Kannada Rajyostva: ಕನ್ನಡ ನಾಡನ್ನು ಒಗ್ಗೂಡಿಸಿದ ಕನ್ನಡಿಗರ ಹೆಮ್ಮೆಯ ದಿನ ಕನ್ನಡ ರಾಜ್ಯೋತ್ಸವ

Published : Oct 28, 2022, 11:06 AM IST
Kannada Rajyostva: ಕನ್ನಡ ನಾಡನ್ನು ಒಗ್ಗೂಡಿಸಿದ ಕನ್ನಡಿಗರ ಹೆಮ್ಮೆಯ ದಿನ ಕನ್ನಡ ರಾಜ್ಯೋತ್ಸವ

ಸಾರಾಂಶ

ನವೆಂಬರ್ 1 ಕನ್ನಡಿಗರೆಲ್ಲ ಹೆಮ್ಮೆ ಪಡುವ ದಿನ. ಕನ್ನಡ ರಾಜ್ಯೋತ್ಸವ ಎಂದರೆ ಕನ್ನಡಿಗರ ಮನಸ್ಸು ಹೆಮ್ಮೆಯಿಂದ ತುಂಬುತ್ತದೆ. ಚದುರಿ ಹೋಗಿದ್ದ ನಮ್ಮ ಕನ್ನಡ ನಾಡು ಒಗ್ಗೂಡಿದ ದಿನವೇ ರಾಜ್ಯೋತ್ಸವ. ನಮ್ಮ ನೆಲ, ನಮ್ಮ ನಾಡು ನಮ್ಮದೇ ಆದ ಕ್ಷಣ. ಕನ್ನಡ ರಾಜ್ಯೋತ್ಸವಕ್ಕೆ ಮಹತ್ವದ ಹಿನ್ನೆಲೆ ಇದೆ.

ಕನ್ನಡ ರಾಜ್ಯೋತ್ಸವದ ದಿನ ನವೆಂಬರ್‌ 1. ಈ ಬಾರಿ ನಾವು 67ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಹಾಗೆ ನೋಡಿದರೆ ಸ್ವಾತಂತ್ರ್ಯಪೂರ್ವದಲ್ಲೇ ಕನ್ನಡ ನಾಡಿನ ಒಗ್ಗೂಡುವಿಕೆಯ ಕಾರ್ಯ ಶುರುವಾಗಿತ್ತು. ಆದರೆ ಅಷ್ಟು ಹೊತ್ತಿಗೆ ದೇಶವನ್ನು ಬ್ರಿಟೀಷರ ದಾಸ್ಯದಿಂದ ಮುಕ್ತಗೊಳಿಸುವುದೇ ಮಹತ್ವದ್ದಾದ ಕಾರಣ ಎಲ್ಲರ ಗಮನ ಸ್ವಾತಂತ್ರ್ಯ ಹೋರಾಟದ ಕಡೆಗೇ ಇತ್ತು. ಸ್ವಾತಂತ್ರ್ಯಾ ನಂತರ ನಾಡು, ನುಡಿಗಾಗಿನ ಹೋರಾಟವೂ ಶುರುವಾಯಿತು. ಕನ್ನಡನಾಡನ್ನು ಒಗ್ಗೂಡಿಸಿದ ಕರ್ನಾಟಕ ಏಕೀಕರಣ ಚಳವಳಿಯನ್ನು ಈ ಹೊತ್ತಿನಲ್ಲಿ ನೆನೆಸಿಕೊಳ್ಳಲೇ ಬೇಕು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ರಾಜ್ಯವಾರು ವಿಂಗಡನೆ ಶುರುವಾಯಿತು. ಈ ಹಿನ್ನೆಲೆಯಲ್ಲಿ ಮದ್ರಾಸ್ ಸರ್ಕಾರದ ಭಾಗವಾಗಿದ್ದ ಕರುನಾಡು 1950ರಲ್ಲಿ ಮೈಸೂರು ರಾಜ್ಯವಾಯಿತು, ಮೈಸೂರಿನ ಒಡೆಯರ್ ರಾಜ್ಯಪಾಲರಾದರು. ಆದರೆ ಕನ್ನಡ ಮಾತಾಡುವ ಕನ್ನಡಿಗರಿರುವ ಎಷ್ಟೋ ಜಾಗಗಳು ಬೇರೆ ರಾಜ್ಯಗಳ ನಿಯಂತ್ರಣದಲ್ಲಿದ್ದವು. ಸುಮಾರು ಇಪ್ಪತ್ತಕ್ಕೂ ಹೆಚ್ಚು ಪ್ರಾಂತ್ಯಗಳು ಹರಿದು ಹಂಚಿಹೋಗಿದ್ದವು. ಇದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಿತ್ತು. ಕನ್ನಡ ಮಾತಾಡುವವರೆಲ್ಲ ಕನ್ನಡ ನಾಡಿನೊಳಗೆ ಬರಬೇಕು ಅನ್ನುವ ಆಶಯ ಗಟ್ಟಿಯಾಗುತ್ತಾ ಹೋಯಿತು.

