'ಮುಂದೊಂದು ದಿನ ಮಕ್ಕಳಾಗ್ತಾವೆ..' ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮದುವೆ, ಮಕ್ಕಳು, ಖಾಸಗಿ ಜೀವನದ ಬಗ್ಗೆ ಸಲ್ಮಾನ್ ಮುಕ್ತ ಮಾತು!

Published : Oct 15, 2026, 11:24 AM IST
salman khan coffee with karan

ಸಾರಾಂಶ

ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ನಟ ಸಲ್ಮಾನ್ ಖಾನ್ ತಮ್ಮ ಮದುವೆ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಮಗೆ ಮದುವೆಯಾಗುವ ಆಸಕ್ತಿಯಿಲ್ಲದಿದ್ದರೂ, ಭವಿಷ್ಯದಲ್ಲಿ ಮಕ್ಕಳನ್ನು ಪಡೆಯುವ ಬಯಕೆಯಿದೆ ಎಂದು ಅವರು ತಿಳಿಸಿದ್ದಾರೆ.

ಸಲ್ಮಾನ್ ಖಾನ್ ಯಾಕಿನ್ನು ಮದುವೆ ಆಗ್ತಿಲ್ಲ? ಇದು ಪ್ರತಿಯೊಬ್ಬ ಅಭಿಮಾನಿಯ ಪ್ರಶ್ನೆ. ಬಾಲಿವುಡ್ ನಟರಾದ ಶಾರೂಕ್, ಆಮಿರ್ ಖಾನ್ ಸೇರಿದಂತೆ ಬಹುತೇಕರು ಮದುವೆಯಾಗಿದ್ದಾರೆ. ಆದರೆ ಸಲ್ಮಾನ್ ಖಾನ್ ಯಾಕಿನ್ನು ಮದುವೆಯಾಗ್ತಿಲ್ಲ ಎಂಬ ಪ್ರಶ್ನೆಗೆ ಕಾಡುತ್ತಲೇ ಇತ್ತು. ಇದೀಗ ಆ ಎಲ್ಲ ಪ್ರಶ್ನೆಗಳಿಗೆ ಸಲ್ಮಾನ್ ಖಾನ್ ಉತ್ತರಿಸಿದ್ದಾರೆ, ಯಾಕೆ ಮದುವೆಯಾಗಿ ಎಂಬ ಪ್ರಶ್ನೆಗೆ ಸಲ್ಮಾನ್ ಖಾನ್ ಏನು ಹೇಳಿದ್ರು ಗೊತ್ತೇ?

ಇತ್ತೀಚೆಗೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ನಡೆದ ಕರಣ್ ಜೋಹರ್ ಅವರ ಜನಪ್ರಿಯ ಕಾಫಿ ವಿತ್ ಕರಣ್ ಒಂಭತ್ತನೇ ಕೊನೆಯ ಸೀಸನ್‌ನಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡರು. ಕಾರ್ಯಕ್ರಮದಲ್ಲಿ ಅವರು ಮದುವೆ, ಮಕ್ಕಳು, ವೈಯಕ್ತಿಕ ಬದುಕು, ಸಂಬಂಧಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನನಗೆ ಮದುವೆಯಾಗಬೇಕು ಎಂದೆನಿಸುತ್ತಿಲ್ಲ, ಮದುವೆಯಾಗದೆ ಸಂತೋಷವಾಗಿದ್ದೇನೆ ಎಂದು ಹೇಳಿದ್ದಾರೆ. ಆದರೆ ಮುಂದೆ ಯಾವತ್ತಾದರೊಂದು ದಿನ ಮಗು ಪಡೆಯುವ ಬಯಕೆ ಬಗ್ಗೆಯೂ ಹೇಳಿಕೊಂಡಿದ್ದಾರೆ. ವೈಯಕ್ತಿಕ ಜೀವನ ಯಾವತ್ತೂ ಖಾಸಗಿಯಾಗಿರಬೇಕು ಎಂಬುದನ್ನು ಒತ್ತಿ ಹೇಳಿದ್ದಾರೆ. 2014 ರ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ವೇಳೆ ಸಲ್ಮಾನ್ ಖಾನ್ 'ನಾನು ವರ್ಜಿನ್'ಎಂಬ ಹೇಳಿಕೆ ಭಾರೀ ಸದ್ದು ಮಾಡಿತ್ತು. ಆ ಘಟನೆ ಬಗ್ಗೆಯೂ ಮಾತನಾಡಿದ್ದಾರೆ. ಸಲ್ಮಾನ್ ಮೊದಲ ಅತಿಥಿಯಾಗಿದ್ದರು.

