ಅ.28ರೊಳಗೆ ಭಾರತ ತೊರೆಯಬೇಕು, CEC ಹೋರಾಟದಲ್ಲಿ ಪಾಲ್ಗೊಂಡ ನಟ ಇಮ್ರಾನ್‌ಗೆ ನೋಟಿಸ್

Published : Oct 15, 2026, 11:33 AM IST
Imran Khan

ಸಾರಾಂಶ

ಅಕ್ಟೋಬರ್ 28ರೊಳಗೆ ಭಾರತ ಬಿಟ್ಟು ತೊರೆಯಲು ಪೊಲೀಸರು ನಟ ಇಮ್ರಾನ್ ಖಾನ್‌ಗೆ ನೋಟಿಸ್ ನೀಡಿದ್ದಾರೆ. ಗ್ಯಾನೇಶ್ ಕುಮಾರ್ ಹೋರಾಟದಲ್ಲಿ ಪಾಲ್ಗೊಂಡ ನಟ ಆಮೀರ್ ಖಾನ್ ಆಪ್ತ ಸಂಬಂಧಿಗೆ ಇದೀಗ ಸಂಕಷ್ಟ ಹೆಚ್ಚಾಗಿದೆ.

ಮುಂಬೈ (ಅ.15) ಬಾಲಿವುಡ್ ನಟ ಅಮೀರ್ ಖಾನ್ ಆಪ್ತ ಸಂಬಂಧಿ, ನಟ ಇಮ್ರಾನ್ ಖಾನ್ ಇತ್ತೀಚೆಗೆ ಚುನಾವಣಾ ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ಆಗ್ರಹಿಸಿ ನಡೆಸಿದ ಹೋರಾಟದಲ್ಲಿ ಪಾಲ್ಗೊಂಡಿದ್ದರು. ರಾಜಕೀಯ ಪ್ರತಿಭಟನೆಯಲ್ಲಿ ಪಾಲ್ಗೊಂಡ ಇಮ್ರಾನ್ ಖಾನ್ ಹಾಗೂ ಖಾನ್ ಪತ್ನಿಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದರು. ಆದರೆ ಇಮ್ರಾನ್ ಖಾನ್ ಸಂಕಷ್ಟಕ್ಕೆ ಇಲ್ಲಿಗೆ ಮುಗಿದಿಲ್ಲ. ಇದೀಗ ಅಕ್ಟೋಬರ್ 28ರೊಳಗೆ ಭಾರತ ಬಿಟ್ಟು ತೊಲಗಲು ನೋಟಿಸ್ ನೀಡಲಾಗಿದೆ.

LIN ನೋಟಿಸ್ ನೀಡಿದ ಪೊಲೀಸ್

ನಟ ಇಮ್ರಾನ್ ಖಾನ್ ಗ್ಯಾನೇಶ್ ಕುಮಾರ್ ರಾಜೀನಾಮೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಗ್ಯಾನೇಶ್ ವಿರುದ್ಧ ಸೇರಿದಂತೆ ಹಲವರು ಪ್ರಮುಖರ ವಿರುದ್ಧ ಘೋಷಣೆ ಕೂಗಿದ್ದರು. ಇದೀಗ ಮುಂಬೈ ಪೊಲೀಸರು ಇಮಿಗ್ರೇಶನ್ ಹಾಗೂ ವಿದೇಶಿಗರು ಕಾಯ್ದೆಯಡಿ ಲೀವ್ ಇಂಡಿಯಾ ನೋಟಿಸ್ (LIN) ನೀಡಿದ್ದಾರೆ. ಅಕ್ಟೋಬರ್ 28ರ ಡೆಡ್‌ಲೈನ್ ನೀಡಲಾಗಿದೆ. ಈ ದಿನಾಂಕದೊಳಗೆ ಭಾರತ ಬಿಟ್ಟು ತೊಲಗಲು ಸೂಚನೆ ನೀಡಲಾಗಿದೆ.

ಇಮ್ರಾನ್ ಖಾನ್ ಭಾರತ ಬಿಟ್ಟು ತೊಲಗಲು ನೋಟಿಸ್ ಯಾಕೆ?

ಗ್ಯಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ಮಾಡಿದ ಬಾಲಿವುಡ್ ನಟ ಇಮ್ರಾನ್ ಖಾನ್‌ಗೆ ಭಾರತ ಬಿಟ್ಟು ತೊಲಗಲು ನೋಟಿಸ್ ನೀಡಿದ್ದು ಯಾಕೆ ಅನ್ನೋ ಪ್ರಶ್ನೆ ಎದುರಾಗಿದೆ. ಉತ್ತರ ಸಿಂಪಲ್, ನಟ ಇಮ್ರಾನ್ ಖಾನ್ ಭಾರತೀಯ ಪ್ರಜೆ ಅಲ್ಲ. ವಿದೇಶಿಗರು ಭಾರತದ ರಾಜಕೀಯ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಆದರೂ ಇಮ್ರಾನ್ ಖಾನ್ ವಿದೇಶದಿಂದ ಆಗಮಿಸಿ ಭಾರತದಲ್ಲಿನ ಪ್ರತಿಭಟೆಯಲ್ಲಿ ಪಾಲ್ಗೊಂಡಿದ್ದಾರೆ.

