
‘ಕಿರಾತಕ’ ಚಿತ್ರದ ಮೂಲಕ ಹಾಸ್ಯ ನಟರಾಗಿ ಬೆಳ್ಳಿತೆರೆಗೆ ಪರಿಚಯವಾದ ಅವರು ಅಲ್ಲಿಂದ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಇದೇ ವಾರ ತೆರೆಗೆ ಬರುತ್ತಿರುವ ‘ಪುಣ್ಯಾತ್ಗಿತ್ತೀರು’ ಸಿನಿಮಾದಲ್ಲಿ 9 ಗೆಟಪ್‌ಗಳಲ್ಲಿ
ಕಾಣಿಸಿಕೊಂಡಿದ್ದಾರಂತೆ.
ಹಾಗೆಯೇ ಚಿತ್ರದಲ್ಲಿನ ನಾಲ್ವರು ಪುಣ್ಯಾತ್‌ಗಿತ್ತೀಯರಿಗೆ ಚಿತ್ರದ ಉದ್ದಕ್ಕೂ ಟಕ್ಕರ್ ಕೊಡುವುದೇ ಅವರ ಕೆಲಸವಂತೆ. ಆ ಕಾರಣಕ್ಕೆ ಇದೊಂದು ವಿಶಿಷ್ಟವಾದ ಪಾತ್ರ ಮತ್ತು ವಿಶೇಷವಾದ ಸಿನಿಮಾ ಎನ್ನುವುದು ಹಾಸ್ಯ ನಟ ರಂಗ ಅಭಿಪ್ರಾಯ.
‘ಪೊಲಿಟಿಕಲ್ ಥ್ರಿಲ್ಲರ್’ಗೆ ಕಾಲಿಟ್ಟ ಸ್ಯಾಂಡಲ್‌ವುಡ್ ನಟಿ!
‘ಸಿನಿಮಾ ಜಗತ್ತಿಗೆ ನಾನು ಬಂದಿದ್ದು ಹಾಸ್ಯ ನಟನಾಗಿಯೇ. ಸಣ್ಣ ಪುಟ್ಟ ಪಾತ್ರಗಳಲ್ಲೂ ಹಾಸ್ಯ ಮಾಡುತ್ತಾ, ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದೇನೆ. ಅಪಾರ ಮೆಚ್ಚುಗೆಯೂ ಸಿಕ್ಕಿದೆ. ಆದರೆ ಈಗ ಇನ್ನೊಂದು ಬಗೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ಕುರಿ ರಂಗ. ರಾಜು ನಿರ್ದೇಶನದ ಚಿತ್ರವಿದು. ಮಹಿಳಾ ಪ್ರಧಾನ ಚಿತ್ರ. ಸತ್ಯನಾರಾಯಣ ಚಿತ್ರದ ನಿರ್ಮಾಪಕ. ಮಮತಾ ರಾಹುತ್, ದಿವ್ಯಶ್ರೀ, ಐಶ್ವರ್ಯ ಹಾಗೂ ಸಂಭ್ರಮ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.