
ಪೈಲ್ವಾನ್ ಚಿತ್ರದಲ್ಲಿನ ನಿಮ್ಮ ನಟನೆಗೆ ಸಿಕ್ಕ ರೆಸ್ಪಾನ್ಸ್ ಬಗ್ಗೆ ಏನ್ ಹೇಳ್ತೀರಾ?
ಕನ್ನಡದ ಜನತೆ ನನ್ನನ್ನು ಈ ಮಟ್ಟದಲ್ಲಿ ರಿಸೀವ್ ಮಾಡ್ತಾರೆ ಅಂತಂದುಕೊಂಡಿರಲಿಲ್ಲ. ನಾನಿಲ್ಲಿಗೆ ಹೊಸಬಳು, ಜತೆಗೆ ಹೊರ ಊರಿನಿಂದ ಇಲ್ಲಿಗೆ ಬಂದವಳು ಎನ್ನುವುದು ಅದಕ್ಕಿದ್ದ ಕಾರಣ. ಆದರೂ, ಜನರು ನನ್ನನ್ನು ರಿಸೀವ್ ಮಾಡಿದ ರೀತಿಗೆ ಫುಲ್ ಎಕ್ಸೈಟ್ ಆಗಿದ್ದೇನೆ.
ಪ್ರೇಕ್ಷಕನ ಕಣ್ಣಲ್ಲಿ ಕಂಡಂತೆ ’ಪೈಲ್ವಾನ್’!
ಚಿತ್ರದಲ್ಲಿನ ನಿಮ್ಮ ಆ್ಯಕ್ಟಿಂಗ್ ಬಗ್ಗೆ ಫಸ್ಟ್ ಕಮೆಂಟ್ ಹೇಳಿದ್ದು ಯಾರು?
ಮೊದಲಿಗೆ ಮೆಚ್ಚುಗೆ ಹೇಳಿದ್ದು ಡೈರೆಕ್ಟರ್. ಚಿತ್ರೀಕರಣದ ವೇಳೆ ಪ್ರತಿ ಸೀನ್ ಟೇಕ್ ಆದ ಮೇಲೆ ಪ್ರಶಂಸೆ ಸಿಗುತ್ತಿತ್ತು. ತುಂಬಾ ಚೆನ್ನಾಗಿ ಅಭಿನಯಿಸಿದ್ದೀರಿ ಅಂತ ಹೇಳ್ತಿದ್ರು. ಅದೇ ರೀತಿ ಸುದೀಪ್ ಸರ್ ಕೂಡ ತುಂಬಾ ಸಪೋರ್ಟ್ ಮಾಡ್ತಿದ್ರು. ಅದು ನನ್ನೊಳಗಿನ ನಟನೆಯ ವಿಶ್ವಾಸವನ್ನು ಮತ್ತಷ್ಟುಹೆಚ್ಚು ಮಾಡಿತ್ತು. ಆದರೂ ಆಡಿಯನ್ಸ್ ಜಡ್ಜ್‌ಮೆಂಟ್ ಮುಖ್ಯ. ಈಗ ಅವರಿಗೂ ಇಷ್ಟವಾಗಿದ್ದೇನೆನ್ನುವ ಖುಷಿಯಿದೆ.
ಈಗ ನಿಮಗೆ ಕನ್ನಡ, ಕನ್ನಡ ಚಿತ್ರೋದ್ಯಮ ಅಂದ್ರೆ ಹೇಗನಿಸುತ್ತೆ?
ಎಂಟ್ರಿಯಲ್ಲೇ ಜನರ ಆಶೀರ್ವಾದ ಸಿಕ್ಕಿದೆ. ಹೇಗೋ ಏನೋ ಎನ್ನುವ ಆತಂಕ ಇತ್ತಾದರೂ ಈಗ ಇಲ್ಲಿಯೇ ಇರಬೇಕು ಅಂತೆನಿಸುತ್ತಿದೆ. ಕಲಾವಿದೆಯಾಗಿ ಪ್ರತಿ ಭಾಷೆಯೂ ನನಗೆ ಮುಖ್ಯವೇ ಆಗಿದ್ದರೂ ಎಲ್ಲಿ ಆತ್ಮೀಯವಾದ ಆತಿಥ್ಯ ಸಿಗುತ್ತದೋ ಅಲ್ಲಿಯೇ ಕಂಫರ್ಟ್ ಫೀಲಿಂಗ್ ಇರುತ್ತದೆ. ಅಂತಹ ವಾತಾವರಣ ನನಗಿಲ್ಲಿ ಸಿಕ್ಕಿದೆ.
ಮತ್ತೆ ಮದಿವೆಯಾಗ್ತಾರಂತೆ ಕಿಚ್ಚ ಸುದೀಪ್ ಪತ್ನಿ!
ಸದ್ಯಕ್ಕೆ ಕನ್ನಡದಿಂದ ಯಾವುದಾದರೂ ಹೊಸ ಆಫರ್ ಬಂದಿವೆಯೇ?
ಆಫರ್ ಬರುತ್ತಿವೆ. ಕೆಲವರು ಫೋನ್ ಮಾಡಿ, ಹೊಸ ಸಿನಿಮಾಗಳ ಬಗ್ಗೆ ವಿಚಾರಿಸಿದ್ದಾರೆ. ಆದರೆ ಅದ್ಯಾವುದು ಫೈನಲ್ ಆಗಿಲ್ಲ.
ರಮಾಕಾಂತ್ ಬರೆಯುತ್ತಾರೆ..ಕನ್ನಡದ Attitude ಪೈಲ್ವಾನ್ ಸುದೀಪ್!
ಕನ್ನಡ ಹೊರತು ಪಡಿಸಿ, ಬೇರೆ ಭಾಷೆಗಳಲ್ಲಿ ನಿಮ್ಮ ಪಾತ್ರಕ್ಕೆ ಸಿಕ್ಕ ರೆಸ್ಪಾನ್ಸ್ ಹೇಗಿತ್ತು?
ಮೊದಲಿನಿಂದಲೂ ನನಗೆ ಹಿಂದಿ ಟಚ್ ಇದೆ. ಸಾಕಷ್ಟುಮಂದಿ ಇಲ್ಲಿ ಪರಿಚಿತರು ಇದ್ದಾರೆ. ಅವರೆಲ್ಲ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ಒಂದೇ ಸಿನಿಮಾ ಮೂಲಕ ಬಹುಭಾಷೆಗಳಲ್ಲಿ ಪರಿಚಯವಾಗುವುದು, ಅಲ್ಲೂ ನನಗೆ ಒಳ್ಳೆಯ ರೆಸ್ಪಾನ್ಸ್ ಸಿಗುವುದು ಅಪರೂಪ. ಆದ್ರೆ ಈ ವಿಚಾರದಲ್ಲಿ ನಾನು ಲಕ್ಕಿ. ಒಂದೊಳ್ಳೆಯ ಪ್ಲಾಟ್‌ಫಾಮ್‌ರ್ ಸಿಕ್ಕಿದೆ. ಈ ಮೂಲಕ ಒಳ್ಳೆಯ ಅವಕಾಶಗಳ ನಿರೀಕ್ಷೆಯಲ್ಲಂತೂ ನಾನಿದ್ದೇನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.