ಶಹಬ್ಬಾಸ್..! ಸರ್ಕಾರಿ ಶಾಲೆ ದತ್ತು ಪಡೆದ ಡಿ ಬಾಸ್ ಫ್ಯಾನ್ಸ್

By Shrilakshmi ShriFirst Published Sep 25, 2019, 3:28 PM IST
Highlights

ಮಲೆನಾಡಿನ ಸರ್ಕಾರಿ ಶಾಲೆ ದತ್ತು ಪಡೆದ ದರ್ಶನ್, ದಿನಕರ್ ಅಭಿಮಾನಿಗಳು | ಶೈಕ್ಷಣಿಕವಾಗಿ ಪ್ರಗತಿ ಮಾಡಿಸಲು ಶಾಲೆ ದತ್ತು | ಡಿ ಕಂಪೆನಿ ಫ್ಯಾನ್ಸ್ ಅಸೋಸಿಯೇಷನ್ ಯಿಂದ ಸಮಾಜಮುಖಿ ಕಾರ್ಯ |  ದಿನಕರ್ ಹುಟ್ಟುಹಬ್ಬದ ದಿನದಂದು ಒಳ್ಳೆಯ ಕಾರ್ಯಕ್ಕೆ ಚಾಲನೆ

ಹಾಸನ (ಸೆ. 25): ತಮ್ಮ ನೆಚ್ಚಿನ ಫಿಲ್ಮ್ ಹೀರೋಗಳ ಕಟ್ ಔಟ್ ಹಾಕಿ ಹಾಲಿನ ಅಭಿಷೇಕ ಮಾಡೋದು ಅಭಿಮಾನಿಗಳ ಸಾಮಾನ್ಯ ಕೆಲಸ. ದರ್ಶನ್ ಅಭಿಮಾನಿಗಳು ಸಮಾಜಮುಖಿ ಕೆಲಸ ಮಾಡಲು ಮುಂದಾಗಿದ್ದಾರೆ‌.  ಹಿಂದುಳಿದ ಹಳ್ಳಿ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದಿರುವ ಡಿ ಬಾಸ್ ಹುಡುಗರು, ಆ ಶಾಲೆಗೆ ಹೊಸ ರೂಪ ಕೊಟ್ಟು ಮಾದರಿ ಶಾಲೆ ಮಾಡಲು ಹೊರಟಿದ್ದಾರೆ. 

ಏನಪ್ಪಾ! ಆರ್ಯವರ್ಧನ್‌ಗೆ ಅನು ಮಾತ್ರ ಅನ್ಕೊಂಡ್ರೆ ಊರ್‌ ಹುಡ್ಗಿರೆಲ್ಲಾ ಫ್ಯಾನ್ಸ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ದಿನಕರ್ ತೂಗುದೀಪ ಅಭಿಮಾನಿಗಳೆಲ್ಲ ಸೇರಿ ಡಿ ಕಂಪನಿ ಎಂಬ ನೋಂದಾಯಿತ ಸಂಘ ಮಾಡಿಕೊಂಡಿದ್ದು, ಜನಪರ ಹಾಗೂ ಸಮಾಜಮುಖಿ ಕೆಲಸ ಮಾಡುತ್ತಿವೆ. ದಚ್ಚು ಸಹೋದರ ದಿನಕರ್ ಹುಟ್ಟುಹಬ್ಬ ಹಿನ್ನಲೆ ಹಾಸನದ ಸಕಲೇಶಪುರ ತಾಲೂಕಿನ ರಾಮೆನಹಳ್ಳಿ ಗ್ರಾಮದಲ್ಲಿನ ಸ್ಕೂಲನ್ನು ಎರಡು ವರ್ಷಕ್ಕೆ ದತ್ತು ಪಡೆದಿದೆ.  ಟಕ್ಕರ್ ಸಿನಿಮಾ ತಂಡ ಶಾಲೆಗೆ ಆಗಮಿಸಿ ದಿನಕರ್ ಬರ್ತ್ ಡೇ ವಿಶೇಷವಾಗಿ ಮಕ್ಕಳಿಗೆ ಪುಸ್ತಕ ಸಮವಸ್ತ್ರ ನೀಡಿ ಶಾಲೆಯನ್ನ ಮಾದರಿ ಮಾಡಲು ಪಣ ತೊಟ್ಟಿದ್ದಾರೆ. ಶಾಲಾ ವಿದ್ಯಾರ್ಥಿಗಳು ಇದರಿಂದ ಖುಷಿಯಾಗಿದ್ದಾರೆ.

25 ಲಕ್ಷದ ಪ್ರಶ್ನೆ ನೋಡಿ ಕೋಟ್ಯಧಿಪತಿ ಕ್ವಿಟ್‌ ಮಾಡಿದ ಸಂಸ್ಕೃತ ಶಿಕ್ಷಕ!

ಇನ್ನೂ ತನ್ನ ಹುಟ್ಟುಹಬ್ಬದಂದು ದುಂದು ವೆಚ್ಚ ಮಾಡದೆ ಸಮಾಜಿಕ ಕೆಲಸ  ಮಾಡಿ ಎಂಬ ದಿನಕರ್ ತೂಗುದೀಪ ಸಲಹೆ ಹಿನ್ನಲೆ ಅಭಿಮಾನಿಗಳು ಶಾಲೆಯನ್ನ ದತ್ತು ಪಡೆದಿದ್ದು, ಶಾಲೆಗೆ ಪೀಠೋಪಕರಣಗಳು ಬಣ್ಣ ಸೇರಿದಂತೆ ಮೂಲಭೂತ ಸೌಕರ್ಯ ನೀಡಿ ಕನ್ನಡ ಶಾಲೆಯ ಉಳಿವಿಗೆ ಶ್ರಮಿಸುವ ಭರವಸೆ ನೀಡಿದ್ದಾರೆ. ಮಕ್ಕಳ ಕಲಿಕೆ ಪೂರಕ ವಾತಾವರಣ ನಿರ್ಮಿಸುತ್ತಿರೋ ಆ ತಂಡಕ್ಕೆ ಶಾಲೆಯ ಪರವಾಗಿ ಧನ್ಯವಾದಗಳನ್ನು ಶಿಕ್ಷಕಿ ತಿಳಿಸಿದ್ದಾರೆ.

ದರ್ಶನ್ ಕೂಡಾ ಸಮಾಜಿಕ ಕೆಲಸಗಳನ್ನು ಮಾಡುವುದರಲ್ಲಿ ಸದಾ ಮುಂದು. ಕಷ್ಟದಲ್ಲಿರುವವರಿಗೆ, ಸಹಾಯದ ಅಗತ್ಯ ಇರುವವರಿಗೆ, ಯಾರೇ ಬಂದು ಸಹಾಯ ಮಾಡಿ ಎಂದವರಿಗೆ ದಚ್ಚು ಇಲ್ಲ ಎಂದಿದ್ದೇ ಇಲ್ಲ. ತೆರೆ ಮೇಲೆ ಮಾತ್ರವಲ್ಲ ನಿಜಜೀವನದಲ್ಲೂ ಹೀರೋ ಎನಿಸಿಕೊಂಡಿದ್ದಾರೆ. ದರ್ಶನ್ ಅಭಿಮಾನಿಗಳ ಈ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ. 
 

click me!