
ಅಮೃತಧಾರೆ ಸೀರಿಯಲ್ (Amruthadhaare Serial) ಮುಕ್ತಾಯ ಕಂಡಿದೆ. ಕಳೆದ ಮೂರೂವರೆ ವರ್ಷಗಳಿಂದ ಕೊನೆಯವರೆಗೂ ಎಲ್ಲರನ್ನೂ ಹಿಡಿದಿಟ್ಟುಕೊಂಡಿದ್ದ ಸೀರಿಯಲ್ ಅಂತ್ಯವಾಗಿದೆ. ಈ ಸೀರಿಯಲ್ ಮುಗಿದಿರುವುದು ಹಲವು ವೀಕ್ಷಕರಿಗೆ ಸಿಕ್ಕಾಪಟ್ಟೆ ನೋವು ತರಿಸಿದೆ. ಈ ಹಿಂದೆಯೇ ಹಲವು ಬಾರಿ ಸೀರಿಯಲ್ ಮುಗಿಯತ್ತೆ, ಮುಗಿಯತ್ತೆ ಎಂದೇ ಅಂದುಕೊಳ್ಳುವ ನಡುವೆಯೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ತಂದು ಕಥೆ ಮುಂದಕ್ಕೆ ಸಾಗುತ್ತಾ ಹೋಗಿತ್ತು. ಇನ್ನೇನು ಈಗಂತೂ ಖಂಡಿತವಾಗಿಯೂ ಸೀರಿಯಲ್ ಮುಗಿದೇ ಮುಗಿಯತ್ತೆ ಎಂದಾಗ ದೀಪಿಕಾಳ ಎಂಟ್ರಿ ಕೊಡಲಾಗಿತ್ತು. ಭೂಮಿಕಾಗೆ ಅವಳಿ ಸಹೋದರಿ ಇರುವ ಕಥೆ ಸೇರಿಸಲಾಯಿತು. ಅದೆಷ್ಟೋ ಬಾರಿ ಜೈದೇವ್ ಮತ್ತು ಶಕುಂತಲಾ ಕಥೆ ಮುಗಿಯಿತು ಎನ್ನುವಾಗಲೇ, ಗೌತಮ್ ಒಳ್ಳೆಯವನಾಗಿ ಅವರನ್ನು ಮನೆಗೆ ಸೇರಿಸಿಕೊಂಡು ಕಥೆಯನ್ನು ಮತ್ತಷ್ಟು ಎಳೆದಿದ್ದರಿಂದ ಈ ಬಾರಿಯೂ ಕಥೆ ಮುಗಿಯಲ್ಲ ಎಂದುಕೊಂಡವರೇ ಹೆಚ್ಚು. ಆದರೆ, ಹಾಗಾಗಲಿಲ್ಲ. ಸೀರಿಯಲ್ ತನ್ನ ಪಯಣ ಮುಗಿಸಿದೆ.
ಈ ಸೀರಿಯಲ್ನಲ್ಲಿ ಜೈದೇವನ ಅಂತ್ಯವಾಗಿದೆ. ಅದೂ ಪತ್ನಿ ಮಲ್ಲಿಯ ಕೈಯಲ್ಲಿ. ಜೈದೇವ ಎಷ್ಟೇ ಕ್ರೂರಿಯಾಗಿದ್ದರೂ, ಹ್ಯಾಂಡ್ಸಮ್ ನಟ ರಾಣವ್ ಗೌಡ ಅವರನ್ನು ವಿಲನ್ ಎಂದು ಒಪ್ಪಿಕೊಳ್ಳದ ವೀಕ್ಷಕರೇ ಹೆಚ್ಚು. ಹಲವು ಬಾರಿ ಪ್ರೊಮೋ ರಿಲೀಸ್ ಆದಾಗಲೆಲ್ಲಾ ಜೈದೇವನ ಪರವಾಗಿ ನಿಂತವರೂ ಹಲವರು ಇದ್ದಾರೆ. ಇದೇ ಕಾರಣಕ್ಕೆ ಜೈದೇವನ ಅಂತ್ಯ ಹೀಗೆ ಆಗಿದ್ದು ಅವರ ಫ್ಯಾನ್ಸ್ ಕಣ್ಣಲ್ಲಿ ನೋಡಲಾಗುತ್ತಿಲ್ಲ. ಆದರೆ ಸೀರಿಯಲ್ ಮುಗಿದಿದೆ.
ಇದರ ಬೆನ್ನಲ್ಲೇ ಈಗ ಜೈದೇವ್ ಅರ್ಥಾತ್ ನಟ ರಾಣವ್ ಗೌಡ (Ranav Gowda) ಅವರ ಮದುವೆ ಯಾವಾಗ ಎನ್ನುವ ಬಗ್ಗೆ ವೀಕ್ಷಕರು ತಲೆ ಕೆಡಿಸಿಕೊಂಡಿದ್ದಾರೆ. ಈ ಬಾರಿಯ ಜೀ ಕನ್ನಡ ಅವಾರ್ಡ್ನಲ್ಲಿ ರಾಣವ್ ಗೌಡ ಅವರಿಗೆ ಬೆಸ್ಟ್ ವಿಲನ್ ಅವಾರ್ಡ್ ಸಿಕ್ಕಿತ್ತು. ಇದು ಅವರ ಅಮೃತಧಾರೆ ಪಯಣದ ಕೊನೆಯ ಅವಾರ್ಡ್. ಅದರ ಬೆನ್ನಲ್ಲೇ ಮದುವೆಯ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇದಾಗಲೇ ಇವರ ಫ್ಯಾನ್ಸ್ಗೆ ತಿಳಿದಿರುವಂತೆ, ಹಳೆಯ ಮಲ್ಲಿಯಾಗಿ ನಟಿಸಿ ಕೊನೆಗೆ ಭಾರ್ಗವಿ ಎಲ್ಎಲ್ಬಿ ಸೀರಿಯಲ್ ಭಾರ್ಗವಿಯಾಗಿದ್ದ ರಾಧಾ ಭಗವತಿ ಜೊತೆ ಎಂಗೇಜ್ಮೆಂಟ್ ಆಗಿದ್ದು, ಇಬ್ಬರ ಮದುವೆ ಶೀಘ್ರದಲ್ಲಿ ನಡೆಯಲಿದೆ. ಇವರಿಬ್ಬರೂ ಮದುವೆಯ ಡೇಟ್ ಇನ್ನೂ ಅನೌನ್ಸ್ ಮಾಡಿಲ್ಲವಾದರೂ ಶೀಘ್ರದಲ್ಲಿಯೇ ಮದುವೆ ಎನ್ನುವುದು ತಿಳಿದಿದೆ. ರಾಧಾ ಭಗವತಿ ಅವರ ಭಾರ್ಗವಿ ಎಲ್ಎಲ್ಬಿ ಸೀರಿಯಲ್ ಮುಗಿದಿದ್ದು, ಸಿನಿಮಾದಲ್ಲಿ ಬಿಜಿಯಾಗಿದ್ದರೆ, ರಾಣವ್ ಕೂಡ ಅಮೃತಧಾರೆ ಮುಗಿಸಿದ್ದಾರೆ. ಆದ್ದರಿಂದ ಶೀಘ್ರದಲ್ಲಿಯೇ ಗುಡ್ನ್ಯೂಸ್ ಕೊಡುವ ನಿರೀಕ್ಷೆಯಲ್ಲಿದ್ದಾರೆ ಫ್ಯಾನ್ಸ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.