
ಚಿತ್ರ ಕಾರಣಾಂತರಗಳಿಂದ ತಡವಾದರೂ ಚಿತ್ರದ ಬಗೆಗಿನ ಕ್ರೇಜ್ ಕಡಿಮೆ ಆಗಿಲ್ಲ ಎಂಬುದನ್ನು ಟ್ರೇಲರ್ ಹೇಳುತ್ತದೆ. ನಟ ಜಗ್ಗೇಶ್ ಅವರು ಈ ಸಂತಸವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಕೆಂಪೇಗೌಡ 2 ಚಿತ್ರಕ್ಕೆ ಟ್ರೇಲರ್ ಅನ್ನು ಒಂದು ಮಿಲಿಯನ್ ನೋಡಿದ್ದಾರೆಂದು ಕೇಳಿ ಖುಷಿ ಆಯಿತು. ಕನ್ನಡಿಗರಿಗೆ ಧನ್ಯವಾದಗಳು. ನಾನು ಆಗಾಗಲೇ ಸಿನಿಮಾ ನೋಡಿದ್ದೇನೆ. ನೋಡುವಾಗ ರೋಮಾಂಚನವಾಯಿತು. ಒಂದು ಯಶಸ್ವಿ ದೊಡ್ಡ ಕಮರ್ಷಿಯಲ್ ಸಿನಿಮಾಗಳ ಸಾಲಿಗೆ ಈ ಚಿತ್ರ ಸೇರುತ್ತದೆ. ಪ್ರೇಕ್ಷಕರಿಗೂ ಅದೇ ರೀತಿ ಇಷ್ಟವಾಗುತ್ತದೆಂಬ ನಂಬಿಕೆ ಇದೆ’ ಎಂದಿದ್ದಾರೆ ಜಗ್ಗೇಶ್.
‘ಮಣ್ಣಲ್ಲಿ ಹೂತಿಟ್ಟ ಸತ್ಯ ಹೊರ ತೆಗಿತೀನಿ’ ಎಂದ ಕಾಮಿಡಿ ಕಿಂಗ್!
ಒಂದು ಮಿಲಿಯನ್ ಹಿಟ್ಸ್ ಬಂದಿದೆ ಎನ್ನುವುದು ಖುಷಿಯ ವಿಚಾರ. ತುಂಬಾ ಜನ ಈ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಕೋರುತ್ತಿದ್ದಾರೆ. ಟ್ರೇಲರ್ ನೋಡಿದವರು ಸಿನಿಮಾ ನೋಡಕ್ಕೆ ಬರುತ್ತಾರೆ. ಯಾಕೆಂದರೆ ಅವರಲ್ಲಿ ಕುತೂಹಲ ಮೂಡಿಸಿದೆ. ಇಷ್ಟೇ ಸಂಖ್ಯೆಯಲ್ಲಿ ಸಿನಿಮಾ ನೋಡಿದರೆ ಖಂಡಿತ ನಮ್ಮ ಚಿತ್ರ ಸೂಪರ್ ಹಿಟ್ ಆಗುತ್ತದೆ.- ಕೋಮಲ್, ನಟ
ಈ ಚಿತ್ರದಲ್ಲಿ ಲೂಸ್‌ಮಾದ ಯೋಗೀಶ್ ನಟಿಸಿದ್ದಾರೆ. ಅವರ ಪಾತ್ರ ಹೇಗಿರುತ್ತದೆ ಎಂಬುದನ್ನು ಇಲ್ಲಿಯವರೆಗೂ ಗುಟ್ಟಾಗಿಯೇ ಇಡಲಾಗಿದೆ. ಕ್ರಿಕೆಟಿಗ ಶ್ರೀಶಾಂತ್ ಖಳನಾಯಕನಾಗಿ ನಟಿಸಿರುವುದು ಚಿತ್ರದ ಮತ್ತೊಂದು ಹೈಲೈಟ್. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವ ಶಂಕರೇಗೌಡ ಹಾಗೂ ಶ್ರೀಶಾಂತ್ ಇಬ್ಬರು ಆತ್ಮೀಯ ಸ್ನೇಹಿತರು. ಹೀಗಾಗಿಯೇ ಅವರು ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.