ನಾಳೆ ಪಂಚನಹಳ್ಳಿಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ 2ನೇ ಪುಣ್ಯಸ್ಮರಣೆ!

By Govindaraj S  |  First Published Jun 17, 2023, 8:43 PM IST

ಸಂಚಾರಿ ವಿಜಯ್ ನಿಧನರಾದಾಗ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾದರಿಯ ನಡೆಯನ್ನು ಹಾಕಿಕೊಟ್ಟು ಹೋದರು. ವಿಜಯ್ ಅವರ ಸಮಾಜಮುಖಿ ಕೆಲಸಗಳನ್ನು ಅವರ ಗೆಳೆಯರ ಬಳಗ ಮುಂದುವರೆಸಿಕೊಂಡು ಹೋಗುತ್ತಿದೆ. 


ಸಿನಿಮಾಗಳ ಮೂಲಕ ಇವತ್ತಿಗೂ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿರುವ ರಾಷ್ಟ್ರ ಪ್ರಶಸ್ತಿ ಪಡೆದ ನಟ ಸಂಚಾರಿ ವಿಜಯ್ ಅವರು ಅಗಲಿ ಎರಡು ವರ್ಷಗಳು. ಅವರ 2ನೇ ವರ್ಷದ ಪುಣ್ಯ ಸ್ಮರಣೆಯನ್ನು ನಾಳೆ ವಿಜಯ್ ಅವರ ಹುಟ್ಟೂರಾದ ಪಂಚನಹಳ್ಳಿಯಲ್ಲಿ ಆಯೋಜನೆ ಮಾಡಲಾಗಿದೆ. 

ಸಂಚಾರಿ ವಿಜಯ್ ನಿಧನರಾದಾಗ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾದರಿಯ ನಡೆಯನ್ನು ಹಾಕಿಕೊಟ್ಟು ಹೋದರು. ವಿಜಯ್ ಅವರ ಸಮಾಜಮುಖಿ ಕೆಲಸಗಳನ್ನು ಅವರ ಗೆಳೆಯರ ಬಳಗ ಮುಂದುವರೆಸಿಕೊಂಡು ಹೋಗುತ್ತಿದೆ. ಎರಡನೇ ವರ್ಷದ ಪುಣ್ಯ ಸ್ಮರಣೆಯನ್ನು ಅರ್ಥಪೂರ್ಣವಾಗಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

Tap to resize

Latest Videos

ಸಂಚಾರಿ ವಿಜಯ್ ಹುಟ್ಟುಹಬ್ಬ; 'ರಾಷ್ಟ್ರ ಪ್ರಶಸ್ತಿ' ವಿಜೇತ ನಟನನ್ನು ನೆನೆದ ಆಪ್ತರು

ಸಂಚಾರಿ ವಿಜಯ್ ಅವರ ಕುಟುಂಬ, ಸಂಚಾರಿ ವಿಜಯ್ ಗೆಳೆಯರ ಬಳಗ, ಸಂಚಾರಿ ವಿಜಯ್ ಕಲಾ ಸಂಘ, ಸಂಚಾರಿ ವಿಜಯ್ ಸ್ಪೋರ್ಟ್ಸ್ ಕ್ಲಬ್ ಹಾಗೂ ರೋಟರಿ ಕ್ಲಬ್, ತಾಲೂಕ ಘಟಕ ಕಡೂರು ಇವರ ಸಂಯುಕ್ತ ಆಶ್ರಯದಡಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಕಡೂರು ತಾಲೂಕು, ಪಂಚನಹಳ್ಳಿಯಲ್ಲಿರುವ ವಿಜಯ್ ಅವರ ಸಮಾಧಿ ವಿಜಯನಿಧಿ ಬಳಿ ಕಾರ್ಯಕ್ರಮ ಆಯೋಜನೆಯಾಗಿದೆ.

ರಕ್ತದಾನ ಶಿಬಿರವನ್ನು ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರೆ, ಪಂಚನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಖಾ ಗಂಗನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ. ನಿರ್ದೇಶಕ ಬಿ.ಎಸ್.ಲಿಂಗದೇವರು, ಮಾಜಿ ಶಾಸಕರಾದ ಜಿ.ಹೆಚ್. ಶ್ರೀನಿವಾಸ್, ಶೃಂಗೇರಿ ಶಾಸಕರಾದ ಟಿ.ಡಿ ರಾಜೇಗೌಡ, ಮಾಜಿ ಶಾಸಕರಾದ ವೈ ಎಸ್ ವಿ ದತ್ತ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. 

ಸಂಚಾರಿ ವಿಜಯ್ ಪುಣ್ಯತಿಥಿ: ಪಂಚನಹಳ್ಳಿಯಲ್ಲಿ ಪ್ರತಿಮೆ ನಿರ್ಮಾಣ!

ಸಂಚಾರಿ ತಂಡದ ಎನ್. ಮಂಗಳಾ, ನಟ ರಂಗಾಯಣ ರಘು, ನಿರ್ದೇಶಕರಾದ ಮಂಸೋರೆ, ಪ್ರವೀಣ್ ಕೃಪಾಕರ್, ಅರವಿಂದ್ ಕುಪ್ಳಿಕರ್, ನಟ ಕೃಷ್ಣ ಹೆಬ್ಬಾಳೆ, ನಟಿಯರಾದ ಸೋನು ಗೌಡ, ಸುರಭಿ ಲಕ್ಷ್ಮೀ ಸೇರಿದಂತೆ ವಿಜಯ್ ಅವರ ಕುಟುಂಬ ಅಂದು ಉಪಸ್ಥಿತಿ ಇರಲಿದೆ.

click me!