ಸಲ್ಮಾನ್, ನೀವು ಏಕೆ ಮದುವೆಯಾಗುತ್ತಿಲ್ಲ?

ಕರಣ್ ಮದುವೆ ಪ್ಲಾನ್ ಬಗ್ಗೆ ಕೇಳಿದಾಗ, 60 ವರ್ಷದ ನಟ ಸಲ್ಮಾನ್ ಖಾನ್ ಹೇಳಿದ್ದೇನೆಂದರೆ, 'ನಾನು ಚೆನ್ನಾಗಿದ್ದೇನೆ' ಎಂದು ಚುಟುಕಾಗಿ ಹೇಳಿದರು. ಅಂದರೆ ಮದುವೆ ಆಗಿಲ್ಲ ಅನ್ನುವುದು ಕೊರತೆಯಾಗಿಲ್ಲ, ಮದುವೆಯಾಗದೆಯೂ ಚೆನ್ನಾಗಿದ್ದೇನೆ ಎಂದಿದ್ದಾರೆ. ನಂತರ ಮಾತು ಸಲ್ಮಾನ್ ಅವರ ವೈಯಕ್ತಿಕ ಜೀವನದ ಕಡೆಗೆ ತಿರುಗಿತು. ಆಗ ಕರಣ್ 'ನೀವು ಇನ್ನೂ ವರ್ಜಿನ್? ಎಂದು ಕೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುವ ಸಲ್ಮಾನ್, ಹಿಂದಿನ ಹೇಳಿಕೆ, ಆ ಸಂದರ್ಭವನ್ನು ವಿವರಿಸುವ ಮುನ್ನ ನಗುತ್ತಾ, ಅದು 'ಕರಣ್, ನಾನು ಅದರ ಬಗ್ಗೆ ಮಾತನಾಡೋಕೆ ಇಷ್ಟಪಡಲ್ಲ ಎಂದು ಹೇಳುವ ಒಂದು ಮಾರ್ಗವಾಗಿತ್ತು. ಏಕೆಂದರೆ ನೀವು, ಕೆಲವರು ಡೇಟಿಂಗ್ ಬಗ್ಗೆ ಪ್ರಶ್ನಿಸುತ್ತಲೇ ಇರುತ್ತೀರಿ. ಆದರೆ ನಾನು ಅದರ ಬಗ್ಗೆ ಎಂದಿಗೂ ಮಾತನಾಡಲು ಬಯಸುವುದಿಲ್ಲ ಎಂದಿದ್ದಾರೆ.

