200 ಕೋಟಿ ಕ್ಲಬ್‌ ಸೇರಿದ ಕೆಜಿಎಫ್‌

Published : Jan 09, 2019, 09:00 AM IST
200 ಕೋಟಿ ಕ್ಲಬ್‌ ಸೇರಿದ ಕೆಜಿಎಫ್‌

ಸಾರಾಂಶ

‘ಕೆಜಿಎಫ್‌’ ಚಿತ್ರ ಇತಿಹಾಸ ಬರೆದಿದೆ. ಐದು ಭಾಷೆಯಲ್ಲಿ ಬಿಡುಗಡೆಯಾದ ‘ಕೆಜಿಎಫ್‌’ ಚಿತ್ರದ ಮೊದಲ ಭಾಗ ಬಿಡುಗಡೆಯಾದ ಕೇವಲ 18 ದಿನಗಳಲ್ಲಿ ಮೂಲಗಳ ಪ್ರಕಾರ 200 ಕೋಟಿ ರು.ಗಳನ್ನು ಗಳಿಸಿದೆ.

ಹಿಂದಿ ಆವೃತ್ತಿ ಗಳಿಕೆ 37 ಕೋಟಿ, ಅಮೆರಿಕಾದಿಂದ 5 ಕೋಟಿ.

ಬಾಲಿವುಡ್‌ನಲ್ಲಂತೂ ಅಸಾಧ್ಯ ಗೆಲುವು ಸಾಧಿಸಿದೆ. ಹಿಂದಿಯ ಲೆಕ್ಕಾಚಾರ ಪರಿಣತ ತರಣ್‌ ಆದಶ್‌ರ್‍ ಪ್ರಕಾರ, ‘ಕೆಜಿಎಫ್‌’ ಹಿಂದಿಯಲ್ಲಿ ಈಗಾಗಲೇ 37 ಕೋಟಿ ಗಳಿಸಿದೆ. 40 ಕೋಟಿ ಗಳಿಸುವುದು ನಿಶ್ಚಿತ. ಇನ್ನು ಯುಎಸ್‌ಎನಲ್ಲಿ ಬಿಡುಗಡೆಯಾಗಿರುವ ಚಿತ್ರ ಈಗಾಗಲೇ . 5.31 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ತೆಲುಗು ಭಾಷೆಯಲ್ಲಿ 20 ಕೋಟಿಗೂ ಹೆಚ್ಚು ಗಳಿಕೆ ದಾಖಲಾಗಿದೆ ಎನ್ನಲಾಗಿದೆ. ಇವೆಲ್ಲವೂ ಸೇರಿ ಐದು ಭಾಷೆಯಲ್ಲಿ ಬಿಡುಗಡೆಯಾದ ಚಿತ್ರದ ಗಳಿಕೆ 200 ಕೋಟಿ ರುಪಾಯಿ ತಲುಪಿದೆ.

ಹಿಂದಿಯಲ್ಲಿ ಶಾರುಕ್‌ ಖಾನ್‌ ಅಭಿನಯದ ‘ಝೀರೋ’ ಮತ್ತು ರಣವೀರ್‌ ಸಿಂಗ್‌ ನಟನೆಯ ‘ಸಿಂಬಾ’ ಈ ಎರಡೂ ದೊಡ್ಡ ಸಿನಿಮಾಗಳ ಮಧ್ಯೆ ಅಷ್ಟುದೊಡ್ಡ ಗಳಿಕೆಯಾಗಿರುವುದು ನಿಜವಾಗಿಯೂ ದೊಡ್ಡ ಸಾಧನೆ ಎನ್ನುವುದು ಬಾಲಿವುಡ್‌ ಪಂಡಿತರ ಲೆಕ್ಕಾಚಾರ.

ಪ್ರಶಾಂತ್‌ ನೀಲ್‌ ನಿರ್ದೇಶನದ, ಯಶ್‌ ಅಭಿನಯದ, ವಿಜಯ್‌ ಕಿರಗಂದೂರು ನಿರ್ಮಾಣದ ಈ ಚಿತ್ರ ಇತಿಹಾಸ ಸೃಷ್ಟಿಸಿರುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!