ಕಿರುತೆರೆ ಕಪ್ಪು ಸುಂದರಿಯ ಬದುಕು!

By Web Desk  |  First Published May 17, 2019, 11:06 AM IST

2017ಜನವರಿ 22ರಂದು ಕನ್ನಡ ಕಿರುತೆರೆ ವೀಕ್ಷಕರಿಗೆ ಮುದ್ದು ಮನಸಿನ ಕೃಷ್ಣ ಸುಂದರಿಯನ್ನು ಪರಿಚಯಿಸಿತ್ತು ಸ್ಟಾರ್ ಸುವರ್ಣ ವಾಹಿನಿ. ಕಪ್ಪು ಬಣ್ಣದವಳೆಂಬ ಕಾರಣಕ್ಕೆ ಕೀಳರಿಮಗೆ ತಳ್ಳಿದ ಸಮಾಜವನ್ನು ದೈರ್ಯದಿಂದ ಎದುರಿಸಿ. ತನ್ನ ಅಪರಂಜಿಯಂತಹ ವ್ಯಕ್ತಿತ್ವದ ಮೂಲಕ ಮನೆಮಾತಾದವಳು ಮುದ್ದುಲಕ್ಷ್ಮಿ. ಅಲ್ಲಿಂದ ಇಲ್ಲಿಯವರೆಗಿನ ಮುದ್ದುಲಕ್ಷ್ಮಿಯ ಪಯಣ ಭಾವುಕ, ಸ್ಪೂರ್ತಿದಾಯಕ ಮತ್ತು ರೋಚಕ.


ಪ್ರಪಂಚವೇ ಎದುರಾದರು ನಾನು ನಿನ್ನ ಜೊತೆಯಿದ್ದೇನೆ ಎಂದು ಲಕ್ಷ್ಮಿಯನ್ನು ಪ್ರೀತಿಸಿ ಮದುವೆಯಾದ ಡಾ. ಧೃವಂತ್ ಈಗ ಅವಳನ್ನೇ ಅನುಮಾನಿಸಿ ಮನೆಯಿಂದ ಹೊರದೂಡಿದ್ದಾನೆ. ಆದರೆ ಇಷ್ಟು ದಿನ ಯಾರು ಎಷ್ಟೇ ಹೇಳಿದರು ಆಕೆಯನ್ನು ಸೊಸೆಯಾಗಿ ಸ್ವೀಕರಿಸದ ಅತ್ತೆ ಸೌಂದರ್ಯ ಈಗ ಬದಲಾಗಿದ್ದಾರೆ.

ಮುದ್ದುಲಕ್ಷ್ಮಿ ಈಗ ಎರಡು ಮುದ್ದಾದ ಮಕ್ಕಳ ತಾಯಿ. ಆದರೆ ಲಕ್ಷ್ಮಿಗೆ ತಾನು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದೇನೆ ಎಂಬ ಸಂಗತಿಯೇ ತಿಳಿದಿಲ್ಲ.ತನ್ನ ಅವಳಿ ಮಕ್ಕಳಲ್ಲಿ ಒಂದು ಮಗುವನ್ನು ಅವಳ ಅರಿವಿಗೆ ಬಾರದಂತೆ ಆಸ್ಪತ್ರೆಯಿಂದಲೇ ತೆಗೆದುಕೊಂಡು ಹೋಗಿರುವ ಅತ್ತೆ ಸೌಂದರ್ಯ ಅಕ್ಕರೆಯಿಂದ ಪೋಷಿಸುತ್ತಿದ್ದಾರೆ. ಕಪ್ಪು ಬಣ್ಣದವಳು ಎಂಬ ಕಾರಣಕ್ಕೆ ಮುದ್ದುಲಕ್ಷ್ಮಿಯನ್ನು ತಿರಸ್ಕರಿಸಿದ್ದ ಸೌಂದರ್ಯ ಈಗ ಅದಕ್ಕೆ ಪ್ರಾಯಶ್ಚಿತ್ತವಾಗಿ ಲಕ್ಷ್ಮಿಯ ಕಪ್ಪಗಿರುವ ಮಗುವನ್ನು ತಮ್ಮ ಮನೆಯಲ್ಲೇ ಪ್ರೀತಿಯಿಂದ ಬೆಳಸುವ ನಿರ್ಧಾರ ತೆಗೆದುಕೊಂಡಿದ್ದಾರೆ.

Tap to resize

Latest Videos

Phi Phi Islandನಲ್ಲಿ ‘ನಾಗಿಣಿ’ ಹಾಟ್ ಲುಕ್ ವೈರಲ್!

