Kangana Controversy: ರಿಯಾಲಿಟಿ ಷೋ 'ಲಾಕ್‌ ಅಪ್'ಗೆ ಹೈದರಾಬಾದ್ ಕೋರ್ಟ್ ತಡೆಯಾಜ್ಞೆ

Suvarna News   | Asianet News
Published : Feb 26, 2022, 03:07 PM ISTUpdated : Feb 26, 2022, 03:08 PM IST
Kangana Controversy: ರಿಯಾಲಿಟಿ ಷೋ 'ಲಾಕ್‌ ಅಪ್'ಗೆ ಹೈದರಾಬಾದ್ ಕೋರ್ಟ್ ತಡೆಯಾಜ್ಞೆ

ಸಾರಾಂಶ

ಅಭಿನಯಕ್ಕೂ ಸೈ, ವಿವಾದಕ್ಕೂ ಸೈ ಅನ್ನೋ ಕ್ವೀನ್‌ ನಟಿ ಕಂಗನಾ ರಣಾವತ್‌ (Kangana Ranaut)ಗೆ ಸದ್ಯ ಹೊಸ ತಲೆನೋವು ಶುರುವಾಗಿದೆ. ಹೈದರಾಬಾದ್‌ನ ಸ್ಥಳೀಯ ನ್ಯಾಯಾಲಯವು ಕಂಗನಾ ರಣಾವತ್ ಅವರ ರಿಯಾಲಿಟಿ ಶೋ (Reality Show) ಲಾಕ್ ಅಪ್ ಬಿಡುಗಡೆಗೆ ತಡೆ ನೀಡಿದೆ.

ಸದಾ ಒಂದಿಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ನಟಿ (Bollywood) ಕಂಗನಾ ರಣಾವತ್ (Kangana Ranaut). ಅದ್ಭುತ ಅಭಿನಯದಿಂದಲೇ ಎಲ್ಲರ ಗಮನ ಸೆಳೆದಿರುವ ಕಂಗನಾ ಪದ್ಮಶ್ರೀ ಪ್ರಶಸ್ತಿ (Padma Shri Award)ಗೂ ಭಾಜನಾಗಿದ್ದಾರೆ. ಆದರೆ ಅಭಿನಯಕ್ಕೆ ಸೈ ಎನಿಸಿಕೊಂಡಿರುವ ಈ ನಟಿ ಆಗಿಂದಾಗೆ ವಿವಾದಗಳನ್ನು ಮಾಡಿಕೊಳ್ಳುತ್ತಾರೆ. ಇತಿಹಾಸ, ದೇಶದ ಬಗ್ಗೆ, ನಟರ ಬಗ್ಗೆ ಕಾಮೆಂಟ್ ಮಾಡಿ ಸದಾ ಸುದ್ದಿಯಲ್ಲಿರುವ ಕಂಗನಾ ರಣಾವತ್ ಸದ್ಯ ತಮ್ಮ ಹೊಸ ರಿಯಾಲಿಟಿ ‘ಲಾಕ್ ಅಪ್’ನಿಂದಾಗಿ ಸುದ್ದಿಯಲ್ಲಿದ್ದಾರೆ. 

ಹೈದರಾಬಾದ್‌ನ ಸ್ಥಳೀಯ ನ್ಯಾಯಾಲಯವು ಕಂಗನಾ ರಣಾವತ್ ಅವರ ರಿಯಾಲಿಟಿ ಟಿವಿ ಶೋ ಲಾಕ್ ಅಪ್ ಬಿಡುಗಡೆಗೆ ತಡೆ ನೀಡಿದೆ. ಏಕ್ತಾ ಕಪೂರ್ ನಿರ್ಮಾಣದ ಲಾಕ್ಅಪ್ ರಿಯಾಲಿಟಿ ಶೋ (Reality Show) ಪ್ರದರ್ಶನವು ಫೆಬ್ರವರಿ 27ರ ಭಾನುವಾರದಂದು ಬಿಡುಗಡೆಯಾಗಬೇಕಿತ್ತು. ಆದರೆ, ಹೈದರಾಬಾದ್‌ನ ಸ್ಥಳೀಯ ನ್ಯಾಯಾಲಯವು ತಡೆಯಾಜ್ಞೆ ನೀಡಿದ ಕಾರಣ ಈ ರಿಯಾಲಿಟಿ ಷೋಗೆ ಕಾನೂನು ತೊಂದರೆಗಳು ಹೆಚ್ಚಿವೆ. 

