ಡಿಯರ್ ಕಾಮ್ರೆಡ್ ರಿಲೀಸ್‌ಗೆ ಕರವೇ ಪಟ್ಟು

By Web DeskFirst Published Jul 30, 2019, 3:41 PM IST
Highlights

ಡಿಯರ್ ಕಾಮ್ರೇಡ್ ಚಿತ್ರದ ಕನ್ನಡ ಅವತರಣಿಕೆಯ ಪ್ರದರ್ಶನಕ್ಕೆ ಪಟ್ಟು |  ತೆಲುಗು ಚಿತ್ರ ಪ್ರದರ್ಶನಕ್ಕೆ ಕರವೇ ಆಕ್ರೋಶ | ಮಂಡ್ಯ ಸಂಜಯ ಚಿತ್ರಮಂದಿರದ ಎದುರು ಧರಣಿ

ಮಂಡ್ಯ (ಜು. 30): ಡಿಯರ್‌ ಕಾಮ್ರೇಡ್‌ ಚಲ​ನ​ಚಿತ್ರ ಕನ್ನಡ ಅವೃತ್ತಿ ಇದ್ದರೂ ತೆಲುಗು ಅವ​ತ​ರಣಿಕೆ​ಯಲ್ಲಿ ಚಿತ್ರ ಪ್ರದರ್ಶನ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ಹಿತ​ರ​ಕ್ಷಣಾ ವೇದಿಕೆ ಹಾಗೂ ಇತರೆ ಸಂಘ​ಟ​ನೆ​ಗಳ ಕಾರ್ಯ​ಕರ್ತರು ನಗ​ರದ ಸಂಜಯ ಚಿತ್ರ​ಮಂದಿ​ರದ ಎದುರು ಪ್ರತಿ​ಭ​ಟನೆ ನಡೆ​ಸಿ​ದರು.

‘ಡಿಯರ್ ಕಾಮ್ರೆಡ್’ ನೋಡಿ ಕಣ್ಣೀರಿಟ್ಟ ಯುವತಿ! ದೇವರಕೊಂಡ ರಿಯಾಕ್ಷನ್ ವೈರಲ್

ನಗರದ ಬೆಂಗಳೂರು - ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ಸಂಜಯ್‌ ಚಿತ್ರ​ಮಂದಿ​ರದ ಬಳಿ ಸೇರಿದ ಕಾರ್ಯ​ಕರ್ತರು, ಚಿತ್ರಪ್ರದರ್ಶನ ಹಾಗೂ ವಿತ​ರ​ಕರ ವಿರುದ್ಧ ಘೋಷಣೆ ಕೂಗಿ​ದರು. ವಿಶ್ವದ ಎಲ್ಲ ಸಿನಿಮಾ, ಜ್ಞಾನ ಎಲ್ಲವೂ ಕನ್ನಡ ಭಾಷೆಯ ಮೂಲಕವೇ ಬರಬೇಕು. ಇದರಿಂದ ಕನ್ನಡ ಭಾಷೆ ಬೆಳೆಯುತ್ತದೆ. ಇದರ ಭಾಗವಾಗಿಯೆ ಕನ್ನಡ ಸಿನಿಮಾ ರಂಗದಲ್ಲಿ ಅಘೋಷಿತ ನಿಷೇಧ ಹೇರಿದ್ದ ಡಬ್ಬಿಂಗ್‌ನ್ನು ಜಾರಿಗೆ ತರುವಂತೆ ಕನ್ನಡಪರ ಸಂಘಟನೆಗಳು ಹೋರಾಟ ಮಾಡುತ್ತಿವೆ ಎಂದರು.

ಭಾರೀ ಮೊತ್ತಕ್ಕೆ ‘ಡಿಯರ್ ಕಾಮ್ರೆಡ್’ ರಿಮೇಕ್ ಹಕ್ಕು ಖರೀದಿಸಿದ ಕರಣ್ ಜೋಹರ್

ಡಿಯರ್‌ ಕಾಮ್ರೇಡ್‌ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಲಾಗಿದೆ. ಮಂಡ್ಯ ಜಿಲ್ಲೆ ಶೇ.90ರಷ್ಟುಕನ್ನಡ ಮಾತನಾಡುವ ಕನ್ನಡಿಗರ ಜಿಲ್ಲೆಯಾಗಿದೆ. ನಂದಾ ಚಿತ್ರಮಂದಿರದಲ್ಲಿ ಡಿಯರ್‌ ಕಾಮ್ರೇಡ್‌ ಸಿನಿಮಾದ ಕನ್ನಡ ಅವತರಣಿಕೆ ಪ್ರದರ್ಶಿತವಾಗುತ್ತಿದೆ. ಹೀಗಿರುವಾಗ ಸಂಜಯ ಚಿತ್ರಮಂದಿರದಲ್ಲಿ ಸದರಿ ಸಿನಿಮಾದ ತೆಲುಗು ಅವತರಣಿಕೆ ಪ್ರದರ್ಶಿಸಬಾರದು ಎಂದು ಆಗ್ರಹಿಸಿದರು. ಪರಭಾಷ ಚಿತ್ರಗಳಿಂದ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗದಂತ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ, ತಕ್ಷಣದಿಂದ ತೆಲುಗು ಬದಲಿಗೆ ಕನ್ನಡ ಆವೃತ್ತಿಯನ್ನೇ ಪ್ರದರ್ಶಿಸಬೇಕು.

ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಬಿಡುಗಡೆಯಾಗುವ ಎಲ್ಲ ಪರಭಾಷಾ ಚಿತ್ರಗಳು ಕನ್ನಡದಲ್ಲೆ ಡಬ್‌ ಆಗಿ ಪ್ರದರ್ಶಿಸಬೇಕು. ತಪ್ಪಿದಲ್ಲಿ ಪ್ರದರ್ಶನ ತಡೆಹಿಡಿಯಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚ​ರಿಕೆ ನೀಡಿ​ದರು. ಚಿತ್ರಮಂದಿರದ ವ್ಯವಸ್ಥಾಪಕ ಕುಶಾಲ್ ಗೌಡ ಮನವಿ ಸ್ವೀಕರಿಸಿ ಇಂದು ಸಂಜೆಯಿಂದಲೇ ಕನ್ನಡ ಆವೃತ್ತಿಯಲ್ಲಿ ಸಿನಿಮಾ ಪ್ರದರ್ಶನ ನಡೆಸಲಾಗುವುದು ಎಂದು ಭರವಸೆ ನೀಡಿದ ಮೇರೆಗೆ ​ಪ್ರ​ತಿ​ಭ​ಟ​ನಾ​ಕಾ​ರರು ತಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು.

click me!