ಅದು ಹತ್ತೊಂಭತ್ತನೆಯ ಶತಮಾನದ ಉತ್ತರಾರ್ಧ. ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು ಕರ್ನಾಟಕದೊಳಗೆ ಸೇರಿಸಬೇಕು ಅನ್ನುವ ಕೂಗು ಜೋರಾಯಿತು. ಆ ಹೊತ್ತಿಗೆ ರಾಜ್ಯ ಪುನರ್‌ಸಂಘಟನಾ ಕಾಯ್ದೆ ಜಾರಿಗೆ ಬಂತು. ಇದರಿಂದಾದ ಲಾಭ ಅಂದರೆ ಕೊಡಗು ಕರ್ನಾಟಕದ ಭಾಗವಾಯ್ತು. ಮದ್ರಾಸ್‌, ಬಾಂಬೆ, ಹೈದ್ರಾಬಾದ್‌ನೊಳಗೆ ಸೇರಿಹೋಗಿದ್ದ ಕನ್ನಡ ನುಡಿ ಆಡುವವರ ನೆಲ ಕನ್ನಡ ನಾಡು ಕರ್ನಾಟಕದೊಳಗೆ ಸೇರಿಕೊಂಡಿತು. ದಕ್ಷಿಣ ಭಾರತದಲ್ಲಿ ಹರಡಿದ್ದ ಕನ್ನಡ ಭಾಷಿಕರ ಎಲ್ಲ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯ 1956 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಆ ದಿನವನ್ನೇ ನಾವಿಂದು ಕನ್ನಡ ರಾಜ್ಯದ ಉತ್ಸವ ಅನ್ನುವ ಅರ್ಥದಲ್ಲಿ ಕನ್ನಡ ರಾಜ್ಯೋತ್ಸವ ಎಂದು ಆಚರಿಸುತ್ತಿದ್ದೇವೆ.

ಅಪ್ಪು ಚಿತ್ರ ಗಂಧದ ಗುಡಿ ಇಂದು 200 ಕಡೆ ತೆರೆಗೆ: 80% ಟಿಕೆಟ್‌ ಮಾರಾಟ

ಇಷ್ಟೆಲ್ಲ ಆದಮೇಲೂ ಕನ್ನಡ ನೆಲದ ಒಂದಿಷ್ಟು ಭಾಗದ ಮಂದಿಗೆ ಮೈಸೂರು ರಾಜ್ಯವೆಂಬ ಹೆಸರು ಸರಿ ಬರಲಿಲ್ಲ. ಅದರಲ್ಲೂ ಉತ್ತರ ಕರ್ನಾಟಕದ ಜನ ಮೈಸೂರು ರಾಜ್ಯವೆಂಬ ಹೆಸರು ಬದಲಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಹೀಗಾಗಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ನವೆಂಬರ್ 1 ರಂದು 1973 ರಂದು ಬದಲಾಯಿಸಲಾಯಿತು. ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಾಗ ದೇವರಾಜ್‌ ಅರಸು ರವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