'ನಾನು ವರ್ಜಿನ್' ಎಂಬ ಹೇಳಿಕೆಯನ್ನು ಸಲ್ಮಾನ್ ಖಾನ್ ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಸಂಬಂಧಗಳ ವಿಷಯದಲ್ಲಿ ಭವಿಷ್ಯ ಎಷ್ಟು ಅನಿಶ್ಚಿತವಾಗಿರಬಹುದು ಎಂಬುದರ ಕುರಿತು ಸಲ್ಮಾನ್ ಮಾತನಾಡಿದರು. 'ಲೈಫ್ ಪೂರ್ತಿ ಇಂಥವರೇ ಜೀವನಪೂರ್ತಿ ಇರುತ್ತಾರೆ ಎಂದು ಯಾರಿಗೂ ತಿಳಿದಿರುವುದಿಲ್ಲ. ಯಾರನ್ನ ಜೀವನಪೂರ್ತಿ ಜೊತೆಗಿರ್ತಾರೆ ಅಂತ ಬಯಸಿರುತ್ತೇವೋ ಅಂಥವರು ಮುಂದೆ ಬೇರೊಬ್ಬರನ್ನ ಮದುವೆಯಾಗಿಬಿಡುತ್ತಾರೆ. ಹಾಗಾಗಿ ನಾನು 15-16 ವರ್ಷ ವಯಸ್ಸಿನಿಂದಲೂ ಇದನ್ನು ಯಾವಾಗಲೂ ನನ್ನ ಮನಸ್ಸಿನಲ್ಲಿಟ್ಟುಕೊಂಡಿದ್ದೇನೆ'ಇದಲ್ಲ ಖಾಸಗಿಯಾಗಿಯೇ ಇರಬೇಕು ಎಂದು ಸಲ್ಮಾನ್ ಹೇಳುತ್ತಾರೆ. ಸಾರ್ವಜನಿಕ ಮತ್ತು ಖಾಸಗಿ ಜೀವನದ ನಡುವೆ ಸ್ಪಷ್ಟವಾದ ಒಂದು ಗಡಿ ಕಾಯ್ದುಕೊಳ್ಳಬೇಕು ಎಂಬ ಬಗ್ಗೆ ನಟ, ನನ್ನ ತಂದೆ ಹಿರಿಯ ಚಿತ್ರಕಥೆಗಾರ ಸಲೀಂ ಖಾನ್ ನೀಡಿದ ಸಲಹೆಯನ್ನು ಸಹ ಸಲ್ಮಾನ್ ನೆನಪಿಸಿಕೊಂಡಿದ್ದಾರೆ. 'ನನ್ನ ತಂದೆ, 'ಹೈ ಔರ್ ಲಿವಿಂಗ್ ರೂಮ್ ಪುರಿ ಕಂಟ್ರಿ ಹೈ. ಜೋ ಆಪ್ ಲಿವಿಂಗ್ ರೂಮ್ ಮೇ ಬೋಲ್ ಸಕ್ತೇ ಹೋ, ವೋ ಪುರಿ ಕಂಟ್ರಿ ಮೇ ಬೋಲೋ. ಔರ್ ಬೆಡ್‌ರೂಮ್ ಕಾ ಹೈ ವೋ ಲಿವಿಂಗ್ ರೂಮ್ ತಕ್ ನಹಿ ಆನಾ ಚಾಹಿಯೇ' ಎಂದು ಹೇಳಿದ್ದರಂತೆ.

