ಸುಸ್ಸು ಹೋಗಬೇಕೆಂದು ರಿಯಾಲಿಟಿ ಶೋನಲ್ಲಿ ನೀರು ಕುಡಿಯಲು ಬಿಡುತ್ತಿರಲಿಲ್ಲ: ನಟಿ ಶಿಲ್ಪಾ ಆಕ್ರೋಶ

Published : Oct 28, 2022, 11:03 AM IST
ಸುಸ್ಸು ಹೋಗಬೇಕೆಂದು ರಿಯಾಲಿಟಿ ಶೋನಲ್ಲಿ ನೀರು ಕುಡಿಯಲು ಬಿಡುತ್ತಿರಲಿಲ್ಲ: ನಟಿ ಶಿಲ್ಪಾ ಆಕ್ರೋಶ

ಸಾರಾಂಶ

ಝಲಕ್ ದಿಖ್ಲಾ ಜಾ 10 ರಿಯಾಲಿಟಿ ಶೋ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ನಟಿ ಶಿಲ್ಪಾ ಶಿಂಧೆ. ಕರಣ್ ಸಿನಿಮಾ ಮಾಡ್ತಾರಾ ಅಥವಾ ಜಡ್ಜ್‌ ಮಾಡ್ತಾರಾ?

ಹಿಂದಿ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಝಲಕ್ ದಿಖ್ಲಾ ಜಾ 10 ರಿಂದ ನಟಿ ಶಿಲ್ಪಾ ಶಿಂಧೆ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಶಿಲ್ಪಾ ವಿಡಿಯೋ ಮೂಲಕ ತೀರ್ಪುಗಾರರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕರಣ್ ಜೋಹಾರ್, ಮಾಧುರಿ ದೀಕ್ಷಿತ್ ಮತ್ತು ನೋರಾ ಫತೇಹಿ ತಪ್ಪು ಮಾಡುತ್ತಿದ್ದಾರೆ ಸೆಲೆಬ್ರಿಟಿಗಳ ವಿರುದ್ಧ ತಪ್ಪು ತೀರ್ಪು ಕೊಡುತ್ತಿದ್ದಾರೆ ಎಂದು ಅಸಲಿ ಕಥೆಯನ್ನು ಬಿಚ್ಚಿಟ್ಟಿದ್ದಾರೆ. 

ಶಿಲ್ಪಾ ಮಾತು:

'ನಾನು ನಿಯಾಳ ಕೊನೆ ಪರ್ಫಾರ್ಮೆನ್ಸ್‌ ನೋಡಿದೆ. ತೀರ್ಪುಗಾರರು ಕೊಟ್ಟಿರುವ ಪಾಯಿಂಟ್ ಮತ್ತು ಕಾಮೆಂಟ್‌ನ ನೋಡಿ ಶಾಕ್ ಆಗಿರುವೆ. ಆದರೆ ನಿಯಾ ನೃತ್ಯ ಆದ್ಮೇಲೆ ಏನಾಯ್ತು ಅದು ನನಗೆ ಬಿಗ್ ಶಾಕ್ ಕೊಟ್ಟಿದೆ. ಒಂದು ವಿಚಾರ ನಾನು ಕೇಳಬೇಕು ನಿರ್ದೇಶಕ ಕರಣ್ ಜೋಹಾರ್ ನೀನು ಇಲ್ಲಿ ತೀರ್ಪು ಕೊಡಲು ಬಂದಿದ್ಯಾ ಅಥವಾ ಧರ್ಮಾ ಪ್ರೊಡಕ್ಷನ್‌ನಲ್ಲಿ ಸಿನಿಮಾ ಮಾಡಲು ಆಡಿಷನ್ ಮಾಡುತ್ತಿರುವುದಾ? ಏನ್ ಅವರಿಗೆ ಆಸ್ಕರ್ ಅಥವಾ ನ್ಯಾಷನಲ್ ಅವಾರ್ಡ್‌ ಕೊಡಿಸುತ್ತೀರಾ. ಇದರಿಂದ ನಿನಗೆ ಏನ್ ಸಿಗುತ್ತದೆ? ಸ್ಪರ್ಧಿಗಳ ಜೀವನ ಹಾಳು ಮಾಡುತ್ತಿದ್ದೀರಿ. ' ಎಂದು ವಿಡಿಯೋದಲ್ಲಿ ಶಿಲ್ಪಾ ಮಾತನಾಡಿದ್ದಾರೆ.