ವಿದೇಶಿಗರು ಭಾರತದಲ್ಲಿ ಇರಲು ಹಾಗೂ ಅವರಿಗೆ ಹಲವು ಹಕ್ಕುಗಳನ್ನ ನೀಡಲಾಗಿದೆ. ಆದರೆ ಭಾರತದ ಪ್ರಜೆಯಂತೆ ರಾಜಕೀಯ ಹಕ್ಕು, ಪ್ರತಿಭಟನೆ ಹಕ್ಕುಗಳು ವಿದೇಶಿ ಪ್ರಜೆಗಳಿಲ್ಲ. ಇಮ್ರಾನ್ ಖಾನ್ ಅಮೆರಿಕದ ಪ್ರಜೆಯಾಗಿದ್ದಾರೆ. ನಿಯಮ ಗೊತ್ತಿದ್ದರೂ ಭಾರತದಲ್ಲಿ ಭಾರಿ ಪ್ರತಿಭಟನೆ ನಡೆಸಲು ಇಮ್ರಾನ್ ಖಾನ್ ಮುಂದಾಗಿದ್ದರು. ಅಕ್ಟೋಬರ್ 10 ರಂದು ಮುಂಬೈನಲ್ಲಿ ನಡೆದ ಗ್ಯಾನೇಶ್ ಕುಮಾರ್ ರಾಜೀನಾಮೆ, ಎಸ್ಐಆರ್ ವಿರುದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ ಸಂಸದ ಕೀರ್ತಿ ಸೊಮಯ್ಯ ನೀಡಿದ್ದ ದೂರು

ನಟ ಇಮ್ರಾನ್ ಖಾನ್ ಮುಂಬೈನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬೆನ್ನಲ್ಲೇ ಬಿಜೆಪಿ ಸಂಸದ ಕೀರ್ತಿ ಸೋಮಯ್ಯ ಈ ಕುರಿತು ದೂರು ನೀಡಿದ್ದರು. ಅಮೆರಿಕನ್ ಪ್ರಜೆಯಾಗಿರುವ ನಟ ಇಮ್ರಾನ್ ಖಾನ್ ಭಾರತದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಹೇಗೆ, ಈ ಕುರಿತು ಕ್ರಮ ಕೈಗೊಳ್ಳುವಂತೆ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಮುಂಬೈ ಪೊಲೀಸರು ನೋಟಿಸ್ ಬೆನ್ನಲ್ಲೇ ಕೀರ್ತಿ ಸೊಮಯ್ಯ ಪ್ರತಿಕ್ರಿಯಿಸಿದ್ದಾರೆ. ಪ್ರತಿಭಟನೆಯಲ್ಲಿ ಇಮ್ರಾನ್ ಖಾನ್ ಪಾಲ್ಗೊಂಡ ಬೆನ್ನಲ್ಲೇ ದೂರು ನೀಡಿದ್ದೆ. ಇದೀಗ ಪೊಲೀಸರು ಅಕ್ಟೋಬರ್ 28ರೊಳಗೆ ಭಾರತ ತೊರೆಯಲು ನೋಟಿಸ್ ನೀಡಿದ್ದಾರೆ. ಒಂದು ದೇಶದ ಭದ್ರತಾ ವ್ಯವಸ್ಥೆ ನಟನಿಗೆ ದೇಶ ಬಿಟ್ಟು ತೊಲಗಲು ಸೂಚಿಸಿದೆ. ವಿದೇಶದ ಹಣದಲ್ಲಿ ಭಾರತದಲ್ಲಿ ಹಂಗಾಮ ಸೃಷ್ಟಿಸಲು ಅವಕಾಶವಿಲ್ಲ ಎಂದು ಕೀರ್ತಿ ಸೊಮಯ್ಯ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಮುಂದೊಂದು ದಿನ ಮಕ್ಕಳಾಗ್ತಾವೆ..' ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮದುವೆ, ಮಕ್ಕಳು, ಖಾಸಗಿ ಜೀವನದ ಬಗ್ಗೆ ಸಲ್ಮಾನ್ ಮುಕ್ತ ಮಾತು!
ಜೈಲರ್ 2: ಥಿಯೇಟರ್ ಮುಂದೆ ಬೆಳಗ್ಗೆಯಿಂದಲೇ ಕ್ಯೂ ನಿಂತ ಫ್ಯಾನ್ಸ್! ಬಂತು ಫಸ್ಟ್ ರಿವೀವ್! ಹೃತಿಕ್ ರೋಶನ್ ಏನು ಹೇಳಿದ್ರು?