‘ಪೊಲಿಟಿಕಲ್ ಥ್ರಿಲ್ಲರ್’ಗೆ ಕಾಲಿಟ್ಟ ಸ್ಯಾಂಡಲ್‌ವುಡ್ ನಟಿ!

Published : Aug 29, 2019, 07:37 AM IST
‘ಪೊಲಿಟಿಕಲ್ ಥ್ರಿಲ್ಲರ್’ಗೆ ಕಾಲಿಟ್ಟ ಸ್ಯಾಂಡಲ್‌ವುಡ್ ನಟಿ!

ಸಾರಾಂಶ

ನಟಿ ನೀತೂ ಶೆಟ್ಟಿಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶೇ.75 ಭಾಗ ಚಿತ್ರೀಕರಣ ಮುಗಿಸಿರುವ ಈ ಚಿತ್ರದ ಹೆಸರು ಕೂಡ ಭಿನ್ನವಾಗಿದೆ. ಈ ಚಿತ್ರವನ್ನು ಮಾಡುತ್ತಿರುವುದು ಸಾಫ್ಟ್‌ವೇರ್‌ ಉದ್ಯೋಗಿಗಳು. ಬಹುತೇಕ ಎಲ್ಲರಿಗೂ ಮೊದಲ ಚಿತ್ರವಾಗಿರುವ ಇಲ್ಲಿ, ನೀತೂ ಅವರೇ ಸ್ಟಾರ್‌ ನಟಿ. ಚಿತ್ರದ ಹೆಸರು ‘1888’. 

ಸೌರಭ್‌ ಶುಕ್ಲಾ ಈ ಚಿತ್ರದ ನಿರ್ದೇಶಕರು. ಪ್ರತಾಪ್‌ ಹಾಗೂ ಮಂಜು ಈ ಚಿತ್ರದ ಮೂಲಕ ಹೊಸದಾಗಿ ಪರಿಚಯವಾಗುತ್ತಿದ್ದಾರೆ.

ಕನ್ನಡದ ಟಾಪ್‌ ನಟಿ: ನಟ ಶ್ರೀಮುರಳಿ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿರುವ ಈ ಚಿತ್ರದಲ್ಲಿ ನೀತೂ ಕನ್ನಡದ ಟಾಪ್‌ ನಟಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪಾತ್ರದ ಹೆಸರು ಸಂಧ್ಯಾ ಶೆಟ್ಟಿ. ‘ನನ್ನ ಮಟ್ಟಿಗೆ ಇದೊಂದು ರೀತಿಯ ಪಾತ್ರ. ಒಬ್ಬ ನಟಿಯ ಸುತ್ತ ಸಾಗುವ ಈ ಕತೆಯಲ್ಲಿ ನಾನೇ ಆ ನಟಿಯಾಗಿ ಕಾಣಿಸಿಕೊಂಡಿದ್ದೇನೆ. ಕುತೂಹಲದ ಜತೆಗೆ ಗ್ರೇ ಶೇಡ್‌ ಇರುವ ಪಾತ್ರ ನನ್ನದು’ ಎನ್ನುತ್ತಾರೆ ನೀತೂ.

#MeToo ಟೀಕಾಕಾರರಿಗೆ ಖಡಕ್ ಉತ್ತರ ಕೊಟ್ಟ ನಟಿ ನೀತೂ ಶೆಟ್ಟಿ

ಹಾಡು ಬರೆದ ನೀತೂ: ನಟನೆ ಜತೆಗೆ ಈ ಚಿತ್ರಕ್ಕಾಗಿ ನೀತೂ ಒಂದು ಹಾಡು ಬರೆಯುವ ಮೂಲಕ ಗೀತ ರಚನೆಯಲ್ಲೂ ತಮ್ಮ ಅದೃಷ್ಟಪರೀಕ್ಷೆಗೆ ಇಳಿದ್ದಾರೆ. ಹಾಗೆ ನೋಡಿದರೆ ತಾವೇ ನಟಿಸುತ್ತಿರುವ ಈ ಚಿತ್ರದಲ್ಲಿ ನೀತೂ ಬರೆದಿರುವ ಹಾಡಿನಲ್ಲಿ ಬೇರೆ ಜೋಡಿ ಕಾಣಿಸಿಕೊಳ್ಳುತ್ತಿದೆ. ಅಂದರೆ ಇಲ್ಲಿ ಪ್ರತಾಪ್‌ ಹಾಗೂ ಅದ್ವಿತಿ ಶೆಟ್ಟಿಜೋಡಿಗಾಗಿ ನೀತು ಹಾಡು ಬರೆದಿದ್ದಾರಂತೆ. ಇದೊಂದು ಡ್ಯೂಯೆಟ್‌ ಅಂತೆ. ಇವರು ಬರೆದಿರುವ ಹಾಡನ್ನು ವಿಕಾಸ್‌ ವಸಿಷ್ಠ ಹಾಗೂ ಈಶ ಸುಚಿ ಹಾಡಿದ್ದಾರೆ.

ಸ್ನೇಹ ಬಳಗದ ಸಿನಿಮಾ: ಈ ಚಿತ್ರದಲ್ಲಿ ನಟಿಸುತ್ತಿರುವ ಹಾಗೂ ತೆರೆ ಹಿಂದೆ ಕೆಲಸ ಮಾಡುತ್ತಿರುವ ಬಹುತೇಕರು ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತರು. ತಾವೇ ಒಂದು ತಂಡವನ್ನು ಕಟ್ಟಿಕೊಂಡು ಈ ಸಿನಿಮಾ ಮಾಡುತ್ತಿದ್ದಾರೆ. ಪ್ರದೀಪ್‌ ಎಂಬುವವರು ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
ಮದುವೆ ವ್ಲಾಗ್ ಪೋಸ್ಟ್ ಮಾಡಿ ಕೋಟಿ ಬಾಚಿಕೊಂಡ ವ್ಲಾಗರ್