ನಿದ್ರೆ ಬಂದಿಲ್ಲ ಅಂದ್ರೆ ವಿಕ್ಕಿ ಹಾಡುತ್ತಾನೆ: ಪತಿ ರೊಮ್ಯಾನ್ಸ್‌ ಬಗ್ಗೆ ಕತ್ರಿನಾ ಕೈಫ್‌ ಮಾತು

'ನೃತ್ಯ ಮಾಡುವ ಮೊದಲು 3 ನಿಮಿಷ ಒಬ್ಬ ಕಲಾವಿದ ಏನೆಲ್ಲಾ ಅನುಭವಿಸುತ್ತಾನೆಂದು ನಿಮಗೆ ಗೊತ್ತಿಲ್ಲ. ಇದರ ಬಗ್ಗೆ ನಿಮಗೆ ಒಂಡು ಐಡಿಯಾನೂ ಇಲ್ಲ. ಮೊದಲು ರುಬಿನಾ ವಿಡಿಯೋ ನೋಡಿ ಅಪಘಾತ ಆಗುವ ಮಟ್ಟಕ್ಕಿತ್ತು ನೃತ್ಯ, ಜೀವನವನ್ನು ರಿಸ್ಕ್‌ ತೆಗೆದುಕೊಂಡು ಮಾಡಿದ್ದರೂ ನೀವು ಕೊಡುವ ಪಾಯಿಂಟ್ ಯಾವ ಲೆಕ್ಕ? ಕಲಾವಿದರ ಜೀವನದಲ್ಲಿ ಸಣ್ಣ ಅಪಾಯವಾದರೂ ಏನ್ ಬೇಕಿದ್ದರೂ ಆಗಬಹುದು ಅದಕ್ಕೆ ನೀವು ಜವಾಬ್ದಾರಿ ತೆಗೆದುಕೊಳ್ಳುತ್ತೀರಾ? ರೀ ಜನರು ಬದುಕಿರುವಾಗ ಗೌರವ ಕೊಡಿ ಸತ್ತ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಹಾಕುವುದಲ್ಲ' ಎಂದು ಶಿಲ್ಪಾ ಹೇಳಿದ್ದಾರೆ. 

'ರಿಯಾಲಿಟಿ ಶೋಗಳನ್ನು ನೀವು ಮನೋರಂಜನೆ ದೃಷ್ಟಿಯಲ್ಲಿ ನೋಡುತ್ತೀರಿ ಆದರೆ ಅಲ್ಲಿ ಸ್ಪರ್ಧಿಗಳು ಎದುರಿಸುವ ಸಮಸ್ಯೆ ಯಾರಿಗೂ ಗೊತ್ತಿಲ್ಲ. ಸುಸುಗೆ ಹೋಗಬೇಕು ಎಂದು ನೀರು ಕುಡಿಯಲು ಬಿಡುವುದಿಲ್ಲ ಸುಸ್ತಾದ್ದರೂ ಮ್ಯಾನೇಜ್ ಮಾಡಬೇಕು. ವೀಕ್ಷಕರು ಕೇವಲ 3 ನಿಮಿಷ ನೃತ್ಯ ನೋಡುತ್ತಾರೆ ಆದರೆ ಅದರ ಹಿಂದೆ ಒಂದು ವಾರದ ಶ್ರಮ ಇರುತ್ತದೆ. ಹೀಗಾಗಿ ದಯವಿಟ್ಟು ತೀರ್ಪುಗಾರರಿಗೆ ಮಾತ್ರ ಗೌರವ ಮತ್ತು ಸೌಲಭ್ಯ ಸಿಗಬಾರದು ಶ್ರಮ ಪಡುವ ಸ್ಪರ್ಧಿಗಳಿಗೂ ಸಿಗಬೇಕು. ತೀರ್ಪುಗಾರರು ಕೊಡುವ ಕಾಮೆಂಟ್ ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ' ಎಂದಿದ್ದಾರೆ ಶಿಲ್ಪಾ.

