ಬಾಲಿವುಡ್ ಜೋವಿಯಲ್ ಸ್ಟಾರ್ ಗೋವಿಂದ ರಜತ್ ಶರ್ಮಾ ‘ಆಪ್ ಕಿ ಅದಾಲತ್’ ಶೋ ಲ್ಲಿ ಭಾಗಿಯಾಗಿದ್ದು ಹೊಸ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.
ಹಾಲಿವುಡ್ ಬ್ಲಕ್ ಬಸ್ಟರ್ ಚಿತ್ರ ಅವತಾರ್ ನಲ್ಲಿ ನಟಿಸಲು ಗೋವಿಂದ ಅವರಿಗೆ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಆಫರ್ ಕೊಟ್ಟಿದ್ದರಂತೆ. ಆದರೆ ಗೋವಿಂದ ನೋ ಎಂದಿದ್ದರಂತೆ.
NRI ಯನ್ನು ಗುಟ್ಟಾಗಿ ಮದುವೆಯಾದ್ರಾ ರಾಖಿ ಸಾವಂತ್?
ಆಪ್ ಕಿ ಅದಾಲತ್ ನಲ್ಲಿ ಈ ಬಗ್ಗೆ ಮಾತನಾಡುತ್ತಾ, " ಅವತಾರ್ ಸಿನಿಮಾಗೆ ಜೇಮ್ಸ್ ಕ್ಯಾಮೆರೋನ್ ನನ್ನನ್ನು ಅಪ್ರೋಚ್ ಮಾಡಿದ್ದರು. ಮೈಯಲ್ಲಾ ಪೇಯಿಂಟ್ ಮಾಡಿಕೊಂಡು 410 ದಿನ ಶೂಟಿಂಗ್ ಮಾಡಬೇಕಿತ್ತು. ಆದರೆ ಅದು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ನೋ ಎಂದು ಬಿಟ್ಟೆ. ಸಿನಿಮಾಗೆ ಟೈಟಲ್ ಸಜೆಸ್ಟ್ ಮಾಡಿದ್ದು ನಾನೇ. ಚಿತ್ರ ಕಂಪ್ಲೀಟ್ ಆಗಲು 7 ವರ್ಷ ಬೇಕಾಗಬಹುದು ಎಂದು ಮೊದಲೇ ಹೇಳಿದ್ದೆ. ಜೊತೆಗೆ ಸೂಪರ್ ಹಿಟ್ ಕೂಡಾ ಆಗುತ್ತೆ ಎಂದಿದದೆ. ಆದರಂತೆ 8-9 ವರ್ಷದ ನಂತರ ಅವತಾರ್ ತೆರೆಗೆ ಬಂತು. ಹಿಟ್ ಆಯಿತು" ಎಂದು ಗೋವಿಂದ ಹೇಳಿದ್ದಾರೆ.
ಕಮಲಿ ಧಾರಾವಾಹಿ ಅಹಂಕಾರಿ ಅನಿಕಾಳ ಮತ್ತೊಂದು ಮುಖವಿದು!
‘ಅವತಾರ್’ ಸಿನಿಮಾದಲ್ಲಿ ಲಿವುಡ್ ನಟರಾದ ಚೆರಿಸ್ ಎವಾನ್ಸ್ ಹಾಗೂ ಚನ್ನಿಂಗ್ ತಾಟಮ್ ನಟಿಸಿದ್ದಾರೆ. 2009 ರಲ್ಲಿ ಇಡೀ ಜಗತ್ತನ್ನೇ ಬೆರಗುಗೊಳಿಸಿದ ಸಿನಿಮಾ. ಅತೀ ಹೆಚ್ಚು ಮೊತ್ತದ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಇದೀಗ ಅವತಾರ್ ಸಿನಿಮಾ ಪಾರ್ಟ್ 2 ಕೂಡಾ ತೆರೆಗೆ ಬರಲು ಸಿದ್ಧವಾಗಿದೆ. ಜೇಮ್ಸ್ ಕ್ಯಾಮರೂನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
1980 -90 ರ ದಶಕದಲ್ಲಿ ನಟ ಗೋವಿಂದ ಉತ್ತುಂಗದಲ್ಲಿದ್ದರು. ಕಾಮಿಡಿ, ಮ್ಯಾನರಿಸಂ, ಡ್ಯಾನ್ಸ್ ನಿಂದ ಪ್ರೇಕ್ಷಕರಿಗೆ ಇಷ್ಟವಾಗಿದ್ದ ನಟ. ಸ್ವರ್ಗ್ ಹಮ್, ಶೋಲಾ ಔರ್ ಶಬನಮ್, ಆಂಖೇ, ಕೂಲಿ ನಂ 1, ಹೀರೋ ನಂ 1 ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.