ಉತ್ತರ ಕರ್ನಾಟಕ ಭಾಗದ ಬಯಲು ಸೀಮೆಯ ಜನ ಈ ಹೆಸರು ಬದಲಿಸಲು ಒತ್ತಡ ಹಾಕಿದ ಕಾರಣ ಅಲ್ಲಿನ ಕಪ್ಪು ಭೂಮಿ ಕರುನಾಡಾಗಿ ಕರ್ನಾಟಕ ಎಂದು ಹೆಸರಾಯ್ತು ಎನ್ನಲಾಗಿದೆ. ಆದರೆ ಇದನ್ನು ಅಧಿಕೃತ ಎನ್ನಲಾಗದು. ಹಳೆಯ ಗ್ರಂಥಗಳು ಇದನ್ನು ಕರ್ನಾಟ ಎಂಬ ಪದದಿಂದ ಪಡೆಯಲಾಗಿದೆ ಎಂದು ಸೂಚಿಸುತ್ತವೆ. ಕೆಲವು ಮೂಲಗಳು ಕರ್ನಾಟಕವನ್ನು ಎತ್ತರದ ಭೂಮಿ ಎಂಬ ಪದದಿಂದ ಬಂದಿವೆ ಎಂದಿವೆ.

ಕರ್ನಾಟಕದೆಲ್ಲೆಡೆ ‘ಗಂಧದಗುಡಿ’ ಸಂಭ್ರಮ: ಅಭಿಮಾನಿಗಳಿಂದ ಪುನೀತ್‌ ಕಟೌಟ್‌ಗೆ ಹಾಲಿನ ಅಭಿಷೇಕ

ಇಷ್ಟೆಲ್ಲ ಆದಮೇಲೆ ಕರ್ನಾಟಕಕ್ಕೆ ಒಂದು ಧ್ವಜ ಬೇಕು ಎಂಬ ಮಾತುಗಳು ಕೇಳಿಬಂದವು. ಕನ್ನಡಕ್ಕೊಂದು ಬಾವುಟ ಅವಶ್ಯಕತೆಯನ್ನು ಮನಗೊಂಡ ಕನ್ನಡದ ಹೋರಾಟಗಾರರಾದ ಎಂ ರಾಮಮೂರ್ತಿಗಳು ಹಳದಿ ಹಾಗೂ ಕೆಂಪು ಬಣ್ಣ ಬಳಸಿ, ಬಾವುಟವನ್ನು ಸಿದ್ದಪಡಿಸಿದರು. ಇದರಲ್ಲಿ ಹಳದಿ ಬಣ್ಣ ಶಾಂತಿ, ಸೌಹಾರ್ದತೆಯನ್ನು ಸೂಚಿಸಿದರೆ ಕೆಂಪು ಬಣ್ಣ ಕ್ರಾಂತಿಯ ಸಂದೇಶ ನೀಡುತ್ತದೆ. ಕನ್ನಡಿಗರೂ ಶಾಂತಿಗೆ ಬದ್ಧ, ಯುದ್ಧಕ್ಕೂ ಸಿದ್ಧ ಎಂಬ ಸಂದೇಶ ಈ ಧ್ವಜದ ಬಣ್ಣದಲ್ಲಿದೆ ಎನ್ನಲಾಗಿದೆ.

ಸದ್ಯಕ್ಕೀಗ ಪಶ್ಚಿಮ ಘಟ್ಟಗಳಿಂದ ಸಮೃದ್ಧವಾಗಿರುವ ಕರ್ನಾಟಕ ರಾಜ್ಯವು ಭೌಗೋಳಿಕವಾಗಿ ಭಾರತದ ಆರನೇ ಅತಿ ದೊಡ್ಡ ಹಾಗೂ ಜನಸಂಖ್ಯೆ ಆಧಾರದಲ್ಲಿ ಎಂಟನೇ ಅತಿ ದೊಡ್ಡ ರಾಜ್ಯವಾಗಿದೆ. ಇಂಗ್ಲೀಷ್ ಹಾವಳಿ ಹೆಚ್ಚಿದ್ದರೂ ಕನ್ನಡ ತನ್ನ ಪ್ರಾಮುಖ್ಯತೆ ಕಳೆದುಕೊಂಡಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?