ಮಮತೆಯ ಎದುರು ಬಣ್ಣ ಮತ್ತು ರೂಪ ಲೆಕ್ಕಕ್ಕೆ ಬರುವುದಿಲ್ಲ ಎಂಬುದು ಈ ಮೂಲಕ ಸಾಬೀತಾಗಿದೆ. ಆದರೆ ಮುದ್ದುಲಕ್ಷ್ಮಿಗೆ ಈ ಗೆಲುವಿನ ಹಿಂದೆಯೇ ಮತ್ತೊಂದು ಸವಾಲು ಎದುರಾಗಿದೆ. ಹೆಣ್ಣಿನ ಆತ್ಮಾಭಿಮಾನ ಮತ್ತು ಅಸ್ತಿತ್ವವನ್ನೇ ಪ್ರಶ್ನಿಸಿದ್ದಾನೆ ಡಾ. ಧೃವಂತ್. ಲಕ್ಷ್ಮಿ ಜನ್ಮ ನೀಡಿರುವುದು ತನ್ನದೇ ಕೂಸು ಎಂಬುದನ್ನು ಒಪ್ಪಿಕೊಳ್ಳದೇ ಮನಸ್ಸಿನಲ್ಲಿ ಅನುಮಾನದ ಹುತ್ತ ಬೆಳಿಸಿಕೊಂಡಿದ್ದಾನೆ. ಮುದ್ದುಲಕ್ಮ್ಮಿಗೆ ತನಗೆ ಇನ್ನೊಂದು ಮಗುವಿರುವ ಸತ್ಯವೇ ತಿಳಿದಿಲ್ಲ, ಧೃವಂತ್‌ಗೆ ತನ್ನ ತಾಯಿ ಅನಾಥ ಮಗುವೆಂದು ಸಾಕಲು ತಂದಿರುವುದು ಅವನದೇ ಮಗುವೆಂಬ ಸತ್ಯ ಗೊತ್ತಿಲ್ಲ. ಕುಟುಂಬದ ಬೆಂಬಲವಿಲ್ಲದೇ ಮುದ್ದುಲಕ್ಷ್ಮಿ ಒಬ್ಬಳೇ ತನ್ನ ಮಗುವನ್ನು ಸಾಕುವ ಸನ್ನಿವೇಶ ಎದುರಾಗಿದೆ. ಯಾರ ಸಹಾಯವೂ ಇಲ್ಲದೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವೆ ಎಂದು ಹೊರಟಿರುವ ಲಕ್ಷ್ಮಿಗೆ ತಾನು ಹೆತ್ತಿರುವುದು ನಿನ್ನದೇ ಮಗು ಎಂಬ ಸತ್ಯವನ್ನು ಸ್ವತಃ ಗಂಡನಿಗೆ ಮನವರಿಕೆ ಮಾಡಿಕೊಡುವ ಸಂಕಟದ ಸ್ಥಿತಿ ಎದುರಾಗಿದೆ.

ವಿನಯಾ ಪ್ರಸಾದ್ 7 ವರ್ಷದ ಸಂಸಾರಕ್ಕೆ ಅಸಮಾಧಾನ ತಂದದ್ದು ಇದೊಂದೇ ವಿಚಾರ!

ಲಕ್ಷ್ಮಿ ತನ್ನ ಕುಟುಂಬದ ಜೊತೆ ಮತ್ತೆ ಒಂದಾಗ್ತಾಳಾ? ತನ್ನ ಮತ್ತೊಂದು ಮಗುವಿನ ಸತ್ಯ ಅವಳಿಗೆ ತಿಳಿಯುತ್ತಾ? ಏನೂ ಅರಿಯದ ಲಕ್ಷ್ಮಿಯ ಪುಟಾಣಿ ಕಂದಮ್ಮಗಳಿಗೆ-ತಂದೆ ತಾಯಿ ಇಬ್ಬರ ಪ್ರೀತಿಯೂ ಸಿಗುವಂತಾಗುತ್ತಾ? ಈ ಎಲ್ಲ ಪ್ರಶ್ನೆಗಳ ಉತ್ತರ ಮುಂದಿನ ಸಂಚಿಕೆಗಳಲ್ಲಿ ನೋಡುಗರ ಮುಂದೆ ಅನಾವರಣಗೊಳ್ಳಲಿದೆ. ಮುದ್ದುಲಕ್ಷ್ಮಿ ಸೋಮವಾರದಿಂದ ಶನಿವಾರದವರೆಗೆ ಪ್ರತಿ ರಾತ್ರಿ 7.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

click me!