುದಿದೆ. ಸದ್ಯ ಹೀಗೆ ಟ್ರೆಂಡ್‌ನಲ್ಲಿರೋದು ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಹಾಗೂ ಗೆಳತಿ ಸಾಬಾ ಆಜಾದ್.
ಕಳೆದ ಕೆಲವು ದಿನಗಳಿಂದ ನಟ ಹೃತಿಕ್ ರೋಷನ್ ಗೆಳತಿ ಸಾಬಾ ಆಜಾದ್ (Saba Azad) ಜತೆ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೇ ಸಾಬಾ ಆಜಾದ್, ಹೃತಿಕ್ ರೋಷನ್ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವ ವೀಡಿಯೋ ವೈರಲ್ ಆಗಿತ್ತು. ಸದ್ಯ ಈ ಜೋಡಿ ಕೇರಳದಲ್ಲಿ ಲಂಚ್ ಡೇಟ್ (Lunch Date) ಮಾಡಿದ್ದು, ಜತೆಯಾಗಿ ಫುಡ್ ಎಂಜಾಯ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಈ ಜೋಡಿ ಕೇರಳದಲ್ಲಿ ಲಂಚ್ ಡೇಟ್ ಮಾಡಿರುವ ವೀಡಿಯೋ ವ್ಯಾಪಕ ಮೆಚ್ಚುಗೆ ಗಳಿಸಿದೆ.
ಹೃತಿಕ್ ರೋಷನ್ ಡೇಟಿಂಗ್ ಮಾಡುತ್ತಿರುವ ನಟಿ Saba Azad ಪರಿಚಯ ಹೇಗಾಯ್ತು?
ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಕೇರಳದ ಹೋಮ್‌ಸ್ಟೈಲ್ ಆಹಾರವನ್ನು ಆನಂದಿಸಿದ್ದಾರೆ. ಈ ಕುರಿತಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ನಾಯರ್ ಆನ್ ಫೈರ್, ಹೋಮ್‌ಸ್ಟೈಲ್ ಕೇರಳ (Kerala) ಪಾಕಪದ್ಧತಿಯ ಅಡುಗೆ ಎಂದು ಶೀರ್ಷಿಕೆ ನೀಡಲಾಗಿದೆ. ಸಂಡೇ ಸದ್ಯದ ಕುರಿತಾಗಿ ಒಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ‘ಹೃತಿಕ್ ರೋಷನ್ ಮತ್ತು ಸಬಾಗಾಗಿ ವಿಶೇಷ ಕೇರಳ ಸದ್ಯವನ್ನು ಸಿದ್ಧಪಡಿಸಲಾಗಿದೆ’ ಎಂದು ತಿಳಿಸಲಾಗಿದೆ. ಇನ್ನೊಂದು ಪೋಸ್ಟ್‌ನಲ್ಲಿ , ಮಲ್ಲು ಆಹಾರದ ಮೇಲಿನ ಇಂಥಾ ಪ್ರೀತಿಯನ್ನು ನೋಡಲು ಹೃದಯಸ್ಪರ್ಶಿಯಾಗಿದೆ. ಕೇರಳ ಶೈಲಿಯ ಊಟಕ್ಕೆ ಸದ್ಯ ಎಂದು ಕರೆಯಲಾಗುತ್ತದೆ ಎಂದು ಬರೆದಿದ್ದಾರೆ.
ಚಿತ್ರದಲ್ಲಿ, ಹೃತಿಕ್ ಬಿಳಿ ಟೀ ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದು, ಮತ್ತು ಆಹಾರ ಕಂಪನಿಯ ಸ್ಥಾಪಕ ಪಾಲುದಾರರಾದ ಸಾರಾ ಜಾಕೋಬ್ ನಾಯರ್ ಮತ್ತು ಟೋರಲ್ ಸಂಘವಿ ಅವರೊಂದಿಗೆ ಪೋಸ್ ನೀಡಿದ್ದಾರೆ. ಮತ್ತೊಂದು ಚಿತ್ರದಲ್ಲಿ ಸಬಾ ಇಬ್ಬರು ಮಹಿಳೆಯರೊಂದಿಗೆ ಫೋಸ್ ನೀಡಿದ್ದಾರೆ. ಸಬಾ ಬಿಳಿ ಟಾಪ್ ಮತ್ತು ಹಸಿರು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಸಾಬಾ ಆಜಾದ್ ಪೋಸ್ಟ್‌ನಲ್ಲಿ ಕೇರಳ ಶೈಲಿಯ ಊಟಕ್ಕಾಗಿ ಅಡುಗೆ ಸೇವೆಗೆ ಹೃದಯ ತುಂಬಿದ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಹೃತಿಕ್ ರೋಷನ್ ಮತ್ತು ಕರೀನಾ,ಕತ್ರಿನಾ, ಸಬಾ ಆಜಾದ್ .. ಲಿಂಕ್ ಅಪ್‌ಗಳದ್ದೇ ಪಟ್ಟಿ!
