
ಬೆಂಗಳೂರು (ಜ. 08): ಕಥೆ ಹೇಳಲು ಬಂದ ಗಿಣಿ ಮಾಧುರ್ಯದಿಂದಲೇ ಹಾರಾಡುತ್ತಾ ಪ್ರೇಕ್ಷಕರ ಮನಸಿಗೆ ಬಂದು ಸೇರಿಕೊಂಡಿದ್ದೇ ಹಾಡುಗಳ ಮೂಲಕ. ಗಿಣಿ ಹೇಳಿದ ಕಥೆಯ ಹಾಡುಗಳು ಬಿಡುಗಡೆಯಾಗಿ ದಿನ ಕಳೆಯುವುದರೊಳಗೆ ವ್ಯಾಪಕ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಇದು ಸಾಧ್ಯವಾಗಿದ್ದು ಹಿತನ್ ಹಾಸನ್ ಅವರ ಸಂಗೀತದಿಂದ.
ಈ ಸಿನಿಮಾ ಸಂಗೀತ ನಿರ್ದೇಶನ ಮಾಡಿರುವವರು ಹಿತನ್ ಹಾಸನ್. ಅವರ ಮೂರನೇ ಚಿತ್ರವಿದು. ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಈ ಚಿತ್ರದ ಭಿನ್ನವಾದ ಕಥೆಗೆ ಪೂರಕವಾದ ಸಂಗೀತ ಸಂಯೋಜನೆ ಮಾಡುವುದೇ ಸವಾಲಾಗಿತ್ತು. ಅದನ್ನು ಹಿತನ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆಯೂ ಕೇಳಿ ಬರುತ್ತಿದೆ. ಸೀಮಿತ ಬಜೆಟ್ಟಿನಲ್ಲಿ, ಸೀಮಿತವಾದ ಪರಿಕರಗಳೊಂದಿಗೆ ಹಿತನ್ ಹಾಡುಗಳನ್ನು ರೂಪಿಸಿದ್ದಾರೆ. ಈ ಮೂಲಕ ಹಾಡುಗಳೂ ಕೂಡಾ ಗಿಣಿ ಹೇಳಿದ ಕಥೆಯ ಪ್ರಧಾನ ಆಕರ್ಷಣೆಯಾಗುವಂತೆ ನೋಡಿಕೊಂಡಿದ್ದಾರೆ.
ಗಿಣಿ ಹೇಳಿದ ಕಥೆ ಟೀಸರ್ ಒಮ್ಮೆ ನೋಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.