ಮತ್ತೆ ಅದೇ ನಿರ್ದೇಶಕರ ಜೊತೆ ಮತ್ತೊಂದು ಸಿನಿಮಾ ಘೊಷಿಸಿದ ಪುಷ್ಪಾ ಅರುಣ್ ಕುಮಾರ್!

Published : Oct 02, 2025, 06:06 PM ISTUpdated : Oct 02, 2025, 07:45 PM IST
Pushpa Arunkumar Sriraj

ಸಾರಾಂಶ

ಕೊತ್ತಲವಾಡಿ ಸಿನಿಮಾ ಅಷ್ಟೇನೂ ಗೆಲುವು ಸಾಧಿಸದಿದ್ದರೂ ಮತ್ತೆ ಅದೇ ನಿರ್ದೇಶಕರ ಜೊತೆ ಸಿನಿಮಾ ಘೋಷಿಸಿರುವ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್ ಅವರ ಧೈರ್ಯವನ್ನು ಮೆಚ್ಚಲೇಬೇಕು ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಹಾಕಿದ್ದಾರೆ.

ಕೊತ್ತಲವಾಡಿ ನಿರ್ದೇಶಕರೊಂದಿಗೆ ಮತ್ತೊಂದು ಸಿನಿಮಾ!

ಕನ್ನಡದ 'ಕೊತ್ತಲವಾಡಿ' ಸಿನಿಮಾ ನಿರ್ಮಾಣ ಮಾಡಿದ್ದ ಪುಷ್ಪಾ ಅರುಣ್‌ಕುಮಾರ್ (Pushpa Arunkumar) ಅವರು ಇಂದು, 02 ಅಕ್ಟೋಬರ್ 2025ರ ವಿಜಯದಶಮಿಯಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಕೊತ್ತಲವಾಡಿ ಸಿನಿಮಾ ನಿರ್ದೇಶನ ಮಾಡಿದ್ದ ಅದೇ ನಿರ್ದೇಶಕರಾದ ಶ್ರೀರಾಜ್ (Sriraj) ಅವರೇ ಪುಷ್ಪಾರ ಮುಂಬರುವ ಸಿನಿಮಾವನ್ನು ಕೂಡ ನಿರ್ದೇಶನ ಮಾಡಲಿದ್ದಾರೆ. ಅಚ್ಚರಿ ಎಂಬಂತೆ ಬಿಡುಗಡೆಗೂ ಮೊದಲು ಸಾಕಷ್ಟು ಸದ್ದು ಮಾಡಿದ್ದ ಕೊತ್ತಲವಾಡಿ ಸಿನಿಮಾ, ರಿಲೀಸ್ ಬಳಿಕ ಅಷ್ಟೇನೂ ಸೌಂಡ್ ಮಾಡಲಿಲ್ಲ. ಆದರೂ ಕೂಡ ಇಷ್ಟು ಕಡಿಮೆ ಅವಧಿಯಲ್ಲೇ ಪುಷ್ಪಾ ಅರುಣ್‌ಕುಮಾರ್ ಅವರು ಮತ್ತೊಂದು ಸಿನಿಮಾ ಮಾಡುವತ್ತ ಹೆಜ್ಜೆ ಇಟ್ಟಿದ್ದಾರೆ.

ಇಂದು ಹೊಸ ಸಿನಿಮಾ ಘೋಷಿಸಿ, ಬಳಿಕ ಮಾತನ್ನಾಡಿದ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಮ್ಮ ಪುಷ್ಪಾ ಅರುಣ್‌ಕುಮಾರ್ ಅವರು 'ನಾನು ಯಾವತ್ತೂ ಸೋಲಿಗೆ ಹೆದರೋದಿಲ್ಲ. 'ಸೋಲೇ ಗೆಲುವಿನ ಸೋಪಾನ' ಎಂಬಂತೆ ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇರುತ್ತೇನೆ. ನನಗೆ ಸಿನಿಮಾ ಮಾಡುವುದಷ್ಟೇ ಗುರಿ, ಅದನ್ನು ನಾನು ಯಾವತ್ತೂ ಬಿಡೋದಿಲ್ಲ. ಆದರೆ, 'ಒಂದು ಸಿನಿಮಾ ಸೋತರೆ ಮತ್ತೊಂದು ಗೆಲ್ಲುತ್ತದೆ' ಎಂಬ ಮಾತಲ್ಲಿ ನನಗೆ ಬಲವಾದ ನಂಬಿಕೆ. ಒಂದು ಸಿನಿಮಾದಲ್ಲಿ ಕಳೆದುಕೊಂಡರೆ ಮತ್ತೊಂದರಲ್ಲಿ ಅದನ್ನು ಮರಳಿ ಪಡೆಯಬೇಕು. ನಾನು ಆ ದಾರಿಯಲ್ಲಿ ಸಾಗಲು ಬಯಸುತ್ತೇನೆ' ಎಂದಿದ್ದಾರೆ.

ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್!

ಕೊತ್ತಲವಾಡಿ ಸಿನಿಮಾ ಅಷ್ಟೇನೂ ಗೆಲುವು ಸಾಧಿಸದಿದ್ದರೂ ಮತ್ತೆ ಅದೇ ನಿರ್ದೇಶಕರ ಜೊತೆ ಸಿನಿಮಾ ಘೋಷಿಸಿರುವ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್ ಅವರ ಧೈರ್ಯವನ್ನು ಮೆಚ್ಚಲೇಬೇಕು ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಹಾಕಿದ್ದಾರೆ. ಆದರೆ, ಆ ಬಗ್ಗೆ ಪುಷ್ಪಾ ಅರುಣ್ ಕುಮಾರ್ ಅವರು ಯಾವುದೇ ಸೂಕ್ತ ಉತ್ತರ ನೀಡಿಲ್ಲ ಎನ್ನಬಹುದು. ಅದಕ್ಕೆಲ್ಲಾ ಅವರಿಂದ ಉತ್ತರವನ್ನು ನಿರೀಕ್ಷಿಸುವುದಕ್ಕಿಂತ 'ಅವರ ಹಣ, ಅವರ ಅಯ್ಕೆ.. ಅವರ ಸಿನಿಮಾ ನಿರ್ದೇಶಕರು, ತಾರಾಬಳಗ ಹಾಗೂ ಬಜೆಟ್ ನಿರ್ಧಾರ ಅವರಿಗೆ ಬಿಟ್ಟಿದ್ದು. ಪ್ರೇಕ್ಷಕರು ಇಷ್ಟವಿದ್ದರೆ ನೋಡಬಹುದು ಇಲ್ಲದಿದ್ದರೆ ಬಿಡಬಹುದು, ಆ ಆಯ್ಕೆ ನಿರ್ಮಾಪಕರಿಗೆ ಇಲ್ಲ' ಎನ್ನಬಹುದು!

ಕೊತ್ತಲವಾಡಿ ಬಳಿಕ, ನಟಿ ಅನುಷ್ಕಾ ಶೆಟ್ಟಿಯ 'ಘಾಟಿ' ಡಿಸ್ಟ್ರಿಬ್ಯೂಷನ್!

ಒಟ್ಟಿನಲ್ಲಿ, ಕೊತ್ತಲವಾಡಿ ಸಿನಿಮಾ ಬಳಿಕ, ತೆಲುಗು ಸ್ಟಾರ್ ನಟಿ ಅನುಷ್ಕಾ ಶೆಟ್ಟಿಯವರ 'ಘಾಟಿ' ಡಿಸ್ಟ್ರಿಬ್ಯೂಷನ್ ತೆಗೆದುಕೊಂಡು ಕರ್ನಾಟಕದಲ್ಲಿ ಹಂಚಿಕೆ ಮಾಡಿದ್ದರು. ಆದರೆ ಆ ಸಿನಿಮಾದಲ್ಲಿ ಕರ್ನಾಟಕದಲ್ಲಿ ಹಾಗಿರಲಿ ತೆಲುಗು ನೆಲದಲ್ಲಿ ಕೂಡ ಓಡಲಿಲ್ಲ. ಅದರಿಂದ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್ ಅವರಿಗೆ ಲಾಭವಂತೂ ಆಗಲಿಲ್ಲ, ನಷ್ಟದ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ಈಗ ಆ ಮಾತು ಏಕೆ ಎನ್ನುವುದೇ ಸೂಕ್ತ ಅಲ್ಲವೇ?

ಅಂದಹಾಗೆ, ಪುಷ್ಪಾ ಅರುಣ್‌ಕುಮಾರ್ ನಿರ್ಮಾಣದ ಮುಂಬರುವ ಸಿನಿಮಾ ಬಗ್ಗೆ , 'ರಕ್ತ. ಕ್ರೋಧ. ಸೇಡು. ಅದನ್ನು ಮುರಿಯುವುದಕ್ಕಾಗಿಯೇ ಈ ಬಿರುಗಾಳಿ.. (Blood. Rage. Revenge. The storm is about to break...) ಎಂದು ಸಿನಿಮಾ ಒನ್‌ಲೈನ್ ಇಟ್ಟು ಪೋಸ್ಟ್ ಮಾಡಲಾಗಿದೆ. ಈ ಶಬ್ಧಗಳು ಹಾಗೂ ವಾಕ್ಯ ಕುತೂಹಲ ಕೆರಳಿಸುವಂತಿದೆ!

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?