ಇದಕ್ಕೂ ಮೊದಲು ಸಾಬಾ ಆಜಾದ್ ಹೃತಿಕ್ ಅವರ ಚಿಕ್ಕಪ್ಪ ರಾಜೇಶ್ ರೋಷನ್ ಕುಟುಂಬವು ಊಟಕ್ಕೆ ಒಟ್ಟುಗೂಡಿದ ಚಿತ್ರವನ್ನು ಹಂಚಿಕೊಂಡಿದ್ದರು. ಇದರಲ್ಲಿ ಹೃತಿಕ್ ರೋಷನ್ ಕುಟುಂಬದ ಜತೆ ಸಾಬಾ ಕೂಡ ಕಾಣಿಸಿಕೊಂಡಿದ್ದರು. ‘ಸಂತೋಷವು ಯಾವಾಗಲೂ ಸುತ್ತಲೂ ಇರುತ್ತದೆ. ವಿಶೇಷವಾಗಿ ಭಾನುವಾರದ ಊಟದ ಸಮಯದಲ್ಲಿ’ ಎಂದು ಅವರು ಬರೆದುಕೊಂಡಿದ್ದರು.
ಹೃತಿಕ್ ಮತ್ತು ಸಬಾ ನಡುವೆ ಕುಚ್ ಕುಚ್ ಇದೆ ಅನ್ನೋದು ಕಳೆದ ತಿಂಗಳು ಇಬ್ಬರು ರೆಸ್ಟೋರೆಂಟ್‌ನಿಂದ ಕೈ ಕೈ ಹಿಡಿದು ಹೊರಬಂದಾಗಲೇ ಸುದ್ದಿಯಾಗಿತ್ತು. ಆದರೆ ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದನ್ನು ಇನ್ನೂ ಖಚಿತಪಡಿಸಿಲ್ಲ. ಹೃತಿಕ್ ಈ ಹಿಂದೆ ಸುಸಾನ್ ಖಾನ್‌ನ್ನು ವಿವಾಹವಾಗಿದ್ದು, ಅವರೊಂದಿಗೆ ಹ್ರೇಹಾನ್ ಮತ್ತು ಹೃದಯಾನ್ ಎಂಬ ಮಕ್ಕಳಿದ್ದಾರೆ. 2014 ರಲ್ಲಿ ಹೃತಿಕ್ ರೋಷನ್ ಮತ್ತು ಸುಸಾನ್ ವಿಚ್ಛೇದನ ವಾಗಿತ್ತು.
ಬಿಟೌನ್‌ನಲ್ಲಿ ಸದ್ಯ ಸಾಲು ಸಾಲು ಮದುವೆಗಳು ನಡೀತಾನೆ ಇವೆ. ಕಾಜಲ್ ಅಗರ್‌ವಾಲ್, ಯಾಮಿ ಗೌತಮ್, ಅಂಕಿತಾ ಲೋಖಂಡೆ, ಮೌನಿರಾಯ್, ಕರಿಷ್ಮಾ ತನ್ನಾ ಹೀಗೆ ಹಲವರು ಮದುವೆಯಾಗಿದ್ದಾರೆ. ಹೀಗಾಗಿ ಈ ಲಿಸ್ಟ್‌ಗೆ ಹೃತಿಕ್ ರೋಷನ್ ಹಾಗೂ ಸಾಬಾ ಆಜಾದ್ ಸೇರ್ತಾರಾ ಅಂತ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ. ಬಾಲಿವುಡ್ ಜೋಡಿಯ ಲಂಚ್ ಡೇಟ್ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.