
ಮಂಗಳೂರು: ಕನ್ನಡ ಚಿತ್ರರಂಗದ ನಟಿ ಹಾಗೂ ಬಿಗ್ಬಾಸ್ ಖ್ಯಾತಿಯ ಶುಭಾ ಪೂಂಜಾ (Shubha Poonja) ಅವರ ಮನೆಯಿಂದ ಅವರ ಪ್ರೀತಿಯ ಸಾಕು ಬೆಕ್ಕು ಕಾಣೆಯಾಗಿದೆ. ಮಂಗಳೂರಿನ ಲೋಹಿತ್ ನಗರದಲ್ಲಿರುವ ‘ಡಿ-ಮಾರ್ಟ್’ (D-Mart) ಮಳಿಗೆಯ ಆಸುಪಾಸಿನಲ್ಲಿ ಬೆಕ್ಕು ಕಳೆದುಹೋಗಿದ್ದು, ಈ ಕುರಿತು ನಟಿ ಸಾರ್ವಜನಿಕರಲ್ಲಿ ಸಹಾಯ ಕೋರಿ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಭಾವುಕ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಕಾಣೆಯಾಗಿರುವ ಬೆಕ್ಕಿನ ಹೆಸರು ‘ಜೆರ್ರಿ’ (Jerry). ಯಾರೋ ತಮ್ಮ ಬೆಕ್ಕನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಅನುಮಾನವನ್ನು ಶುಭಾ ಪೂಂಜಾ ವ್ಯಕ್ತಪಡಿಸಿದ್ದಾರೆ. "ಜೆರ್ರಿ ನಮ್ಮ ಕುಟುಂಬದ ಸದಸ್ಯನಂತಿದ್ದ. ಅದು ಯುನೀಕ್ ಬಣ್ಣವನ್ನು ಹೊಂದಿದೆ. ದಯವಿಟ್ಟು ಯಾರಾದರೂ ಅದನ್ನು ಕರೆದೊಯ್ದಿದ್ದರೆ, ದಯಮಾಡಿ ನಮಗೆ ಮರಳಿ ತಂದುಕೊಡಿ," ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ತಮ್ಮ ಮುದ್ದಿನ ಜೆರ್ರಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಿ ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿಯೂ ಶುಭಾ ಪೂಂಜಾ ಘೋಷಿಸಿದ್ದಾರೆ. ಮಂಗಳೂರಿನ ಜನ ಈ ವಿಷಯದಲ್ಲಿ ತಮಗೆ ನೆರವಾಗಬೇಕೆಂದು ವಿನಂತಿಸಿದ್ದಾರೆ. ಜೆರ್ರಿ ಬೆಕ್ಕಿನ ಕುರಿತು ಯಾವುದೇ ಸುಳಿವು ಅಥವಾ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ತಕ್ಷಣ +91 96118 88877 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಲಾಗಿದೆ.
ನಟಿ ಶುಭಾ ಪೂಂಜಾ ಅವರು ಕೇವಲ ಅಭಿನಯಕ್ಕಷ್ಟೇ ಅಲ್ಲದೆ, ಪ್ರಾಣಿಗಳ ಮೇಲಿನ ಅಪಾರ ಪ್ರೀತಿಗೆ ಹೆಸರಾದವರು. ಸ್ವತಃ ಪ್ರಾಣಿ ಪ್ರೇಮಿಯಾಗಿರುವ ಅವರು, ಹಲವು ವರ್ಷಗಳಿಂದ ವಿವಿಧ ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ಬೆಂಬಲ ಹಾಗೂ ಧನಸಹಾಯ ನೀಡುತ್ತಾ ಬಂದಿದ್ದಾರೆ. ಪ್ರಾಣಿಗಳ ಹಕ್ಕುಗಳು ಮತ್ತು ಅವುಗಳ ಆರೈಕೆ ಕುರಿತು ಸದಾ ಜಾಗೃತಿ ಮೂಡಿಸುವ ನಟಿಯ ಪ್ರೀತಿಯ ಸಾಕುಪ್ರಾಣಿಯೇ ಈಗ ಕಾಣೆಯಾಗಿರುವುದು ಅವರ ಅಭಿಮಾನಿಗಳಲ್ಲಿ ಹಾಗೂ ಪ್ರಾಣಿ ಪ್ರಿಯರಲ್ಲಿ ಬೇಸರ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.