Gangubai Kathiawadi : ಆಲಿಯಾ ರೀತಿ ಬಾಯಲ್ಲಿ ಬೀಡಿ ಇಟ್ಟುಕೊಂಡ ಬಾಲಕಿ, ಕಂಗನಾ ಕೆಂಡ!

ಕಂಗನಾ ರಣಾವತ್, ಏಕ್ತಾ ಕಪೂರ್ ಅವರ ರಿಯಾಲಿಟಿ ಟಿವಿ ಶೋ ‘ಲಾಕ್ ಅಪ್’ ತನ್ನ ಗೇಮ್ ಶೋ ಪರಿಕಲ್ಪನೆಯ ನಕಲು ಎಂದು ಅರ್ಜಿದಾರರಾದ ಸನೋಬರ್ ಬೇಗ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 'ದಿ ಜೈಲ್' ಪರಿಕಲ್ಪನೆಯ ಕಥೆ ಮತ್ತು ಸ್ಕ್ರಿಪ್ಟ್‌ನ ಏಕೈಕ ಹೋಲ್ಡರ್ ತಾನು ಎಂದು ಸನೋಬರ್ ಬೇಗ್ ವಾದಿಸಿದ್ದಾರೆ. ಹೀಗಾಗಿ ಹೈದರಾಬಾದ್‌ನ ಸಿಟಿ ಸಿವಿಲ್ ಕೋರ್ಟ್ ಕಂಗನಾ ರಣಾವತ್ ನಡೆಸಿಕೊಡಲಿರುವ ಮುಂಬರುವ ಶೋ 'ಲಾಕ್ ಅಪ್' ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಅರ್ಜಿದಾರ ಸನೋಬರ್ ಬೇಗ್ ಅವರು ಸಲ್ಲಿಸಿದ ದಾಖಲೆಗಳ ವಿಚಾರಣೆ ಮತ್ತು ಪರಿಶೀಲನೆಯ ನಂತರ ಫೆಬ್ರವರಿ 23ರಂದು ಆದೇಶ ಹೊರಡಿಸಲಾಗಿದೆ.
ನ್ಯಾಯಾಲಯವು 'ಲಾಕ್ ಅಪ್' ನ ಟ್ರೇಲರ್‌ನ ವೀಡಿಯೊ ಕ್ಲಿಪ್ ನ್ನು ಸಹ ತೆಗೆದುಕೊಂಡಿದ್ದು, ಇದು ಸನೋಬರ್ ಬೇಗ್ ಸಲ್ಲಿಸಿದ ದಾಖಲೆಗಳಲ್ಲಿರುವಂತಿದೆ ಎಂದು ತೀರ್ಮಾನಿಸಿತು. ಒಟಿಟಿ ಪ್ಲಾಟ್‌ಫಾರ್ಮ್ ಆಲ್ಟ್ ಬಾಲಾಜಿ ಮತ್ತು ಎಮ್‌ಎಕ್ಸ್ ಪ್ಲೇಯರ್‌ನಲ್ಲಿ ಭಾನುವಾರ ಪ್ರದರ್ಶನವನ್ನು ಬಿಡುಗಡೆ ಮಾಡಬೇಕಾಗಿರುವುದರಿಂದ, ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಮಾಧ್ಯಮ ಇತ್ಯಾದಿಗಳಲ್ಲಿ ಪ್ರದರ್ಶನವನ್ನು ನಿಷೇಧಿಸುವ ತುರ್ತು ನೋಟಿಸ್‌ನೊಂದಿಗೆ ನ್ಯಾಯಾಲಯವು ಆದೇಶವನ್ನು ನೀಡಿದೆ.

ಕಂಗನಾ ರಣಾವತ್ ನಡೆಸಿಕೊಡೋ Lock UPP ರಿಯಾಲಿಟೋ ಶೋ ಟೀಸರ್ ನೋಡಿದ್ರಾ?

