ಕಿಚ್ಚ ಸುದೀಪ್ ಮಾಡಿರೋ ದೋಸೆ ತಿನ್ನೋಣ ಬನ್ನಿ!

By Web Desk  |  First Published Oct 1, 2019, 12:51 PM IST

ಸೈರಾ ನರಸಿಂಹ ರೆಡ್ಡಿ ಸೆಟ್ ನಲ್ಲಿ ಸಹಕಲಾವಿದರೊಂದಿಗೆ ಫನ್ ಟೈಂ ಕಳೆದ ಸುದೀಪ್ | ಸೆಟ್ ನಲ್ಲಿ ಆಮ್ಲೆಟ್ ದೋಸೆ ಮಾಡಿದ ‘ಪೈಲ್ವಾನ್’ | ಕುಕಿಂಗ್ ಸ್ಕಿಲ್ ತೋರಿಸಿದ ಸುದೀಪ್ 


ಮೆಗಾಸ್ಟಾರ್ ಚಿರಂಜೀವಿ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳುತ್ತಿರುವುದು ಗೊತ್ತೇ ಇದೆ. ಚಿತ್ರದ ಪೋಸ್ಟರ್, ಟ್ರೇಲರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಕ್ಟೋಬರ್ 2 ರಂದು ಸೈರಾ ತೆರೆಗೆ ಬರಲಿದೆ. 

ಬಾಹುಬಲಿಯನ್ನೇ ಮೀರಿಸಿದ ಸೈರಾ; ದಾಖಲೆ ಬರೆದ ಕನ್ನಡಿಗ!

Tap to resize

Latest Videos

undefined

ಸೈರಾ ಸೆಟ್ ನಲ್ಲಿ ಫನ್ ಟೈಮಲ್ಲಿ ಕಿಚ್ಚ ಸುದೀಪ್ ಆಮ್ಲೆಟ್ ದೋಸೆ ಹೊಯ್ದಿದ್ದಾರೆ. ಒಬ್ಬೊಬ್ಬರೇ ಸಹ ಕಲಾವಿದರಿಗೆ ಹಾಕಿದ್ದಾರೆ. ಸುದೀಪ್ ದೋಸೆಯನ್ನು ಎಲ್ಲರೂ ಎಂಜಾಯ್ ಮಾಡಿದ್ದಾರೆ.

 

 
 
 
 
 
 
 
 
 
 
 
 
 

Fun Times on th set of #SNR.. Special Omlette Dosa.

A post shared by kicchasudeep (@kichchasudeepa) on Sep 30, 2019 at 8:08am PDT


ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಸುದೀಪ್ ಮಹತ್ವಾಕಾಂಕ್ಷೆ ನಾಯಕ ಅವುಕು ರಾಜು ಪಾತ್ರ ಮಾಡಿದ್ದಾರೆ. ಬ್ರಿಟಿಷರ ವಿರುದ್ಧದ ದಂಗೆಯಲ್ಲಿ ಮುಂದಾಳತ್ವ ವಹಿಸುವ ಪಾತ್ರ ಅದು. ಬ್ರಿಟಿಷರ ವಿರುದ್ಧ ದಂಗೆಯೆದ್ದ ನಾಯಕ ಉಯ್ಯಾಲವಾಡ ನರಸಿಂಹ ರೆಡ್ಡಿ ಪಾತ್ರವನ್ನು ಚಿರಂಜೀವಿ ಮಾಡುತ್ತಿದ್ದಾರೆ. ಬ್ರಿಟಿಷರ ವಿರುದ್ಧ ದಂಗೆಯೆದ್ದ ನಾಯಕ ಉಯ್ಯಾಲವಾಡ ನರಸಿಂಹ ರೆಡ್ಡಿ ಪಾತ್ರವನ್ನು ಚಿರಂಜೀವಿ ಮಾಡುತ್ತಿದ್ದಾರೆ.

ರಾಜಕಾರಣಕ್ಕೆ ಸುದೀಪ್? ಚಿರಂಜೀವಿಯಿಂದ ಪೈಲ್ವಾನ್ ಕಲಿತ ಪಾಠ

ನರಸಿಂಹ ರೆಡ್ಡಿ ಸೇನೆಯಲ್ಲಿ ಮುಂದಾಳತ್ವ ವಹಿಸುವ ರಾಜಾ ಪಂಡಿ ಪಾತ್ರವನ್ನು ವಿಜಯ್ ಸೇತುಪಥಿ ನಿರ್ವಹಿಸಿದ್ದಾರೆ. ನರಸಿಂಹ ರೆಡ್ಡಿ ಕಥೆಯಲ್ಲಿ ಬರುವ ವೀರರೆಡ್ಡಿ ಎನ್ನುವ ಪ್ರಮುಖ ಪಾತ್ರವನ್ನು ಜಗಪತಿ ಬಾಬು ಮಾಡಲಿದ್ದಾರೆ. ನರಸಿಂಹ ರೆಡ್ಡಿ ಸ್ವತಂತ್ರ ಹೋರಾಟದಲ್ಲಿ ಗುರುವಾಗಿ, ಮಾರ್ಗದರ್ಶಕರಾಗಿದ್ದ ಗೋಸಾಯಿ ವೆಂಕಣ್ಣ ಪಾತ್ರವನ್ನು ಅಮಿತಾಬಚ್ಚನ್ ನಿರ್ವಹಿಸಿದ್ದಾರೆ. ನರಸಿಂಹ ರೆಡ್ಡಿ ಪತ್ನಿ ಲಕ್ಷ್ಮೀ ಪಾತ್ರವನ್ನು ತಮನ್ನಾ ಭಾಟಿಯಾ ಮಾಡಿದ್ದಾರೆ. 

ಅಕ್ಟೋಬರ್ 01ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;

 

click me!