ಮುಂದೊಂದು ಮಕ್ಕಳನ್ನು ಪಡೆಯುತ್ತೇನೆ.. ಎಂದ ಸಲ್ಮಾನ್

ಮುಂದೊಂದು ದಿನ ಮಕ್ಕಳನ್ನು ಪಡೆಯುವ ಆಸೆ ಇದೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಸಂಭಾಷಣೆಯ ಸಮಯದಲ್ಲಿ, ಕರಣ್ ಕೇಳ್ತಾರೆ, ಮದುವೆಯಾಗಿಲ್ಲದ ಕಾರಣ ಭವಿಷ್ಯದಲ್ಲಿ ಒಂಟಿತನ ಅನುಭವಿಸುವಂತಾಗುತ್ತಲ್ಲ ಎಂಬ ಪ್ರಶ್ನೆಗೆ, ಸಲ್ಮಾನ್ ಒಂದು ದಿನ ತಂದೆಯಾಗುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. 'ಖಂಡಿತ, ಮುಂದೊಂದು ದಿನ ನನಗೆ ಮಕ್ಕಳಾಗುತ್ತವೆ'ಎಂದರು. ಇದೇ ವೇಳೆ ಯಶ್ ಮತ್ತು ರೂಹಿ ಎಂಬ ಅವಳಿ ಮಕ್ಕಳ ತಂದೆಯಾಗಿರುವ ಕರಣ್ ಅವರು ಪೋಷಕರಾಗುವುದನ್ನು ತಮ್ಮ ಜೀವನದ ಅತಿದೊಡ್ಡ ಆಶೀರ್ವಾದ ಎಂದು ಬಣ್ಣಿಸ್ತಾರೆ. ಅದಕ್ಕೆ ಸಲ್ಮಾನ್ ಅವರನ್ನು ಅಭಿನಂದಿಸಿದ್ರು. ಇದೇ ವೇಳೆ ಇಬ್ಬರ ವೈಯಕ್ತಿಕ ನಿರ್ಧಾರಗಳ ಬಗ್ಗೆಯೂ ಚರ್ಚೆ ನಡೆಯಿತು. ಸಲ್ಮಾನ್ ತಂದೆಯಾಗುವ ಸಾಧ್ಯತೆಯನ್ನು ಮುಕ್ತವಾಗಿಟ್ಟುಕೊಂಡು ಅವಿವಾಹಿತನಾಗಿ ಉಳಿಯುವ ನಿರ್ಧಾರದಿಂದ ತೃಪ್ತನಾಗಿದ್ದೇನೆ ಎಂದರು. 'ನಾನು ಏಕೆ ಮದುವೆಯಾಗಿಲ್ಲ ಎಂಬ ಬಗ್ಗೆ ಯಾರನ್ನೂ ದೂಷಿಸಲು ಸಾಧ್ಯವಿಲ್ಲ, ಅದು ನನ್ನ ನಿರ್ಧಾರ. ನಾನು ಆ ನಿರ್ಧಾರದಿಂದ ಸಂತೋಷವಾಗಿದ್ದೇನೆ. ಆದರೆ ಮುಂದೊಂದು ದಿನ ಮಕ್ಕಳನ್ನು ಪಡೆಯುತ್ತೇನೆ ಎಂಬ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ.

ಸಲ್ಮಾನ್ ಖಾನ್ ತಮ್ಮ ಸಮಕಾಲೀನರ ಬಗ್ಗೆ ಮಾತನಾಡುತ್ತಾರೆ ಅಕ್ಷಯ್ ಕುಮಾರ್, ಅಜಯ್ ದೇವಗನ್, ಆಮಿರ್ ಖಾನ್ ಮತ್ತು ಶಾರುಖ್ ಖಾನ್ ಸೇರಿದಂತೆ ತಮ್ಮ ಪೀಳಿಗೆಯ ಪುರುಷ ನಟರ ನಿರಂತರ ಯಶಸ್ಸಿನ ಬಗ್ಗೆಯೂ ಸಲ್ಮಾನ್ ಚರ್ಚಿಸಿದರು. ವರ್ಷಗಳಲ್ಲಿ ಸ್ಟಾರ್ ನಟರು ತಮ್ಮ ಸಮಯ ಮತ್ತು ಶಕ್ತಿಯನ್ನು ತಮ್ಮ ವೃತ್ತಿಜೀವನದಲ್ಲಿ ಹಾಕಿ ಶ್ರಮಿಸುತ್ತಾ ಇವತ್ತಿಗೂ ಸ್ಟಾರ್ ಆಗಿಯೇ ಉಳಿದು ಮುನ್ನಡೆದಿದ್ದಾರೆ ಎಂದು ಶ್ಲಾಘಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜೈಲರ್ 2: ಥಿಯೇಟರ್ ಮುಂದೆ ಬೆಳಗ್ಗೆಯಿಂದಲೇ ಕ್ಯೂ ನಿಂತ ಫ್ಯಾನ್ಸ್! ಬಂತು ಫಸ್ಟ್ ರಿವೀವ್! ಹೃತಿಕ್ ರೋಶನ್ ಏನು ಹೇಳಿದ್ರು?
ಕೊಲೆಗಾರ ಯಾರು ಅಂತ ನೀವೇ ಊಹಿಸಿ ನೋಡಿ.. ಈ 5 ಸಿನಿಮಾಗಳ ಕ್ಲೈಮ್ಯಾಕ್ಸ್ ಸಖತ್ ಶಾಕ್ ಕೊಡುತ್ತೆ!