‘ಜೈ ಶ್ರೀರಾಮ್’ ಘರ್ಜನೆಗೆ ಥಿಯೇಟರ್‌ನಲ್ಲಿ ಗೂಸ್‌ಬಂಪ್ಸ್: ಕ್ಲೈಮ್ಯಾಕ್ಸ್ ಮುಗಿದರೂ ಸೀಟ್ ಬಿಟ್ಟು ಏಳಬೇಡಿ!

Published : Nov 06, 2026, 07:48 PM IST
Ramayana Movie

ಸಾರಾಂಶ

‘ರಾಮಾಯಣ ಪಾರ್ಟ್ 1’ ಚಿತ್ರದ ಕ್ಲೈಮ್ಯಾಕ್ಸ್ ಹಾಗೂ ಪೋಸ್ಟ್ ಕ್ರೆಡಿಟ್ ದೃಶ್ಯದ ಬಗ್ಗೆ ಕುತೂಹಲಕಾರಿ ಮಾಹಿತಿ ಹರಿದಾಡುತ್ತಿದೆ. ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಎಂಟ್ರಿ ದೃಶ್ಯದಲ್ಲಿ..

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ‘ರಾಮಾಯಣ ಪಾರ್ಟ್ 1’ ಇದೀಗ ಪ್ರೇಕ್ಷಕರ ಮುಂದೆ ಬಂದಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆರಂಭದಿಂದಲೂ ಭಾರೀ ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ಇದೀಗ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ ಎನ್ನಲಾಗಿದೆ. ಇದರ ನಡುವೆ ಚಿತ್ರದ ಕ್ಲೈಮ್ಯಾಕ್ಸ್ ಹಾಗೂ ಪೋಸ್ಟ್ ಕ್ರೆಡಿಟ್ ದೃಶ್ಯಗಳ ಕುರಿತ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿನಿಪ್ರಿಯರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ಚಿತ್ರದ ಕಥೆ ಸೀತಾಪಹರಣದ ಬಳಿಕ ಭಾವನಾತ್ಮಕ ತಿರುವು ಪಡೆದುಕೊಳ್ಳುತ್ತದೆ. ರಾವಣ ಸೀತೆಯನ್ನು ಅಪಹರಿಸಿದ ಬಳಿಕ ಆಕೆಯನ್ನು ರಕ್ಷಿಸಲು ಮುಂದಾಗುವ ಜಟಾಯು, ರಾವಣನ ವಿರುದ್ಧ ಹೋರಾಡಿ ಕೊನೆಗೆ ಪ್ರಾಣತ್ಯಾಗ ಮಾಡುತ್ತಾನೆ. ಈ ಘಟನೆ ಶ್ರೀರಾಮನನ್ನು ತೀವ್ರವಾಗಿ ದುಃಖಕ್ಕೀಡು ಮಾಡುತ್ತದೆ. ಸೀತೆಯನ್ನು ರಕ್ಷಿಸಿಯೇ ತೀರುತ್ತೇನೆ ಎಂದು ರಾಮ ಸಂಕಲ್ಪ ಮಾಡುತ್ತಾನೆ. ಈ ನಿರ್ಧಾರವೇ ಮುಂದೆ ರಾವಣನ ವಿರುದ್ಧ ನಡೆಯಲಿರುವ ಮಹಾಸಂಗ್ರಾಮಕ್ಕೆ ಮುನ್ನುಡಿಯಾಗುತ್ತದೆ.

ಕ್ಲೈಮ್ಯಾಕ್ಸ್‌ನಲ್ಲಿ ಹನುಮಂತನ ಭರ್ಜರಿ ಎಂಟ್ರಿ!

ಚಿತ್ರದ ಕೊನೆಯ ಹಂತದಲ್ಲಿ ಪ್ರಮುಖ ಕಲಾವಿದರು ಹಾಗೂ ತಂತ್ರಜ್ಞರ ಹೆಸರುಗಳು ತೆರೆ ಮೇಲೆ ಮೂಡಿಬರುತ್ತವೆ. ಈ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಅಚ್ಚರಿ ನೀಡುವಂತೆ ಹನುಮಂತನ ಎಂಟ್ರಿ ದೃಶ್ಯವನ್ನು ತೋರಿಸಲಾಗಿದೆ ಎನ್ನಲಾಗಿದೆ. ವಿಶೇಷವೆಂದರೆ, ಈ ದೃಶ್ಯದಲ್ಲಿ ಹನುಮಂತನ ಪಾತ್ರದಲ್ಲಿ ನಟಿಸಿರುವ ಸನ್ನಿ ಡಿಯೋಲ್ ಅವರ ಮುಖವನ್ನು ನೇರವಾಗಿ ತೋರಿಸಿಲ್ಲ. ಬದಲಿಗೆ ಅವರ ಬೃಹತ್ ದೇಹಾಕೃತಿ ಹಾಗೂ ಶಕ್ತಿಯನ್ನು ಅದ್ಭುತ ದೃಶ್ಯಗಳ ಮೂಲಕ ಪರಿಚಯಿಸಲಾಗಿದೆ.