ಸಾಂಪ್ರದಾಯಿಕ ಉಡುಗೆಯಲ್ಲಿ ದೀಪಾವಳಿ ಆಚರಿಸಿದ ಆಮೀರ್‌ ಖಾನ್‌ ಪುತ್ರಿ ಟ್ರೋಲ್‌

ಬಾಲಿವುಡ್‌ನಲ್ಲಿ ರೇಪ್‌ ಅನ್ನೋದೆ ಇಲ್ಲ:

ಹಿಂದಿ ಕಿರುತೆರೆಯ ಕಲಾವಿದೆ, ಬಿಗ್ ಬಾಸ್ 11 ರ ವಿನ್ನರ್ ಶಿಲ್ಪಾ ಶಿಂಧೆ ಸಹ ಮೀ ಟೂ ಬಗ್ಗೆ ಮಾತನಾಡಿದ್ದಾರೆ. ಆದರೆ ಅವರು ಹೇಳಿರುವ ವಿಚಾರ ಉಳಿದ ನಟಿಯರ ಆರೋಪಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ತನ್ನ ಮೇಲೆ ನಿರ್ಮಾಪಕ ಸಂಜಯ್ ಕೊಹ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕಳೆದ ವರ್ಷ ಇದೇ ನಟಿ ಆರೋಪಿಸಿದ್ದರು.‘ಭಾಬಿಜೀ ಘರ್ ಪರ್ ಹೈ’ ಎಂಬ ಟಿವಿ ಶೋನಲ್ಲಿ ಮುಂದುವರೆಯಲು ತನ್ನೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ನಿರ್ಮಾಪಕ ಸಂಜಯ್ ಕೊಹ್ಲಿ ಒತ್ತಡ ಹೇರಿದ್ದರು ಎಂದು ಶಿಲ್ಪಾ ದೂರಿದ್ದರು. ಆದರೆ ಈಗ ಅವರು ಹೇಳಿರುವ ಮಾತು ವ್ಯತಿರಿಕ್ತವಾಗಿದೆ.ಮೀ ಟೂ ಬಗ್ಗೆ ಖಾಸಗಿ ವಾಹಿನಿಯೊಂದು ಪ್ರಶ್ನೆ ಮಾಡಿದಾಗ ‘ ಇದು ಶುದ್ಧ ಬಾಲಿಶತನ, ಆಗ ಮಾತನಾಡದೆ ಈಗ ಮಾತನಾಡುವುದರಲ್ಲಿ ಅರ್ಥ ಏನಿದೆ?’ ಎಂದು ಪ್ರಶ್ನೆ ಮಾಡಿದ್ದಾರೆ.

ಇದೆಲ್ಲವೂ ಮ್ಯುಚುವಲ್ ಅಂಡರ್ ಸ್ಟಾಂಡಿಂಗ್ ಮೇಲೆ ನಡೆಯುತ್ತದೆ. ಅತ್ಯಾಚಾರದ ಮಾತು ಬಾಲುವುಡ್ ನಲ್ಲೇ ಇಲ್ಲ. ಯಾರನ್ನೂ ಯಾರೂ ಒತ್ತಾಯಪೂರ್ವಕವಾಗಿ ಹಾಸಿಗೆಗೆ ಎಳೆದೊಯ್ಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?