'ದಿ ಜೈಲ್' ನ ಮೂಲ ಪರಿಕಲ್ಪನೆಯನ್ನು ಪ್ರೈಡ್ ಮೀಡಿಯಾ ಅದರ ಮಾಲೀಕ ಸನೋಬರ್ ಬೇಗ್ ಮೂಲಕ ಹೊಂದಿದ್ದು, ಇದನ್ನು ಶಾಂತನು ರೇ ಮತ್ತು ಶೀರ್‌ಶಕ್ ಆನಂದ್ ಬರೆದಿದ್ದಾರೆ. ಮಾರ್ಚ್ 7, 2018 ರಂದು ಹಕ್ಕುಸ್ವಾಮ್ಯ ಕಾಯ್ದೆಯಡಿ ನೋಂದಾಯಿಸಲಾಗಿದೆ ಎಂದು ತಿಳಿದುಬಂದಿದೆ. ತನ್ನ ಅರ್ಜಿಯಲ್ಲಿ, ಫಿರ್ಯಾದಿ ಸನೋಬರ್ ಬೇಗ್ ಪರಿಕಲ್ಪನೆಯನ್ನು ಹೇಗೆ ಅಭಿವೃದ್ಧಿಪಡಿಸಲಾಗಿದೆ ಎಂಬುದನ್ನು ವಿವರಿಸಿದ್ದಾರೆ ಮತ್ತು ಪರಿಕಲ್ಪನೆಯನ್ನು ವಿವರವಾಗಿ ವಿವರಿಸಿದ್ದಾರೆ, ಪರಿಕಲ್ಪನೆಯ ಅಭಿವೃದ್ಧಿಯ ವಿವಿಧ ಹಂತಗಳಲ್ಲಿ ಅವರು ಹೂಡಿಕೆ ಮಾಡಿದ ಹಣದ ವಿವರಗಳನ್ನು ನೀಡಿದ್ದಾರೆ. 

ಕಂಗಾನಾ ರಣಾವತ್ ರಿಯಾಲಿಟಿ ಷೋ ಬಗ್ಗೆ ಪ್ರತಿಕ್ರಿಯಿಸಿದ ಸನೋಬರ್, ‘ನಾನು ಕಾರ್ಯಕ್ರಮದ ಪ್ರೋಮೋವನ್ನು ನೋಡಿದಾಗ ಆಘಾತಕ್ಕೊಳಗಾಗಿದ್ದೆ. ಪ್ರದರ್ಶನವು ನಮ್ಮ ಪರಿಕಲ್ಪನೆಯನ್ನು ಹೋಲುತ್ತದೆ. ರಿಯಾಲಿಟಿ ಷೋ ಅದರ ಸಂಪೂರ್ಣ ಪ್ರತಿಯಾಗಿದೆ. ಯಾರಾದರೂ ಪರಿಕಲ್ಪನೆಯನ್ನು ಇಷ್ಟೊಂದು ಪ್ರಮಾಣದಲ್ಲಿ ಕೃತಿಚೌರ್ಯ ಮಾಡಬಹುದೆಂದು ನನಗೆ ನಂಬಲಾಗಲಿಲ್ಲ. ಹಕ್ಕುಸ್ವಾಮ್ಯದ ಉಲ್ಲಂಘನೆಗಾಗಿ ನಾವು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದೇವೆ ಮತ್ತು ತಡೆಯಾಜ್ಞೆ ಪಡೆದಿದ್ದೇವೆ’ ಎಂದು ತಿಳಿಸಿದ್ದಾರೆ.

ಅದೇನೆ ಇರ್ಲಿ, ಸದಾ ವಿವಾದದಿಂದ ಸುದ್ದಿಯಾಗುವ ತಲೈವಿ ನಟಿ ಕಂಗನಾ ರಣಾವತ್ ಈಗ ತನ್ನ ಹೊಸ ರಿಯಾಲಿಟಿ ಷೋ ವಿವಾದದಲ್ಲಿ ತಾನೇ ಲಾಕ್ ಆಗಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ್ದೇಕೆ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?
ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?