ಚಿತ್ರದಲ್ಲಿ ಶಕ್ತಿಶಾಲಿ ಆಂಜನೇಯನ ಪಾತ್ರದಲ್ಲಿ ಬಾಲಿವುಡ್‌ನ ಹಿರಿಯ ನಟ ಸನ್ನಿ ಡಿಯೋಲ್ ಕಾಣಿಸಿಕೊಳ್ಳುತ್ತಿರುವುದು ಈಗಾಗಲೇ ಗೊತ್ತಿರುವ ವಿಚಾರ. ಆದರೆ ಅವರ ಪಾತ್ರದ ಪೂರ್ಣ ಪರಿಚಯವನ್ನು ಮುಂದಿನ ಭಾಗಕ್ಕೆ ಉಳಿಸಿಕೊಂಡಿರುವುದು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.

ಹನುಮಾನ್ ಚಾಲೀಸಾ ಹಿನ್ನೆಲೆ; ‘ಜೈ ಶ್ರೀರಾಮ್’ ಘರ್ಜನೆ!

ಪೋಸ್ಟ್ ಕ್ರೆಡಿಟ್ ದೃಶ್ಯದಲ್ಲಿ ಹನುಮಾನ್ ಚಾಲೀಸಾ ಮೊಳಗುತ್ತಿರುವಾಗ, ಹನುಮಂತನ ರೂಪದಲ್ಲಿ ಸನ್ನಿ ಡಿಯೋಲ್ ಆಕಾಶಕ್ಕೆ ಜಿಗಿಯುವ ದೃಶ್ಯವಿದೆಯಂತೆ. ಅಪಾರ ಶಕ್ತಿಯನ್ನು ಪ್ರದರ್ಶಿಸುವ ಈ ದೃಶ್ಯ ಅಭಿಮಾನಿಗಳಿಗೆ ರೋಮಾಂಚನ ಉಂಟುಮಾಡುವಂತಿದೆ ಎನ್ನಲಾಗುತ್ತಿದೆ. ಇನ್ನು ಈ ದೃಶ್ಯದ ಕೊನೆಯಲ್ಲಿ ಹನುಮಂತನು ‘ಜೈ ಶ್ರೀರಾಮ್’ ಎಂದು ಘರ್ಜಿಸುವ ಕ್ಷಣವೇ ಚಿತ್ರದ ಪ್ರಮುಖ ಹೈಲೈಟ್ ಎನ್ನಲಾಗುತ್ತಿದೆ. ಸನ್ನಿ ಡಿಯೋಲ್ ಅವರ ಹನುಮಂತನ ಅವತಾರವನ್ನು ನೋಡಲು ಕಾಯುತ್ತಿರುವ ಅಭಿಮಾನಿಗಳಲ್ಲಿ ಈ ಸುದ್ದಿ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

‘ರಾಮಾಯಣ ಪಾರ್ಟ್ 2’ ಮೇಲೆ ಹೆಚ್ಚಿದ ನಿರೀಕ್ಷೆ!

ಸೀತಾರಾಮರ ವನವಾಸ, ಸೀತಾಪಹರಣ ಹಾಗೂ ಜಟಾಯುವಿನ ತ್ಯಾಗದಂತಹ ಭಾವನಾತ್ಮಕ ಘಟನೆಗಳೊಂದಿಗೆ ಮೊದಲ ಭಾಗವನ್ನು ಮುಕ್ತಾಯಗೊಳಿಸಿರುವ ಚಿತ್ರತಂಡ, ಹನುಮಂತನ ಎಂಟ್ರಿ ಮೂಲಕ ಎರಡನೇ ಭಾಗದ ಬಗ್ಗೆ ಭಾರೀ ಕುತೂಹಲ ಮೂಡಿಸುವ ಪ್ರಯತ್ನ ಮಾಡಿದೆ ಎನ್ನಲಾಗಿದೆ. ಇನ್ನು ವರದಿಗಳ ಪ್ರಕಾರ, ‘ರಾಮಾಯಣ ಪಾರ್ಟ್ 2’ ಚಿತ್ರದ ಚಿತ್ರೀಕರಣ ಜನವರಿಯಲ್ಲಿ ಆರಂಭವಾಗಲಿದ್ದು, 2028ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಯಾಗುವ ಯೋಜನೆಯಿದೆ. ಮೊದಲ ಭಾಗದ ಅಂತ್ಯದಲ್ಲಿ ಹನುಮಂತನ ಪಾತ್ರದ ಪರಿಚಯ ನೀಡಿರುವುದು ಎರಡನೇ ಭಾಗದಲ್ಲಿ ನಡೆಯಲಿರುವ ರಾಮ-ರಾವಣರ ಮಹಾಸಂಗ್ರಾಮದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

VIRAL: 'ರಾಮಾಯಣ' ಬಿಡುಗಡೆ ಬಳಿಕ ಜಗತ್ತು ಹೇಳ್ತಿರೋದೇನು? ರಣಬೀರ್-ಯಶ್-ಸಾಯಿ ಪಲ್ಲವಿ ಬಗ್ಗೆ ಶಾಕಿಂಗ್ 'ಮೌತ್ ಟಾಕ್'
ಆ ಇಬ್ಬರು ಸ್ಟಾರ್ ಹೀರೋಗಳ ಜೊತೆ ನಟಿಸಲು ಸಾಧ್ಯವಾಗಲಿಲ್ಲ: ಕುತೂಹಲದ ವಿಚಾರ ಬಿಚ್ಚಿಟ್ಟ ಖುಷ್ಬೂ!